ಐಪಿಎಲ್ 2022 ಗೆ ಇರುವ ವಿಮಾ ಪಾಲಿಸಿ ಎಷ್ಟು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್  2022 ನಲ್ಲಿ ಹೆಚ್ಚಿನ ತಂಡಗಳು, ಹೆಚ್ಚಿನ ಆಟಗಾರರು ಮತ್ತು ಹೆಚ್ಚಿನ ಪಂದ್ಯಗಳನ್ನು ಆಡಲಾಗುವುದರಿಂದಾಗಿ ಇದಕ್ಕೆ ವಿಮಾ ಪಾಲಿಸಿ ಮಾಡಿಸಲಾಗಿದೆ. ಅಷ್ಟಕ್ಕೂ ಈ ವಿಮಾ ಪಾಲಸಿ ಮೊತ್ತವು ಭಾರತದಲ್ಲಿ ಯಾವುದೇ ಕ್ರೀಡಾಕೂಟಕ್ಕಾಗಿ ಖರೀದಿಸಿದ ಅತಿದೊಡ್ಡ ಮೊತ್ತ ಎಂದು ಹೇಳಲಾಗುತ್ತಿದೆ.

Written by - Zee Kannada News Desk | Last Updated : Apr 15, 2022, 10:21 PM IST
  • ಕಳೆದ ಆವೃತ್ತಿಯಲ್ಲಿ 4000 ಕೋಟಿ ಗಳಷ್ಟು ಇದ್ದ ಮೊತ್ತವು ಈಗ ಬರೋಬ್ಬರಿ ಶೇ 25 ರಷ್ಟು ಹೆಚ್ಚಳ ಮಾಡಲಾಗಿದೆ.
  • ಅಂದರೆ ಈ ಬಾರಿ ಇದರ ಮೊತ್ತವು 5000 ಕೋಟಿ ರೂ.ಗಳಾಗಲಿದೆ.
ಐಪಿಎಲ್ 2022 ಗೆ ಇರುವ ವಿಮಾ ಪಾಲಿಸಿ ಎಷ್ಟು ಗೊತ್ತಾ? title=

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್  2022 ನಲ್ಲಿ ಹೆಚ್ಚಿನ ತಂಡಗಳು, ಹೆಚ್ಚಿನ ಆಟಗಾರರು ಮತ್ತು ಹೆಚ್ಚಿನ ಪಂದ್ಯಗಳನ್ನು ಆಡಲಾಗುವುದರಿಂದಾಗಿ ಇದಕ್ಕೆ ವಿಮಾ ಪಾಲಿಸಿ ಮಾಡಿಸಲಾಗಿದೆ. ಅಷ್ಟಕ್ಕೂ ಈ ವಿಮಾ ಪಾಲಸಿ ಮೊತ್ತವು ಭಾರತದಲ್ಲಿ ಯಾವುದೇ ಕ್ರೀಡಾಕೂಟಕ್ಕಾಗಿ ಖರೀದಿಸಿದ ಅತಿದೊಡ್ಡ ಮೊತ್ತ ಎಂದು ಹೇಳಲಾಗುತ್ತಿದೆ.

ಕಳೆದ ಆವೃತ್ತಿಯಲ್ಲಿ 4000 ಕೋಟಿ ಗಳಷ್ಟು ಇದ್ದ ಮೊತ್ತವು ಈಗ ಬರೋಬ್ಬರಿ ಶೇ 25 ರಷ್ಟು ಹೆಚ್ಚಳ ಮಾಡಲಾಗಿದೆ.ಅಂದರೆ ಈ ಬಾರಿ ಇದರ ಮೊತ್ತವು 5000 ಕೋಟಿ ರೂ.ಗಳಾಗಲಿದೆ.

ಐಪಿಎಲ್ ವಿಮಾ ಪಾಲಿಸಿಯು ಬಿಸಿಸಿಐ, ತಂಡಗಳು, ಪ್ರಸಾರಕರು, ಪ್ರಾಯೋಜಕರು ಮತ್ತು ಪೂರಕ ಸೇವಾ ಪೂರೈಕೆದಾರರಂತಹ ವಿವಿಧ ಮಧ್ಯಸ್ಥಗಾರರನ್ನು ಒಳಗೊಂಡಿರುತ್ತದೆ, ಹವಾಮಾನ ಸಮಸ್ಯೆಗಳು, ಗಲಭೆಗಳು, ಗಾಯ ಅಥವಾ ಅನಾರೋಗ್ಯದ ಕಾರಣದಿಂದಾಗಿ ಆಟಗಾರರ ಶುಲ್ಕದ ನಷ್ಟದಂತಹ ಅನಿರೀಕ್ಷಿತ ಘಟನೆಗಳ ಖಾತೆಯಲ್ಲಿ ಯಾವುದೇ ಆದಾಯ ನಷ್ಟವನ್ನು ಭರಿಸಲು ಇದು ನೆರವಾಗುತ್ತದೆ.

ಇದನ್ನೂ ಓದಿ: KGF Chapter 2: ‘ಕೆಜಿಎಫ್ – 2’ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ..?

ಈ ಬಾರಿ 10 ತಂಡಗಳೊಂದಿಗೆ 74 ಪಂದ್ಯಗಳು ನಡೆಯುವುದರಿಂದ ಅದರಲ್ಲೂ ಈ ಬಾರಿ ಒಂದೇ ರಾಜ್ಯದಲ್ಲಿ ತಂಡಗಳು ಕೇಂದ್ರೀಕೃತವಾಗಿರುವುದರಿಂದ ಅಪಾಯಗಳೂ ಹೆಚ್ಚಿವೆ. ಈ ಬಾರಿಯ ಪಂದ್ಯಗಳನ್ನು ಮುಂಬೈ ಮತ್ತು ಪುಣೆಯಲ್ಲಿ ಮಾತ್ರ ಆಡಲಾಗುತ್ತದೆ.ಎಂದು ಅಲಯನ್ಸ್ ಇನ್ಶುರೆನ್ಸ್ ಬ್ರೋಕರ್ಸ್ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಆತುರ್ ಥಕ್ಕರ್ ಹೇಳುತ್ತಾರೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್, ನ್ಯಾಷನಲ್ ಇನ್ಶುರೆನ್ಸ್, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್, ಐಸಿಐಸಿಐ ಲೊಂಬಾರ್ಡ್, ಎಸ್‌ಬಿಐ ಜನರಲ್, ಮಣಿಪಾಲ್ ಸಿಗ್ನಾ ದಂತಹ ಕಂಪನಿಗಳು ವಿಮೆ ಪಾಲಸಿಯನ್ನು ಮಾಡಿಸಿಕೊಳ್ಳುತ್ತವೆ.

ಇದನ್ನೂ ಓದಿ:Shani: ಶನಿಯ ಶುಭ ದೆಸೆ ಭಾಗ್ಯೋದಯಕ್ಕೆ ಕಾರಣ, ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ?

2022 ರಲ್ಲಿ, ಟೆನಿಸ್ ಗ್ರ್ಯಾಂಡ್ ಸ್ಲಾಮ್ ವಿಂಬಲ್ಡನ್ COVID-19 ಕಾರಣದಿಂದಾಗಿ ಪಂದ್ಯಾವಳಿಯನ್ನು ರದ್ದುಗೊಳಿಸಿದ ನಂತರ $ 142 ಮಿಲಿಯನ್ ವಿಮಾ ಕ್ಲೈಮ್ ಅನ್ನು ಪಡೆದುಕೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News