MS Dhoni retire from IPL: ವಿಶ್ವದ ಶ್ರೇಷ್ಠ ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ), ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇದೀಗ ಅವರು ಐಪಿಎಲ್‌ನಿಂದ ನಿರ್ಗಮಿಸುವ ಸಮಯ ಕೂಡ ಹತ್ತಿರವಾಗುತ್ತಿದೆಯಂತೆ. ಹೀಗೆ ಅಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅಧಿಕಾರಿಯೊಬ್ಬರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: CSK Captain: ಧೋನಿ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಈ ಆಟಗಾರನೇ ಕ್ಯಾಪ್ಟನ್‌.!


ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನ ಮುಂಬರುವ ಋತುವಿನ (ಐಪಿಎಲ್-2023) ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಪ್ರತಿಷ್ಠಿತ ಟಿ20 ಲೀಗ್‌ನ 16 ನೇ ಋತುವಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಋತುವಿನ ಮೊದಲ ಪಂದ್ಯ ಮಾರ್ಚ್ 31 ರಂದು ನಡೆಯಲಿದ್ದು, ಇದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಇನ್ನು ಅಂತಿಮ ಪಂದ್ಯವು ಮೇ 28 ರಂದು ನಡೆಯಲಿದೆ.


ಇದು ಧೋನಿಯ ಕೊನೆಯ ಸೀಸನ್!


ಕ್ರಿಕೆಟ್‌ನಲ್ಲಿ 'ಥಾಲಾ' ಎಂದು ಕರೆಯಲ್ಪಡುವ ಧೋನಿಗೆ ಇದು ಐಪಿಎಲ್‌ನ ಕೊನೆಯ ಸೀಸನ್ ಎಂದು ಹೇಳಲಾಗುತ್ತಿದೆ. ಮೇ 14 ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡುವ ಸಾಧ್ಯತೆಯಿದೆ. ಒಂದು ವೇಳೆ CSK ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾದರೆ, IPL ನಲ್ಲಿ ಧೋನಿಯ ವಿದಾಯ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ವಿರುದ್ಧವಾಗಿರಬಹುದು. ಅವರು 2008ರಿಂದ ಅಂದರೆ ಆರಂಭಿಕ ಋತುವಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ:IND vs AUS ಪಂದ್ಯದ ನಡುವೆ ಆಘಾತಕಾರಿ ಸುದ್ದಿ, ಈ ಆಟಗಾರ ಆಸ್ಪತ್ರೆಗೆ ದಾಖಲು.!


ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇನ್ಸೈಡ್ ಸ್ಪೋರ್ಟ್ ವೆಬ್‌ಸೈಟ್ ನಲ್ಲಿ ನೀಡಿದ ಮಾಹಿತಿಯಂತೆ, "ಹೌದು, ಇದು ಎಂಎಸ್ ಧೋನಿ ಅವರು ಆಟಗಾರನಾಗಿ ಆಡುವ ಕೊನೆಯ ಋತುವಾಗಿರುತ್ತದೆ. ಇದುವರೆಗೆ ನಮಗೆ ಸಿಕ್ಕಿರುವ ಮಾಹಿತಿ ಇದು. ನಿಸ್ಸಂಶಯವಾಗಿ ಇದು ಅವರ ವೈಯಕ್ತಿಕ ನಿರ್ಧಾರ. ಅವರು ನಿವೃತ್ತಿಯಾಗುವುದಾಗಿ ಅಧಿಕೃತವಾಗಿ ತಂಡದ ಆಡಳಿತಕ್ಕೆ ತಿಳಿಸಿಲ್ಲ. ಐಪಿಎಲ್ ಮತ್ತೆ ಚೆನ್ನೈಗೆ ಬರುತ್ತಿದೆ ಎಂಬುದು ಅಭಿಮಾನಿಗಳಿಗೆ ಸಂತಸದ ಸುದ್ದಿ. ಆದರೆ ಧೋನಿ ಅವರ ಕೊನೆಯ ಸೀಸನ್ ಆಡುವುದು ಒಳ್ಳೆಯ ಸುದ್ದಿಯಲ್ಲ” ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.