IPL 2022 : ಪಂದ್ಯ ಸೋತರೂ ವಿಶಿಷ್ಟ ದಾಖಲೆ ಬರೆದ ಹಾರ್ದಿಕ್‌

ಹಾರ್ದಿಕ್ ಪಾಂಡ್ಯ ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ. 

Written by - Bhavishya Shetty | Last Updated : Apr 12, 2022, 09:11 AM IST
  • ವಿಶಿಷ್ಟ ದಾಖಲೆ ಬರೆದ ಹಾರ್ದಿಕ್‌ ಪಾಂಡ್ಯ
  • ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್
  • 1,046 ಎಸೆತಗಳಲ್ಲಿ 100 ಸಿಕ್ಸ್‌ ಬಾರಿಸಿದ ಪಾಂಡ್ಯ
IPL 2022 : ಪಂದ್ಯ ಸೋತರೂ ವಿಶಿಷ್ಟ ದಾಖಲೆ ಬರೆದ ಹಾರ್ದಿಕ್‌   title=
Hardik Pandya

ಮುಂಬೈ: ಮಹಾರಾಷ್ಟ್ರದ ಡಾ. ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಗುಜರಾತ್‌ ಮಣಿದರೂ ಸಹ ತಂಡದ ನಾಯಕ ದಾಖಲೆಯೊಂದನ್ನು ಬರೆದಿದ್ದಾರೆ. 

ಇದನ್ನು ಓದಿ: ಈ ರಾಜ್ಯದಲ್ಲಿ 4.3 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದ ಸರ್ಕಾರಿ ಸಂಸ್ಥೆ!

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿದೆ. ಇದೀಗ ಹಾರ್ದಿಕ್ ಪಾಂಡ್ಯ ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ  ರಿಷಭ್ ಪಂತ್ 1,224 ಎಸೆತಗಳಲ್ಲಿ 100 ಸಿಕ್ಸರ್‌ ಹೊಡೆದು ಸಾಧನೆ ಮಾಡಿದ್ದರು. ಆದರೆ ಆ ದಾಖಲೆಯನ್ನು ಹಾರ್ದಿಕ್  ಮುರಿದಿದ್ದು, 1,046 ಎಸೆತಗಳಲ್ಲಿ 100 ಸಿಕ್ಸ್‌ ಬಾರಿಸಿ ರಿಷಬ್‌ ಸಾಧನೆಯನ್ನು ಹಿಮ್ಮೆಟ್ಟಿಸಿದ್ದಾರೆ.

ಕ್ರಿಸ್ ಗೇಲ್ ದಾಖಲೆ: 
ಇನ್ನು ವೆಸ್ಟ್‌ಇಂಡೀಸ್‌ನ ದೈತ್ಯ ಬ್ಯಾಟರ್ ಕ್ರಿಸ್ ಗೇಲ್, ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಗೇಲ್ ಒಟ್ಟು 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಎಬಿ ಡಿ ವಿಲಿಯರ್ಸ್ 251 ಸಿಕ್ಸರ್ ಗಳಿಸಿದ್ದಾರೆ. ಭಾರತೀಯರ ಪೈಕಿ ರೋಹಿತ್ ಶರ್ಮಾ 231 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 

ಇದನ್ನು ಓದಿ: SRH vs GT, IPL 2022: ಗುಜರಾತ್ ಟೈಟಾನ್ಸ್‌ಗೆ ಸೋಲಿನ ರುಚಿ ತೋರಿಸಿದ ಹೈದರಾಬಾದ್

ಹೈದರಾಬಾದ್‌ಗೆ ಗೆಲುವು: 
ಇನ್ನು ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ನಿಗದಿತ 20 ಓವರ್‍ ಗಳಲ್ಲಿ 7 ವಿಕೆಟ್‍ ಕಳೆದುಕೊಂಡು 162 ರನ್‍ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಹೈದರಾಬಾದ್ 19.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಭರ್ಜರಿ ಗೆಲುವು ಸಾಧಿಸಿದೆ. 

ಸತತ 3 ಗೆಲುವು ಸಾಧಿಸಿದ್ದ ಗುಜರಾತ್ ತಂಡಕ್ಕೆ ಹೈದರಾಬಾದ್ ಸೋಲಿನ ರುಚಿ ತೋರಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News