ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಯುವಜನರ ಐಕಾನ್ ಆಗಿ ಹೊರಹೊಮ್ಮಿರುವ ನೀರಜ್ ಚೋಪ್ರಾ ಯಾವಾಗಲೂ ತಮ್ಮ ಕೂಲ್ ಮನಸ್ಥಿತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ಕೂಲ್ ಚಾಂಪ್ ಆಗಿರುವ ನೀರಜ್ ಚೋಪ್ರಾ (Neeraj Chopra) ಮಾಧ್ಯಮಗಳಲ್ಲಿಯೂ ಕೂಡ ಎಲ್ಲಿಯೋ ತಮ್ಮ ಶಾಂತ ಮನಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ.ಆದರೆ ಈಗ ಅವರು ತಮ್ಮ ಈ ಶಾಂತ ಮನಸ್ಥಿತಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿರುವ ಅವರು ತಮಗೆ ರೊಟ್ಟಿ, ಚಹಾ ಇಷ್ಟವಂತೆ, ಇವುಗಳಿಂದಲೇ ಅವರು ಶಾಂತವಾಗಿರುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ: ಪೋಷಕರು ಜೊತೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿ ನೀರಜ್ ಚೋಪ್ರಾ ಹೇಳಿದ್ದೇನು?


ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು "ಖಾವೊ ರೋಟಿ, ಪಿಯೋ ಚಾಯ್, ಟೆನ್ಶನ್ ಕೋ ಕರೋ ಬೈ ಬೈ,"ಎಂದು ಬರೆದುಕೊಂಡಿದ್ದಾರೆ. ಅಂದರೆ ರೊಟ್ಟಿ ತಿನ್ನಿ, ಚಹಾ ಕುಡಿಯಿರಿ ನಿಮ್ಮ ಎಲ್ಲಾ ಒತ್ತಡಕ್ಕೆ ಬೈ ಬೈ ಹೇಳಿರಿ ಎನ್ನುವುದು ಇದರ ಅರ್ಥವಾಗಿದೆ.


Viral Video: ಗೋಲ್ಡನ್ ಬಾಯ್ ನೀರಜ್ ಚೋಪ್ರಾಗೆ ಅಡುಗೆ ಮಾಡಿ ಉಣಬಡಿಸಿದ ಪಂಜಾಬ್ ಸಿಎಂ..!


ನೀರಜ್ ಚೋಪ್ರಾ ಚಿನ್ನ ಪದಕ ಗೆದ್ದ ಕ್ಷಣವನ್ನು ಗೌರವಿಸಲು, ಭಾರತದ ಅಥ್ಲೆಟಿಕ್ಸ್ ಫೆಡರೇಶನ್ (AFI) ಪ್ರತಿ ವರ್ಷ ಆಗಸ್ಟ್ 7 ನ್ನು 'ರಾಷ್ಟ್ರೀಯ ಜಾವೆಲಿನ್ ಥ್ರೋ ದಿನ' ಎಂದು ಆಚರಿಸಲು ನಿರ್ಧರಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.