Shravan 2022 Friday Remedies - ಸಂಪತ್ತಿನ ಅಧಿದೇವತೆ ಎಂದೇ ಕರೆಯಲಾಗುವ ತಾಯಿ ಲಕ್ಷ್ಮಿ ಯಾರ ಮೇಲೆ ತನ್ನ ಕೃಪಾಕಟಾಕ್ಷ ಬೀರುತ್ತಾಳೆಯೋ ಆ ವ್ಯಕ್ತಿಯ ದಿನಗಳು ಬದಲಾಗಲು ಸಮಯವೇ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ಶ್ರಾವಣ ಶುಕ್ರವಾರದಂದು ಶಿವ ಶಂಭುವಿನ ಜೊತೆಗೆ ತಾಯಿ ಲಕ್ಷ್ಮಿ ಆರಾಧನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶುಕ್ರವಾರವನ್ನು ಶುಕ್ರನ ದಿನ ಎಂದೂ ಪರಿಗಣಿಸಲಾಗುತ್ತದೆ. ಶ್ರಾವಣ ಶುಕ್ರವಾರದ ದಿನ ಧರ್ಮಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಹೇಳಲಾಗಿದೆ. ಈ ದಿನ ಏಲಕ್ಕಿಯ ಸಹಾಯದಿಂದ ಮಾಡಲಾಗುವ ಕೆಲ ಉಪಾಯಗಳಿಂದ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇಂದು 29ನೇ ಜುಲೈ 2022, ಶ್ರಾವಣ ಮಾಸದ ಮೊದಲ ಶುಕ್ರವಾರ. ಈ ದಿನ ಏಳಕ್ಕಿಯಿಂದ ಮಾಡಲಾಗುವ ಒಂದು ಉಪಾಯ ನಿಮ್ಮ ಭಾಗ್ಯವನ್ನೇ ಬದಲಾಯಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ
ಉದ್ಯೋಗ ಪ್ರಗತಿ
ಎಷ್ಟೋ ಸಲ ಕಷ್ಟಪಟ್ಟು ಕೆಲಸ ಮಾಡಿದರೂ ಉದ್ಯೋಗದಲ್ಲಿ ಬಡ್ತಿ ಸಿಗುವುದಿಲ್ಲ. ಕಾರ್ಯಸಿದ್ಧಿ ಪ್ರಾಪ್ತಿಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರವಾರದಂದು ಹಸಿರು ಬಟ್ಟೆಯಲ್ಲಿ 4 ಏಲಕ್ಕಿಗಳನ್ನು ಕಟ್ಟಿಕೊಳ್ಳಿ. ಅದನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿ. ನಂತರ ಮಾರನೆಯದಿನ ಬೆಳಗ್ಗೆ ಅದನ್ನು ಯಾರಿಗಾದರೂ ದಾನ ಮಾಡಿ. ಐದು ಶುಕ್ರವಾರದವರೆಗೆ ನಿರಂತರವಾಗಿ ಈ ಉಪಾಯವನ್ನು ಅನುಸರಿಸಿ. ಇದು ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.
ಹಣ ಲಾಭ
ಕೈತುಂಬಾ ದುಡಿದರೂ ಕೆಲವೊಮ್ಮೆ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ. ಇದಕ್ಕಾಗಿ ಏಲಕ್ಕಿಯ ಉಪಾಯ ಪರಿಣಾಮಕಾರಿಯಾಗಿದೆ. ಶುಕ್ರವಾರ, 5 ಸಣ್ಣ ಏಲಕ್ಕಿಗಳನ್ನು ಪರ್ಸ್ ಅಥವಾ ಹಣವಿಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಉಳಿತಾಯವೂ ಆಗುತ್ತದೆ ಮತ್ತು ಸಂಪತ್ತು ಕೂಡ ವೃದ್ಧಿಯಾಗುತ್ತದೆ.
ಮದುವೆಯಲ್ಲಿ ವಿಳಂಬ
ವಿವಾಹಿತ ಯುವಕರ ವಿವಾಹದಲ್ಲಿ ಒಂದುವೇಳೆ ಅಡೆತಡೆಗಳು ಎದುರಗುತ್ತಿದ್ದರೆ ಅಥವಾ ಪದೇ ಪದೇ ಸಂಬಂಧ ಮುರಿದುಹೋಗುತ್ತಿದ್ದರೆ, ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರದಂದು, ಶಿವಾಳಯದಲ್ಲಿರುವ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಮತ್ತು ಎರಡು ಏಲಕ್ಕಿಗಳನ್ನು ಬೆರೆಸಿದ 5 ವಿಧದ ಸಿಹಿತಿಂಡಿಗಳನ್ನು ಅರ್ಪಿಸಿ. ಹಸುವಿನ ತುಪ್ಪದ ದೀಪವನ್ನು ಬೆಳಗಿ ಮತ್ತು ಶಿವ-ಪಾರ್ವತಿಯ ಮುಂದೆ ಶಿವ ಚಾಲೀಸವನ್ನು ಪಠಿಸಿ. ಇದರಿಂದ ವಿವಾಹದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಬರುವ ಅಡೆತಡೆಗಳು ದೂರಾಗುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ-Astro Tips: ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ನೋಡಿ ಪರಿಹಾರ
ನಿರ್ವಿಘ್ನ ಕೆಲಸ ಕಾರ್ಯಗಳು ಪೂರ್ಣಗೊಳ್ಳಲು ಈ ಉಪಾಯ ಅನುಸರಿಸಿ
ನೀವು ಯಾವುದಾದರು ಶುಭ ಕಾರ್ಯಕ್ಕೆ ಹೋಗುತ್ತಿದ್ದರೆ, ಹೋಗುವ ಮುನ್ನ ಕೈಯಲ್ಲಿ ಮೂರು ಏಲಕ್ಕಿಗಳನ್ನು ತೆಗೆದುಕೊಂಡು ಶ್ರೀ ಶ್ರೀ ಎಂದು ಹೇಳಿ ನಂತರ ಅವುಗಳನ್ನು ತಿಂದು ಮನೆಯಿಂದ ಹೊರಡಿ. ನೀವು ಮಾಡಬೇಕಿರುವ ಕಾರ್ಯ ನಿರ್ವಿಘ್ನ ನೆರವೇರುತ್ತದೆ ಎನ್ನಲಾಗುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.