IPL Schedule 2023: ಐಪಿಎಲ್ 2023 ವೇಳಾಪಟ್ಟಿ ಬಿಡುಗಡೆ: ಈ ದಿನಾಂಕದಂದು ಪ್ರಾರಂಭವಾಗಲಿದೆ ಅತೀದೊಡ್ಡ ಕ್ರಿಕೆಟ್ ಲೀಗ್

IPL Schedule 2023: IPL 2023ರ ವೇಳಾಪಟ್ಟಿ ಅಂತಿಮವಾಗಿ ಹೊರಬಂದಿದೆ. ಪಂದ್ಯಾವಳಿ ನಡೆಯುವ ದಿನಾಂಕ, ಸ್ಥಳಗಳು ಮತ್ತು ತಂಡಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Written by - Bhavishya Shetty | Last Updated : Feb 17, 2023, 06:25 PM IST
    • ಮಾರ್ಚ್ 31 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭ
    • ಐಪಿಎಲ್ 2023ರ ಆರಂಭಿಕ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆಯಲಿದೆ
    • ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ 2022 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು
IPL Schedule 2023: ಐಪಿಎಲ್ 2023 ವೇಳಾಪಟ್ಟಿ ಬಿಡುಗಡೆ: ಈ ದಿನಾಂಕದಂದು ಪ್ರಾರಂಭವಾಗಲಿದೆ ಅತೀದೊಡ್ಡ ಕ್ರಿಕೆಟ್ ಲೀಗ್ title=
IPL 2023

IPL Schedule 2023: ಮಾರ್ಚ್ 31 ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಆರಂಭಿಕ ಪಂದ್ಯ ನಡೆಯಲಿದೆ. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ. ಎರಡನೇ ದಿನದ ಸ್ಪರ್ಧೆಯಲ್ಲಿ ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಎದುರಿಸಲಿದೆ. ನಂತರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.

ಏಪ್ರಿಲ್ 2 ರಂದು, ರಾಜಸ್ಥಾನ ರಾಯಲ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ತಂಡವನ್ನು ಹೈ-ಪ್ರೊಫೈಲ್ ಹಣಾಹಣಿಯಲ್ಲಿ ಎದುರಿಸಲಿದೆ.

ಇದನ್ನೂ ಓದಿ: Mohammad Shami: ಟೆಸ್ಟ್ ಪಂದ್ಯದಲ್ಲಿ ಶಮಿ ಎಸೆದ ‘ಮ್ಯಾಜಿಕ್ ಬೌಲ್’ಗೆ ಕ್ಲೀನ್ ಬೌಲ್ಡ್ ಆದ ಡೇವಿಡ್ ವಾರ್ನರ್! ವಿಡಿಯೋ ನೋಡಿ

ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2023 ರಲ್ಲಿ, 12 ಸ್ಥಳಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದ್ದು, ಹತ್ತು ಹೋಮ್ ಸ್ಥಳಗಳಲ್ಲದೆ, ಧರ್ಮಶಾಲಾ ಮತ್ತು ಗುವಾಹಟಿಯಲ್ಲಿ ಪಂದ್ಯಗಳು ನಡೆಯಲಿವೆ.

IPL 2023 ರ ಮೊದಲ ಐದು ಪಂದ್ಯಗಳ ನೋಟ:

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ - ಮಾರ್ಚ್ 31.

ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡ್ಸ್ - ಏಪ್ರಿಲ್ 1.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ - ಏಪ್ರಿಲ್ 1.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ - 2ನೇ ಏಪ್ರಿಲ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ - ಏಪ್ರಿಲ್ 2

ಮೇ 21ರಂದು ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, 18 ಡಬಲ್ ಹೆಡರ್ ಸೇರಿದಂತೆ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ..

ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎ ಗುಂಪಿನಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಬಿ ಗುಂಪಿನಲ್ಲಿವೆ.

ಇದನ್ನೂ ಓದಿ: ZEE News Sting Operation Big Impact : ಬಣ್ಣ ಬಯಲಾಗುತ್ತಿದ್ದಂತೆ BCCI ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ರಾಜೀನಾಮೆ

IPL 2023 ರ ಸ್ಥಳಗಳು ಈ ಕೆಳಗಿನಂತಿವೆ: ಅಹಮದಾಬಾದ್, ಮೊಹಾಲಿ, ಲಕ್ನೋ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ ಮತ್ತು ಧರ್ಮಶಾಲಾ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News