ಕೊಹ್ಲಿ 71ನೇ ಶತಕ ಬಾರಿಸುವವರೆಗೆ ಡೇಟಿಂಗ್ ಮಾಡುವುದಿಲ್ಲ: ಆರ್‌ಸಿಬಿ ಫ್ಯಾನ್ ಗರ್ಲ್

"ನಾನು ವಿರಾಟ್ ಅವರು  71 ನೇ ಶತಕ ಬಾರಿಸುವವರೆಗೆ ಡೇಟಿಂಗ್ ಮಾಡುವುದಿಲ್ಲ" ಎಂಬ ಪೋಸ್ಟರ್‌ನ್ನು ಯುವತಿಯೊಬ್ಬಳು ಪ್ರದರ್ಶಿಸಿದ್ದಳು.   

Written by - Bhavishya Shetty | Last Updated : Apr 11, 2022, 03:32 PM IST
  • "ಕೊಹ್ಲಿ 71ನೇ ಶತಕ ಬಾರಿಸುವವರೆಗೆ ಡೇಟಿಂಗ್ ಮಾಡುವುದಿಲ್ಲ"
  • ಪೋಸ್ಟರ್‌ ಪ್ರಕಟಿಸುವ ಮೂಲಕ ಎಲ್ಲರ ಗಮನ ಸೆಳೆದ ಅಭಿಮಾನಿ
  • RCB-MI ನಡುವಣ ಪಂದ್ಯದಲ್ಲಿ ಕಂಡುಬಂದ ದೃಶ್ಯ
ಕೊಹ್ಲಿ 71ನೇ ಶತಕ ಬಾರಿಸುವವರೆಗೆ ಡೇಟಿಂಗ್ ಮಾಡುವುದಿಲ್ಲ: ಆರ್‌ಸಿಬಿ ಫ್ಯಾನ್ ಗರ್ಲ್ title=
Rcb Fangirl Poster

ಮುಂಬೈ: ಕ್ರಿಕೆಟ್‌ ಲೋಕದಲ್ಲಿ ಅನೇಕ ದಿಗ್ಗಜರಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ಆಟಗಾರನಿಗಾಗಿ ಅದೆಷ್ಟೋ ತ್ಯಾಗಗಳನ್ನು ಸಹ ಮಾಡಿದವರಿದ್ದಾರೆ. ಇದೀಗ ಅಂತಹದ್ದೇ ಸಾಲಿಗೆ ವಿರಾಟ್‌ ಕೊಹ್ಲಿ ಫ್ಯಾನ್‌ ಒಬ್ಬರು, ಸೇರಿದ್ದು, ʼಕೊಹ್ಲಿ 71ನೇ ಶತಕದ ಮೈಲಿಗಲ್ಲು ತಲುಪವವರೆಗೂ ತಾನು ಡೇಟಿಂಗ್ ಮಾಡುವುದಿಲ್ಲʼ ಎಂದು ಪೋಸ್ಟರ್‌ ಪ್ರಕಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಇದನ್ನು ಓದಿ: IPL 2022: ಲಕ್ನೋ ವಿರುದ್ಧ ರಾಜಸ್ತಾನ ರಾಯಲ್ಸ್ ಗೆ 3 ರನ್ ಗಳ ರೋಚಕ ಜಯ

ಏ.9ರಂದು ಮುಂಬೈನಲ್ಲಿ ನಡೆದ IPL-2022ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಈ ದೃಶ್ಯ ಕಂಡುಬಂದಿತ್ತು. "ನಾನು ವಿರಾಟ್ ಅವರು  71 ನೇ ಶತಕ ಬಾರಿಸುವವರೆಗೆ ಡೇಟಿಂಗ್ ಮಾಡುವುದಿಲ್ಲ" ಎಂಬ ಪೋಸ್ಟರ್‌ನ್ನು ಯುವತಿಯೊಬ್ಬಳು ಪ್ರದರ್ಶಿಸಿದ್ದಳು. ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿವೆ.

ಇದನ್ನು ಓದಿ: IPL-2022: ಇಂದು ಹೈದರಾಬಾದ್‌ಗೆ ಸವಾಲು ನೀಡಲಿದೆ ಗುಜರಾತ್ ಟೈಟನ್ಸ್

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಆ ಅಭಿಮಾನಿಗಳು ಅವರ 71ನೇ ಶತಕದ ನಿರೀಕ್ಷೆಯಲ್ಲಿದ್ದಾರೆ. 2019ರಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊನೆಯದಾಗಿ ಶತಕ ಬಾರಿಸಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News