ಚಿಟಿಕೆಯಲ್ಲಿ ಪಂದ್ಯವನ್ನೇ ಬದಲಿಸಬಲ್ಲ ಈ ಆಟಗಾರ ವಿಶ್ವಕಪ್’ಗೆ ಎಂಟ್ರಿ! ಟೀಂ ಇಂಡಿಯಾಗೆ ಸಂತಸವೋ ಸಂತಸ
Rishab Pant Health Update: ಟೀಂ ಇಂಡಿಯಾಗೆ ಒಂದಲ್ಲ ಹಲವಾರು ಬಾರಿ ಐತಿಹಾಸಿಕ ಜಯ ತಂದುಕೊಟ್ಟ ಡ್ಯಾಶಿಂಗ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ರಿಷಬ್ ಪಂತ್ ಚೇತರಿಕೆ ವೇಗವಾಗಿ ಸಾಗುತ್ತಿದೆ. ಇದನ್ನು ಕಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಅಚ್ಚರಿ ವ್ಯಕ್ತಪಡಿಸಿದೆ.
Rishab Pant Health Update: ಟೀಂ ಇಂಡಿಯಾದ ಹಲವು ಬಿಗ್ ಮ್ಯಾಚ್ ವಿನ್ನಿಂಗ್ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಭಾರತ ತಂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತ ಕೂಡ ಈ ವರ್ಷಾಂತ್ಯದಲ್ಲಿ ತನ್ನದೇ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಆಡಬೇಕಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ.
ಇದನ್ನೂ ಓದಿ: Virat Kohli vs Naveen ul haq: ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಕೊನೆಗೂ ಸತ್ಯ ಬಾಯ್ಬಿಟ್ಟ ನವೀನ್! ಏನಂದ್ರು ಗೊತ್ತಾ?
ಟೀಂ ಇಂಡಿಯಾಗೆ ಒಂದಲ್ಲ ಹಲವಾರು ಬಾರಿ ಐತಿಹಾಸಿಕ ಜಯ ತಂದುಕೊಟ್ಟ ಡ್ಯಾಶಿಂಗ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ರಿಷಬ್ ಪಂತ್ ಚೇತರಿಕೆ ವೇಗವಾಗಿ ಸಾಗುತ್ತಿದೆ. ಇದನ್ನು ಕಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಅಚ್ಚರಿ ವ್ಯಕ್ತಪಡಿಸಿದೆ. ಇಎ ಸ್ ಪಿ ಎನ್ ಕ್ರಿಕ್ ಇನ್ಫೋ ವರದಿಯಲ್ಲಿ, ರಿಷಬ್ ಪಂತ್ ಶೀಘ್ರವಾಗಿ ಚೇತರಿಸಿಕೊಂಡಿರುವುದು ಬಿಸಿಸಿಐ ಮತ್ತು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ವೈದ್ಯಕೀಯ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಗಂಭೀರವಾದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಂತರ, ಪಂತ್ ಈಗ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.
ವಿಶ್ವಕಪ್ 2023ಕ್ಕೆ ಹಿಂತಿರುಗುತ್ತಿದ್ದಾರೆಯೇ?
ಪಂತ್ ಅವರ ಚೇತರಿಕೆ ವೇಗವಾಗಿ ನಡೆಯುತ್ತಿದೆ. ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಅವರನ್ನು ಸಿದ್ಧಪಡಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ ಎಂದು ಇ ಎಸ್ ಪಿ ಎನ್ ಕ್ರಿಕ್ ಇನ್ಫೋ ವರದಿಯಲ್ಲಿ ತಿಳಿಸಲಾಗಿದೆ. ಚೇತರಿಕೆ ಪ್ರಕ್ರಿಯೆಯು ಬಹಳ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. 2023ರಲ್ಲಿ ಯಾವುದೇ ಕ್ರಿಕೆಟ್ ಆಡದಿರುವ ನಿರೀಕ್ಷೆ ಪಂತ್ ಮೇಲೆ ಪರಿಣಾಮ ಬೀರಿಲ್ಲ. ಇತ್ತೀಚೆಗಷ್ಟೇ ಊರುಗೋಲು ಇಲ್ಲದೆ ನಡೆಯಲು, ಆಸರೆಯಿಲ್ಲದೆ ಮೆಟ್ಟಿಲು ಹತ್ತಲು ಆರಂಭಿಸಿದ್ದಾರೆ. ಅದರ ವಿಡಿಯೋ ಕೂಡ ಹೊರಬಿದ್ದಿದೆ.
ಇದನ್ನೂ ಓದಿ: “ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲು ಬಿಸಿಸಿಐ ಮಾಡಿದ ಈ ತಪ್ಪೇ ಕಾರಣ!” ಪಬ್ಲಿಕ್’ನಲ್ಲಿಯೇ ನಿಂದಿಸಿದ ಅಂಬಾಟಿ ರಾಯುಡು
ಐಸಿಸಿ ಟ್ರೋಫಿಗಾಗಿ ಕಾಯುತ್ತಿರುವ ಟೀಂ ಇಂಡಿಯಾ!
ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಕಾಯುತ್ತಿದೆ. ಮುಂಬರುವ ಏಕದಿನ ವಿಶ್ವಕಪ್ ನಲ್ಲಿ ಈ ಕನಸನ್ನು ನನಸು ಮಾಡಿಕೊಳ್ಳಲು ತಂಡಕ್ಕೆ ಸುವರ್ಣಾವಕಾಶವಿದೆ. ಏಕೆಂದರೆ ಈ ವರ್ಷ ಈ ಟೂರ್ನಿ ಭಾರತದಲ್ಲಿ ನಡೆಯಲಿದೆ. ODI ಮಾದರಿಯ ಈ ಪಂದ್ಯಾವಳಿಯು ಭಾರತದಲ್ಲಿ ಅಕ್ಟೋಬರ್ ನಿಂದ ನವೆಂಬರ್ ವರೆಗೆ ನಡೆಯಲಿದೆ. ಈ ವಿಶ್ವಕಪ್ ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ 8 ತಂಡಗಳು ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರೆ 2 ತಂಡಗಳು ವಿಶ್ವಕಪ್ ಅರ್ಹತಾ ಪಂದ್ಯಗಳಿಂದ ಮುಖಾಮುಖಿಯಾಗಲಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ