Ajinjya Rahane Out From Playing 11 : ಐಪಿಎಲ್ 2022 ರ 25 ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅನ್ನು 7 ವಿಕೆಟ್ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಕೆಕೆಆರ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಸ್ಟಾರ್ ಆಟಗಾರನೊಬ್ಬನಿಗೆ ಅವಕಾಶ ನೀಡಿಲ್ಲ. ಈ ಆಟಗಾರ ಈಗಾಗಲೇ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾನೆ. ಅವಕಾಶ ನೀಡದಿರುವುದನ್ನ ಗಮನಿಸಿದರೆ ಈ ಆಟಗಾರನ ವೃತ್ತಿಜೀವನ ಅಂತ್ಯದಲಿದೆಯಾ ಎಂಬ ಮಾತು ಕೇಳಿಬರುತ್ತಿದೆ. ಹಾಗಿದ್ರೆ ಈ ಆಟಗಾರ ಯಾರು? ಅವಕಾಶ ಯಾಕೆ ಸಿಗುತ್ತಿಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಆಟಗಾರ ಔಟ್
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮ್ಯಾಚ್ ನಲ್ಲಿ ಅಜಿಂಕ್ಯ ರಹಾನೆಗೆ ಶ್ರೇಯಸ್ ಅಯ್ಯರ್ ಅವಕಾಶ ನೀಡಿರಲಿಲ್ಲ. ಅವರ ಸ್ಥಾನಕ್ಕೆ ಆ್ಯರೋನ್ ಫಿಂಚ್ಗೆ ಅವಕಾಶ ನೀಡಲಾಗಿದೆ. ಐಪಿಎಲ್ 2022 ರಲ್ಲಿ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡಲಾಗುತ್ತಿಲ್ಲ. ಅಷ್ಟೇ ಬ್ಯಾಟ್ ಬಿಸಿದರು ರನ್ ಗಳಿಸಲು ಪರದಾಡುವ ಪರಸ್ಥಿತಿ ಎದುರಾಗಿದೆ. ರನ್ ಗಳಿಕೆಯಿಂದ ದೂರವಿರುವ ಅವರು ಕ್ರೀಸ್ ನಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಾನೆ ಕೆಕೆಆರ್ ತಂಡಕ್ಕೆ ದೊಡ್ಡ ಹೊರೆಯಾಗಿ ಕಾಣುತ್ತಿದ್ದಾರೆ. ಇದೀಗ ಕೆಕೆಆರ್ ತಂಡದಲ್ಲಿ ಮತ್ತೆ ಅವಕಾಶ ಸಿಗುವುದು ಕಷ್ಟವಾಗಿದೆ.
ಇದನ್ನೂ ಓದಿ : MI Vs LSG : ಮೊದಲ ಪಂದ್ಯ ಗೆಲ್ಲಲು ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆಗಳು!
ಟೀಂ ಇಂಡಿಯಾದಿಂದ ರನ್ ಔಟ್
ಅಲ್ಲದೆ, ಅಜಿಂಕ್ಯ ರಹಾನೆ ಈಗಾಗಲೇ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಯ್ಕೆಗಾರರು ರಹಾನೆಗೆ ಅವಕಾಶ ನೀಡಲಿಲ್ಲ. ಭಾರತ ತಂಡದ ಉಪನಾಯಕತ್ವವನ್ನೂ ಅವರಿಂದಲೇ ಹಿಂಪಡೆಯಲಾಗಿದೆ. ಐಪಿಎಲ್ 2022 ರಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ರಹಾನೆ ಟೀಮ್ ಇಂಡಿಯಾಕ್ಕೆ ಮರಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಅವರು ಐಪಿಎಲ್ 2022 ರಲ್ಲಿ ನೀಡುತ್ತಿರುವ ಪ್ರದರ್ಶನ ನೋಡಿದ್ರೆ, ಟೀಂ ಇಂಡಿಯಾಗೆ ಮರಳುವ ಸಾಧ್ಯತೆಗಳು ತುಂಬಾ ಕಡಿಮೆ ಇದೆ ಎಂದು ಗೋಚರಿಸುತ್ತಿದೆ.
2021ರ ಐಪಿಎಲ್ನಲ್ಲೂ ಫ್ಲಾಪ್
ಅಜಿಂಕ್ಯ ರಹಾನೆ ಐಪಿಎಲ್ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದರು, ಅಲ್ಲಿ ಅವರು ಕೇವಲ ಎರಡು ಪಂದ್ಯಗಳನ್ನು ಆಡುವ ಅವಕಾಶ ಪಡೆಡಿದ್ದರು. ಅದರಲ್ಲೂ ಅದ್ಭುತ ಪ್ರದರ್ಶನ ತೋರಲು ಸಾಧ್ಯವಾಗಿಲ್ಲ, ಕೇವಲ 8 ರನ್ಗಳಷ್ಟೇ ಹೊಡೆದಿದ್ದಾರೆ. 2020 ರ ಸೀಸನ್ ನಲ್ಲಿ 9 ಪಂದ್ಯಗಳನ್ನು ಆಡಿ, 14.12 ರ ಸರಾಸರಿಯಲ್ಲಿ ಒಟ್ಟು 113 ರನ್ ಗಳಿಸಿದರು.
ಇದನ್ನೂ ಓದಿ : ಐಪಿಎಲ್ 2022 ಗೆ ಇರುವ ವಿಮಾ ಪಾಲಿಸಿ ಎಷ್ಟು ಗೊತ್ತಾ?
ಐಪಿಎಲ್ ವೃತ್ತಿಜೀವನ ಅಪಾಯದಲ್ಲಿದೆ
ಅಜಿಂಕ್ಯ ರಹಾನೆ ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದ ಪ್ರಬಲ ಆಟಗಾರನಾಗಿದ್ದರು, ಆದರೆ ಅವರ ಕಳಪೆ ಫಾರ್ಮ್ನಿಂದಾಗಿ ಅವರನ್ನು ಟೀಂನಿಂದ ಕೈಬಿಡಲಾಯಿತು. ಇದೀಗ ಕೆಕೆಆರ್ ತಂಡದ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ವೃತ್ತಿಜೀವನವು ಅಪಾಯದಲ್ಲಿದೆ. ವಿಶ್ವದ ಅತಿದೊಡ್ಡ ಲೀಗ್ ಆದ ಟಿ20 ಐಪಿಎಲ್ನಲ್ಲಿ ಅಜಿಂಕ್ಯ ರಹಾನೆ 153 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ, 31.53 ಸರಾಸರಿಯಲ್ಲಿ 3941 ರನ್ ಗಳಿಸಿದ್ದಾರೆ ಮತ್ತು 121 ಸ್ಟ್ರೈಕ್ ರೇಟ್ಗಳನ್ನು ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.