Virat Kohli vs Naveen ul haq: ಐಪಿಎಲ್ 2023 ರಲ್ಲಿ ಆರ್ ಸಿ ಬಿಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನ ನವೀನ್-ಉಲ್-ಹಕ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಪಂದ್ಯ ಮುಗಿದ ನಂತರ ಇಬ್ಬರೂ ಆಟಗಾರರು ಕೈಕುಲುಕುತ್ತಿದ್ದರು. ಆಗ ನವೀನ್ ವಿರಾಟ್ ಮುಖಾಮುಖಿಯಾದರು. ಇದಾದ ನಂತರ ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಕೂಡ ಈ ಜಗಳಕ್ಕೆ ಮಧ್ಯಪ್ರವೇಶ ಮಾಡಿದರು, ಇದಾದ ನಂತರ ವಿರಾಟ್ ಮತ್ತು ಗಂಭೀರ್ ನಡುವೆ ವಾಗ್ವಾದ ನಡೆಯಿತು. ಅಂದು ನಡೆದ ಘಟನೆಯ ಸತ್ಯಾಂಶವನ್ನು ಇಂದು ಸ್ವತಃ ನವೀನ್ ಅವರೇ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Aadhar card update : ಉಚಿತ ʼಆಧಾರ್ ಕಾರ್ಡ್ʼ ಅಪ್‌ಡೇಟ್‌ಗೆ ನಾಳೆ ಕೊನೆಯ ದಿನಾಂಕ..!
ಕೈಕುಲುಕುವ ವಿಚಾರವಾಗಿ ಮಾತನಾಡಿದ ನವೀನ್, “ಮ್ಯಾಚ್ ಮುಗಿದ ಬಳಿಕ ಹಸ್ತಲಾಘವ ಮಾಡುವ ವೇಳೆ ವಿರಾಟ್ ಕೊಹ್ಲಿಯೇ ಜಗಳ ಶುರು ಹಚ್ಚಿಕೊಂಡಿದ್ದರು. ನಾನು ಯಾವತ್ತೂ ಯಾರನ್ನೂ ಕೆಣಕುವ ಯತ್ನ ಮಾಡಿರಲಿಲ್ಲ. ಅಂಡರ್ 16 ಕ್ರಿಕೆಟ್ ಆಡುವಾಗಿಂದಲೂ ಯಾರನ್ನೂ ಮೈದಾನದಲ್ಲಿ ಕೆಟ್ಟದಾಗಿ ಬೈದಿಲ್ಲ. ಆದರೆ ನನ್ನನ್ನು ಯಾರಾದರೂ ಬೈದರೆ ಖಂಡಿತವಾಗಿಯೂ ಸುಮ್ಮನಿರುವುದಿಲ್ಲ. ಅದು ದೊಡ್ಡ ಅಥವಾ ಸಣ್ಣ ಆಟಗಾರನಾಗಿರಲಿ. ನನ್ನನ್ನು ಬೈದರೆ ನಾನು ಸುಮ್ಮನಿರಲ್ಲ” ಎಂದರು.
“ಅಂದು ಪಂದ್ಯದ ಮುಗಿದ ಬಳಿಕ ವಿರಾಟ್’ಗೆ ಶೇಖ್ ಹ್ಯಾಂಡ್ ಕೊಟ್ಟು ನಾನು ಮುಂದೆ ನಡೆದೆ, ಆದರೆ ಅವರು ನನ್ನ ಕೈ ಬಿಡದಿರುವ ಕಾರಣ ನನಗೆ ಕೋಪ ಬಂತು. ನಾನು ನನ್ನ ಕೈಯನ್ನು ಎಳೆದೆ. ಏಕೆಂದರೆ ನಾನು ಕೂಡ ಮನುಷ್ಯ. ನನಗೂ ಕೋಪ ಬರುತ್ತೆ. ಆದರೆ ಆ ಬಳಿಕ ಘಟನೆಗೆ ಬೇರೆಯೇ ಅರ್ಥ ಕಲ್ಪಿಸಿ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು” ಎಂದಿದ್ದಾರೆ.
“ಇದಾದ ಬಳಿಕ ಹಲವು ಪಂದ್ಯಗಳ ವೇಳೆ ಅಭಿಮಾನಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದರು. ನಾನು 70-80 ಸಾವಿರ ಜನಕ್ಕೆ ಉತ್ತರ ಕೊಡಬೇಕಿತ್ತು. ಆದರೆ ಆ ಬಳಿಕ ನಾನು ಪಂದ್ಯದ ಮೇಲೆ ಗಮನ ಕೊಟ್ಟೆ” ಎಂದು ನವೀನ್ ಉಲ್ ತಿಳಿಸಿದ್ದಾರೆ.
ಮತ್ತೆ ಮಾವಿನ ಹಣ್ಣಿನ ಫೋಟೋ ಶೇರ್ ಮಾಡಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಮಾವಿನ ಹಣ್ಣನ್ನು ಸವಿಯುತ್ತಿದ್ದೆ. ಅದರ ಫೋಟೋ ಶೇರ್ ಮಾಡಿದ್ದೆ ಅಷ್ಟೇ” ಎಂದರು.
ಇದನ್ನೂ ಓದಿ: ಬುಧನ ಶ್ರೀರಕ್ಷೆಯಿಂದ ಈ ರಾಶಿಯವರ ಹಣೆಬರಹವೇ ಚೇಂಜ್: ಅದೃಷ್ಟ-ಧನಸಂಪತ್ತು ಜೀವನದಲ್ಲಿ ಮೇಳೈಸುವುದು!
ಸದ್ಯ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಮುಖಾಮುಖಿಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಏಷ್ಯಾಕಪ್ ಪಂದ್ಯ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ