ಕಾಮನ್‌ವೆಲ್ತ್ ಗೇಮ್ಸ್ 2022 ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪಿವಿ ಸಿಂಧು ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ 2-0 ಮುನ್ನಡೆ ಸಾಧಿಸಿದ್ದಾರೆ.  ಈ ಮೂಲಕ ಸಿಂಧು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇನ್ನು ಸಿಂಧು ಭಾರತಕ್ಕೆ ಚಿನ್ನ ತರಲು ನಾಳೆ ಹೋರಾಟ ನಡೆಸಲಿದ್ದು, ಒಂದು ಪದಕ ಖಚಿತವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs WI: ಮುಂದುವರೆದ ರೋ‘ಹಿಟ್’ ಪಾರುಪತ್ಯ! ಮತ್ತೊಂದು ಸರಣಿ ಗೆದ್ದ ಟೀಂ ಇಂಡಿಯಾ


ಇನ್ನೊಂದೆಡೆ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ನ್ಯೂಜಿಲೆಂಡ್ ವಿರುದ್ಧ ಹೋರಾಡುತ್ತಿದ್ದು, 1-0 ಮುನ್ನಡೆ ಸಾಧಿಸಿದೆ. ಪುಜಿಲಿಸ್ಟ್‌ಗಳಾದ ಅಮಿತ್ ಪಂಘಲ್, ನಿಖತ್ ಜರೀನ್, ನಿತು ಗಂಗಾಸ್ ಮತ್ತು ಸಾಗರ್ ಅಹ್ಲಾವತ್ ಅವರು ಸಹ ತಮ್ಮ ಅಂತಿಮ ಪಂದ್ಯಗಳನ್ನು ಆಡಿ ಚಿನ್ನದ ಪದಕವನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. 


​ಇದನ್ನೂ ಓದಿ: CWG 2022: ಪ್ಯಾರಾ ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾವಿನಾಬೆನ್ ಪಟೇಲ್


ಸದ್ಯ ಭಾರತವು ಮಹಿಳಾ ಕ್ರಿಕೆಟ್ ಫೈನಲ್‌ನಲ್ಲಿ ಚಿನ್ನಕ್ಕಾಗಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸದ್ಯ ಭಾರತ 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚು ಸೇರಿದಂತೆ 40 ಪದಕಗಳನ್ನು ಗೆದ್ದಿದ್ದು, ಮೆಡಲ್‌ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.