ಒಂಬತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಇದೀಗ ಭರ್ಜರಿ ತಯಾರಿ ನಡೆಯುತ್ತಿದೆ. ತಮಗೆ ಬೇಕಾದ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಪ್ರೋ ಕಬಡ್ಡಿ ಲೀಗ್‌ನ ಆಯೋಜಕರು ಅನುಮತಿ ನೀಡಿದ್ದು, ಅದರ ಜೊತೆಗೆ ಗಡುವನ್ನೂ ಸಹ ನೀಡಿದ್ದರು. ಈ ಪ್ರಕ್ರಿಯೆ ನಡೆಸುತ್ತಿದ್ದ ಫ್ರಾಂಚೈಸಿ ಇದೀಗ ಆಘಾತಕಾರಿ ಸುದ್ದಿಯೊಂದನ್ನು ಇದೀಗ ನೀಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯುನಿಕಾರ್ನ್ ಕಂಪನಿಗಳಲ್ಲಿ ಭಾರತೀಯರೇ ಮೇಲುಗೈ: ಯುಎಸ್‌ ಸಮೀಕ್ಷೆಯಿಂದ ಬಯಲು


ಹೌದು ಸ್ಟಾರ್‌ ಕಬಡ್ಡಿ ಆಟಗಾರರಾದ ಯುಪಿ ಯೋಧ ತಂಡದ ಪ್ರದೀಪ್‌ ನರ್ವಾಲ್‌ ಮತ್ತು ಬೆಂಗಳೂರು ಬುಲ್ಸ್‌ ತಂಡದ ಪವನ್ ಕುಮಾರ್ ಶೆರಾವತ್ ಅವರನ್ನು ಫ್ರಾಂಚೈಸಿಗಳು ಕೈಬಿಟ್ಟಿವೆ. ಈಗಾಗಲೇ ತಮಗೆ ಬೇಕಾಗಿರುವ ಆಟಗಾರರನ್ನು ಉಭಯ ತಂಡಗಳು ರೀಟೈನ್‌ ಮಾಡಿಕೊಂಡಿವೆ. ಆದರೆ ಈ ಇಬ್ಬರು ಆಟಗಾರರನ್ನು ರಿಲೀಸ್‌ ಮಾಡಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ. 


ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರು:
ಮಹೇಂದರ್‌ ಸಿಂಗ್‌, ಸೌರಭ್‌ ನಂದಲ್‌, ಜಿ.ಬಿ.ಮೋರೆ, ಮಯೂರ್‌, ಅಭಿಷೇಕ್ ಸಿಂಗ್, ಫಜಲ್ ಅಟ್ರಾಚಲಿ, ಮಂಜೀತ್ ಚಿಲ್ಲರ್, ಸುರೇಂದರ್ ನಾಡಾ, ದೀಪಕ್ ನಿವಾಸ್ ಹೂಡಾ, ರಾಹುಲ್ ಚೌಧರಿ, ಸಿದ್ದಾರ್ಥ್ ದೇಸಾಯಿ ಮತ್ತು ರೋಹಿತ್ ಕುಮಾರ್ ಅವರಂತಹ ತಾರಾ ಆಟಗಾರರು ಈ ಬಾರಿಯ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ಆಟಗಾರರನ್ನು ಫ್ರಾಂಚೈಸಿಗಳು ತಮ್ಮ ತಂಡದಿಂದ ರಿಲೀಸ್ ಮಾಡಿವೆ.


ಇನ್ನು ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 5 ಹಾಗೂ 6ರಂದು ಮುಂಬೈನಲ್ಲಿ ನಡೆಯಲಿದೆ. ಇನ್ನು ಆಟಗಾರರನ್ನು ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. ಎ ವಿಭಾಗದ ಆಟಗಾರರಿಗೆ 30 ಲಕ್ಷ, ಬಿ ವಿಭಾಗದವರಿಗೆ 20 ಲಕ್ಷ, ಸಿ ವಿಭಾಗದವರಿಗೆ 10 ಲಕ್ಷ ರೂ. ಮತ್ತು ಡಿ ವಿಭಾಗದವರಿಗೆ 6 ಲಕ್ಷ ರೂ. ನಿಗದಿ ಮಾಡಲಾಗಿದೆ.


ಇದನ್ನೂ ಓದಿ: Shravan 2022: ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಇಂದೇ ಈ ಉಪಾಯ ಮಾಡಿ


ಇನ್ನು ಗರಿಷ್ಠ ಮೂಲಬೆಲೆ 30 ಲಕ್ಷ ರರೂ. ಇದ್ದು, ಕನಿಷ್ಠ ಮೂಲ ಬೆಲೆ 6 ಲಕ್ಷ ರೂ ಎಂದು ನಿಗದಿ ಪಡಿಸಲಾಗಿದೆ. ಇವಿಷ್ಟೇ ಅಲ್ಲದೆ, ಇತ್ತೀಚೆಗೆಯಷ್ಟೇ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆದ ತಂಡಗಳಲ್ಲಿದ್ದ ಒಟ್ಟು 24 ಆಟಗಾರರಿಗೂ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.