RCB Fan Poster: ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುವವರೆಗೂ ಮದುವೆಯಾಗೋಲ್ಲ- ಮಹಿಳಾ ಅಭಿಮಾನಿಯ ಪೋಸ್ಟರ್ ವೈರಲ್
IPL 2022 ರ 12 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾದವು.ಈ ಪಂದ್ಯದಲ್ಲಿ, ಮಹಿಳಾ ಅಭಿಮಾನಿಯೊಬ್ಬರು ಪೋಸ್ಟರ್ ಹಿಡಿದಿದ್ದು, ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು: ವಿಶ್ವದಾದ್ಯಂತ ಕ್ರಿಕೆಟ್ ಉತ್ಸವವಾಗಿಯೇ ಮನ್ನಣೆ ಪಡೆದಿರುವ ಕ್ರಿಕೆಟ್ ಹಬ್ಬ ಐಪಿಎಲ್ನಲ್ಲಿ ಆರ್‌ಸಿಬಿ ತಂಡ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಪ್ರಸ್ತುತ, ಐಪಿಎಲ್ 2022 ರ 22 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಈ ಪಂದ್ಯದಲ್ಲಿ, ಆರ್‌ಸಿಬಿ ತಂಡದ ಮಹಿಳಾ ಅಭಿಮಾನಿಯೊಬ್ಬರು ಪೋಸ್ಟರ್ ಅನ್ನು ಕೈಯಲ್ಲಿ ಹಿಡಿದಿದ್ದರು. ಇದೀಗ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪಂದ್ಯದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಪೋಸ್ಟರ್‌ನೊಂದಿಗೆ ಮೈದಾನಕ್ಕೆ ತಲುಪಿದರು., ಅದರಲ್ಲಿ "ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ" ಎಂದು ಬರೆಯಲಾಗಿದೆ. ಪಂದ್ಯದ ವೇಳೆ ಈ ಮಹಿಳಾ ಅಭಿಮಾನಿಯ ಪೋಸ್ಟರ್ ಎಲ್ಲರ ಗಮನ ಸೆಳೆಯಿತು. ಇದೀಗ ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ- CSK vs RCB, IPL 2022: ಆರ್‌ಸಿಬಿಗೆ ವಿರೋಚಿತ ಸೋಲು, ಖಾತೆ ತೆರೆದ ಚೆನ್ನೈ
ಈ ಋತುವಿನಲ್ಲಿ ಇದುವರೆಗೂ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ:
ಐಪಿಎಲ್ 2022 ರಲ್ಲಿ, ಆರ್‌ಸಿಬಿ ತಂಡವು ನಾಲ್ಕು ಪಂದ್ಯಗಳನ್ನು ಆಡಿದೆ ಮತ್ತು ಮೂರು ಪಂದ್ಯಗಳನ್ನು ಗೆದ್ದಿದೆ. ಈ ಬಾರಿ ಆರ್‌ಸಿಬಿ ತಂಡದ ಕಮಾಂಡ್ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಕೈಯಲ್ಲಿದೆ. ಅವರ ಬಳಿ ಸೂಪರ್ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ದಿನೇಶ್ ಕಾರ್ತಿಕ್ ಇದ್ದಾರೆ. ಇದಲ್ಲದೆ ಉತ್ತಮ ಬೌಲರ್ ಗಳನ್ನೂ ಸಹ ತಂಡ ಹೊಂದಿದೆ.
ಇದನ್ನೂ ಓದಿ- IPL 2022: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ ಈಗ ಐಪಿಎಲ್ ಹೀರೋ!
ವಿಪರ್ಯಾಸವೆಂದರೆ ಬಲಿಷ್ಠ ತಂಡವಾಗಿದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಒಂದೇ ಒಂದು ಬಾರಿಯೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಆದಾಗ್ಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ತಂಡದ ಬಗ್ಗೆ ಕೊಂಚವೂ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ಈ ಬಾರಿಯಾದರೂ ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆಲ್ಲಬಹುದು ಎಂಬ ಬೆಟ್ಟದಷ್ಟು ಆಸೆ ಬೆಂಗಳೂರು ತಂಡದ ಅಭಿಮಾನಿಗಳದ್ದಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.