Team India Test Cricket Schedule 2023 to 2023: 2023 ರಿಂದ 2025 ರವರೆಗೆ ಯಾವ ದೊಡ್ಡ ದೇಶಗಳ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಆಡಲಿದೆ ಎಂಬ ಸಂಪೂರ್ಣ ವೇಳಾಪಟ್ಟಿ ಇದೀಗ ಮುನ್ನೆಲೆಗೆ ಬಂದಿದೆ. ಟೀಮ್ ಇಂಡಿಯಾ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ 2023-25 ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಾರಂಭಿಸುತ್ತದೆ.
ಭಾರತವು ಮುಂದಿನ ಎರಡು ವರ್ಷಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಸಹ ಆಡಲಿದೆ. ಟೀಮ್ ಇಂಡಿಯಾ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಡೊಮಿನಿಕಾ (12 ರಿಂದ 16 ಜುಲೈ) ಮತ್ತು ಟ್ರಿನಿಡಾಡ್ (20 ರಿಂದ 24 ಜುಲೈ) ನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ: KCET Results 2023: ಸಿಇಟಿ ಫಲಿತಾಂಶ ಇಂದು ಪ್ರಕಟ! ಈ ನೇರ ಲಿಂಕ್ ಮೂಲಕ ತಿಳಿಯಿರಿ ನಿಮ್ಮ ರಿಸಲ್ಟ್
ಈ ಅಪಾಯಕಾರಿ ದೇಶಗಳೊಂದಿಗೆ ಭಾರತದ ಟೆಸ್ಟ್ ಸರಣಿ:
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯು 2023 ರಿಂದ 2025 ರವರೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ, ಮೊದಲ ಟೆಸ್ಟ್ ಶುಕ್ರವಾರ ನಡೆಯಲಿದೆ. ವೆಸ್ಟ್ ಇಂಡೀಸ್ ಪ್ರವಾಸದ ನಂತರ, ಭಾರತ ತಂಡವು ಡಿಸೆಂಬರ್ 2023 ರಿಂದ ಜನವರಿ 2024 ರವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇದರ ನಂತರ, ಜನವರಿ-ಫೆಬ್ರವರಿ 2024 ರಲ್ಲಿ, ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿ ನಡೆಯಲಿದೆ. ಸೆಪ್ಟೆಂಬರ್-ಅಕ್ಟೋಬರ್ 2024 ರಲ್ಲಿ, ಬಾಂಗ್ಲಾದೇಶ ಭಾರತ ಪ್ರವಾಸ ಕೈಗೊಳ್ಳಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ತಂಡ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲು ಭಾರತಕ್ಕೆ ಆಗಮಿಸಲಿದೆ.
ಭಾರತ ತಂಡವು ನವೆಂಬರ್ 2024 ರಿಂದ ಜನವರಿ 2025 ರವರೆಗೆ ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್ ಗಳ ಬಾರ್ಡರ್ ಗವಾಸ್ಕರ್ ಸರಣಿಯನ್ನು ಆಡಲಿದೆ. ಇದರೊಂದಿಗೆ ಭಾರತದ WTC ಸರಣಿಯು ಕೊನೆಗೊಳ್ಳುತ್ತದೆ.
ಐಸಿಸಿ ಜನರಲ್ ಮ್ಯಾನೇಜರ್ ಕ್ರಿಕೆಟ್ ವಾಸಿಂ ಖಾನ್ ಈ ಬಗ್ಗೆ ಮಾತನಾಡಿದ್ದು, “ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧೆಯ ಮಟ್ಟವು ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಪ್ರೇಕ್ಷಕರ ಆಸಕ್ತಿಯೂ ಹೆಚ್ಚಾಗಲಿದೆ. 9-ತಂಡಗಳ WTC ನಲ್ಲಿ, ಪ್ರತಿ ತಂಡವು ಮೂರು ಸರಣಿಗಳನ್ನು ತವರಿನಲ್ಲಿ ಮತ್ತು ಮೂರು ವಿದೇಶದಲ್ಲಿ ಆಡುತ್ತದೆ” ಎಂದರು.
2023 ರಿಂದ 2025 ರವರೆಗೆ ಟೆಸ್ಟ್ ಸರಣಿಗಳು ಹೀಗಿವೆ:
1. ವೆಸ್ಟ್ ಇಂಡೀಸ್ ಭಾರತ ಪ್ರವಾಸ - 2 ಟೆಸ್ಟ್ ಸರಣಿ - ಜುಲೈ 2023 ರಿಂದ ಆಗಸ್ಟ್ 2023
2. ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ - 2 ಟೆಸ್ಟ್ ಸರಣಿ - ಡಿಸೆಂಬರ್ 2023 ರಿಂದ ಜನವರಿ 2024
3. ಭಾರತಕ್ಕೆ ಇಂಗ್ಲೆಂಡ್ ಪ್ರವಾಸ - 5 ಟೆಸ್ಟ್ ಸರಣಿ - ಜನವರಿ 2024 ರಿಂದ ಫೆಬ್ರವರಿ 2024
4. ಬಾಂಗ್ಲಾದೇಶ ಭಾರತ ಪ್ರವಾಸ - 2 ಟೆಸ್ಟ್ ಸರಣಿ - ಸೆಪ್ಟೆಂಬರ್ 2024 ರಿಂದ ಅಕ್ಟೋಬರ್ 2024
5. ಭಾರತದ ನ್ಯೂಜಿಲೆಂಡ್ ಪ್ರವಾಸ - 3 ಟೆಸ್ಟ್ ಸರಣಿ - ಅಕ್ಟೋಬರ್ 2024 ರಿಂದ ನವೆಂಬರ್ 2024
6. ಭಾರತದ ಆಸ್ಟ್ರೇಲಿಯಾ ಪ್ರವಾಸ - 5 ಟೆಸ್ಟ್ ಸರಣಿ - ನವೆಂಬರ್ 2024 ರಿಂದ ಜನವರಿ 2025
ಇದನ್ನೂ ಓದಿ: ಮಳೆಯಿಂದ ಅಪಾಯ ಎದುರಿಸುವ Red Zone Area ಪಟ್ಟಿ ತಯಾರಿಸಿದ ಬಿಬಿಎಂಪಿ! ಯಾವ್ಯಾವ ಪ್ರದೇಶವಿದೆ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ