ಛತ್ತೀಸ್‌ಘಡ್: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ(Tokyo Olympics 2020 )ದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಡುಗೆ ಮಾಡಿ ಉಣಬಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸಾಧನೆಗೈದ ಪಂಜಾಬ್ ಕ್ರೀಡಾಪಟುಗಳಿಗೆ(Punjab athletes) ಕ್ಯಾ.ಅಮರಿಂದರ್ ಸಿಂಗ್ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ವಿಶೇಷವೆಂದರೆ ವಿವಿಧ ಬಗೆಯ ಅಡುಗೆಯನ್ನು ಸ್ವತಃ ತಾವೇ ಮಾಡಿದ್ದರು. ಅಲ್ಲದೆ ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ನೀರಜ್ ಚೋಪ್ರಾಗೆ ಪಂಜಾಬ್ ಸಿಎಂ ಊಟ ಬಡಿಸಿದ್ದಾರೆ.
ಇದನ್ನೂ ಓದಿ: T20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಈ ಪ್ರಮುಖ ಪಾತ್ರದಲ್ಲಿ MS ಧೋನಿ ಎಂಟ್ರಿ!
Privileged to have hosted our Olympians for dinner tonight. Thoroughly enjoyed cooking for them. May you continue to bring great laurels to the country. 🇮🇳 pic.twitter.com/hI2ntXtZQs
— Capt.Amarinder Singh (@capt_amarinder) September 8, 2021
ನೀರಜ್ ಚೋಪ್ರಾ(Neeraj Chopra)ಗೆ ಅಡುಗೆ ಬಡಿಸಿದ ವಿಡಿಯೋವನ್ನು ಅಮರಿಂದರ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅವರು, ‘ಬೆಳಗ್ಗೆ 11 ಗಂಟೆಯಿಂದ ಸಂಜೆ 5 ರವರೆಗೆ ಅಡುಗೆಯನ್ನು ಮಾಡಿದ್ದೇವೆ. ದೇಶಕ್ಕಾಗಿ ಗೆಲುವು ತಂದುಕೊಡಲು ನಮ್ಮ ಕ್ರೀಡಾಪಟುಗಳು ತುಂಬಾ ಶ್ರಮ ಪಟ್ಟಿದ್ದಾರೆ. ಅವರ ಜೊತೆಗಿನ ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆದಿದ್ದೇವೆ. ಅವರಿಗಾಗಿ ನಾವು ಏನೂ ಮಾಡಿದರು ಕಡಿಮೆ’ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ನೀರಜ್ ಚೋಪ್ರಾ, ‘ಪಾರ್ಟಿಯಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಖುಷಿಯಾಗಿದೆ. ಒಬ್ಬ ಮುಖ್ಯಮಂತ್ರಿಗಳು ತಮ್ಮ ಅಮೂಲ್ಯ ಸಮಯವನ್ನು ನಮಗಾಗಿ ನೀಡಿದ್ದಾರೆ. ಅವರು ಕ್ರೀಡೆ ಮತ್ತು ಕ್ರೀಡಾಪಟುಗಳ ಮೇಲೆ ಎಷ್ಟು ಗೌರವ ಮತ್ತು ಪ್ರೀತಿ ಹೊಂದಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಅವರು ನೀಡಿದ ಈ ಖುಷಿಗೆ ನಾವು ಅಬಾರಿಯಾಗಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ: IPL 2021 ಪ್ರಿಯರಿಗೆ ಬಿಗ್ಎ ನ್ಯೂಸ್ : 2ನೇ ಹಂತದ IPL ಬಗ್ಗೆ ಮಹತ್ವದ ನಿರ್ಧಾರಕ್ಕೆ ಮುಂದಾದ BCCI
From Patiala cuisine to pulao, lamb, chicken, aloo & Zarda rice, CM @capt_amarinder will prepare each of these delicacies himself to keep his promise to Punjab Olympic medal winners (& Neeraj Chopra) at the dinner he’s hosting for them tomorrow!
(file pic) pic.twitter.com/X9iOF16N5m— Raveen Thukral (@RT_MediaAdvPBCM) September 7, 2021
ಪಂಜಾಬ್ ಒಲಿಂಪಿಕ್ಸ್ ಪದಕ ವಿಜೇತರಿಗೆ ಕ್ಯಾ.ಅಮರೀಂದರ್ ಸಿಂಗ್(Amarinder Singh) ಅವರು, ಪುಲಾವ್, ಮಟನ್ ಖಾರಾ ಪಿಶೋರಿ, ಲಾಂಗ್ ಎಲೈಚಿ ಚಿಕನ್ ಮತ್ತು ದಾಲ್ ಮಸ್ರಿ, ಚಿಕನ್, ಆಲೂ ಮತ್ತು ಜರ್ದಾ ಅಕ್ಕಿ ಸೇರಿದಂತೆ ಬಾಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ತಯಾರಿಸಿದ್ದಾರೆಂದು ರವೀನ್ ತುಕ್ರಲ್ ಎಂಬುವರು ತಮ್ಮ ಟ್ವೀಟ್ ನ್ಲಲಿ ಉಲ್ಲೇಖಿಸಿದ್ದಾರೆ. ಪಂಜಾಬ್ ಸಿಎಂ ಈ ಹಿಂದೆ ನಡೆದ ಸನ್ಮಾನ ಸಮಾರಂಭದಲ್ಲಿ ಪದಕ ವಿಜೇತರಿಗೆ ತಾವು ಭೋಜನಕ್ಕೆ ಆಹಾರ ತಯಾರಿಸುವುದಾಗಿ ಭರವಸೆ ನೀಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.