“ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲು ಬಿಸಿಸಿಐ ಮಾಡಿದ ಈ ತಪ್ಪೇ ಕಾರಣ!” ಪಬ್ಲಿಕ್’ನಲ್ಲಿಯೇ ನಿಂದಿಸಿದ ಅಂಬಾಟಿ ರಾಯುಡು

Ambati Rayudu News: ಟಿವಿ9 ತೆಲುಗಿಗೆ ನೀಡಿದ ಸಂದರ್ಶನದಲ್ಲಿ ಅಂಬಟಿ ರಾಯುಡು ಈ ವಿಷಯ ಬಹಿರಂಗಪಡಿಸಿದ್ದಾರೆ. ಅಂಬಟಿ ರಾಯುಡು ಮಾತನಾಡಿ, “2018 ರಲ್ಲಿ, ಬಿಸಿಸಿಐ ಅಧಿಕಾರಿಗಳು 2019 ರ ವಿಶ್ವಕಪ್‌ ಗೆ ಸಿದ್ಧರಾಗಿರಲು ನನ್ನ ಬಳಿ ಹೇಳಿದ್ದರು, ಆದರೆ ಇದ್ದಕ್ಕಿದ್ದಂತೆ ನನ್ನ ಸ್ಥಾನದಲ್ಲಿ ಬ್ಯಾಟ್ಸ್‌ಮನ್ ಅಲ್ಲದೆ, ಆಲ್ ರೌಂಡರ್ ಅನ್ನು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಲಾಯಿತು. ಅಂದರೆ 4ನೇ ಸ್ಥಾನದಲ್ಲಿ. ಅದು ನನಗೆ ಕೋಪ ತರಿಸಿತು” ಎಂದು ಹೇಳಿದರು.

Written by - Bhavishya Shetty | Last Updated : Jun 15, 2023, 11:20 AM IST
    • ವಿಶ್ವಕಪ್ 2019 ರ ಸಮಯದಲ್ಲಿ ಅಂಬಾಟಿ ರಾಯುಡು ಟೀಮ್ ಇಂಡಿಯಾದ ರಾಜಕೀಯಕ್ಕೆ ಬಲಿಯಾಗಿದ್ದರಂತೆ.
    • ಅದಾದ ಬಳಿಕ ರಾಯುಡು ತಕ್ಷಣವೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
    • ಬಿಸಿಸಿಐ ಮತ್ತು ಆಯ್ಕೆಗಾರರ ​​ವಿರುದ್ಧ ಬಹಳ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದಾರೆ.
“ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲು ಬಿಸಿಸಿಐ ಮಾಡಿದ ಈ ತಪ್ಪೇ ಕಾರಣ!” ಪಬ್ಲಿಕ್’ನಲ್ಲಿಯೇ ನಿಂದಿಸಿದ ಅಂಬಾಟಿ ರಾಯುಡು title=
Ambati Rayudu

Ambati Rayudu News: ಭಾರತದ ಹಿರಿಯ ಕ್ರಿಕೆಟಿಗ ಅಂಬಟಿ ರಾಯುಡು 2019 ರ ವಿಶ್ವಕಪ್‌ನಲ್ಲಿ ತನಗೆ ಮಾಡಿದ ಅನ್ಯಾಯದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಬಿಸಿಸಿಐ ಮತ್ತು ಟೀಮ್ ಇಂಡಿಯಾದ ಆಯ್ಕೆಗಾರರ ​​ವಿರುದ್ಧ ಬಹಳ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದಾರೆ. ವಿಶ್ವಕಪ್ 2019 ರ ಸಮಯದಲ್ಲಿ ಅಂಬಾಟಿ ರಾಯುಡು ಟೀಮ್ ಇಂಡಿಯಾದ ರಾಜಕೀಯಕ್ಕೆ ಬಲಿಯಾಗಿದ್ದರಂತೆ. ಅದಾದ ಬಳಿಕ ರಾಯುಡು ತಕ್ಷಣವೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ:  ಈ ದೇಶಗಳ ವಿರುದ್ಧ ಟೆಸ್ಟ್ ಆಡಲಿದೆ Team India: 2023-2025ರವರೆಗಿನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ಟಿವಿ9 ತೆಲುಗಿಗೆ ನೀಡಿದ ಸಂದರ್ಶನದಲ್ಲಿ ಅಂಬಟಿ ರಾಯುಡು ಈ ವಿಷಯ ಬಹಿರಂಗಪಡಿಸಿದ್ದಾರೆ. ಅಂಬಟಿ ರಾಯುಡು ಮಾತನಾಡಿ, “2018 ರಲ್ಲಿ, ಬಿಸಿಸಿಐ ಅಧಿಕಾರಿಗಳು 2019 ರ ವಿಶ್ವಕಪ್‌ ಗೆ ಸಿದ್ಧರಾಗಿರಲು ನನ್ನ ಬಳಿ ಹೇಳಿದ್ದರು, ಆದರೆ ಇದ್ದಕ್ಕಿದ್ದಂತೆ ನನ್ನ ಸ್ಥಾನದಲ್ಲಿ ಬ್ಯಾಟ್ಸ್‌ಮನ್ ಅಲ್ಲದೆ, ಆಲ್ ರೌಂಡರ್ ಅನ್ನು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಲಾಯಿತು. ಅಂದರೆ 4ನೇ ಸ್ಥಾನದಲ್ಲಿ. ಅದು ನನಗೆ ಕೋಪ ತರಿಸಿತು” ಎಂದು ಹೇಳಿದರು.

2019ರ ವಿಶ್ವಕಪ್‌ ಗೂ ಮುನ್ನ ಟೀಂ ಇಂಡಿಯಾ ನಂಬರ್-4 ಬ್ಯಾಟ್ಸ್‌ಮನ್‌ ಗಾಗಿ ಹಾತೊರೆಯುತ್ತಿತ್ತು. ಅವರ ಅನುಪಸ್ಥಿತಿಯನ್ನು ಅಂಬಟಿ ರಾಯುಡು ಪೂರೈಸಿದರು, ಆದರೆ 2019 ರ ವಿಶ್ವಕಪ್‌ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದಾಗ, ಅಂಬಟಿ ರಾಯುಡು ಅವರನ್ನು ಇದ್ದಕ್ಕಿದ್ದಂತೆ ನಿರ್ಲಕ್ಷಿಸಲಾಯಿತು. ಅವರ ಸ್ಥಾನದಲ್ಲಿ ವೇಗದ ಬೌಲಿಂಗ್ ಆಲ್ ರೌಂಡರ್ ವಿಜಯ್ ಶಂಕರ್ ಗೆ ಅವಕಾಶ ನೀಡಲಾಯಿತು. 2019 ರ ವಿಶ್ವಕಪ್‌ನಲ್ಲಿ, ಅಂಬಟಿ ರಾಯುಡು ಟೀಮ್ ಇಂಡಿಯಾದಲ್ಲಿ 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಪ್ರಬಲ ಸ್ಪರ್ಧಿಯಾಗಿದ್ದರು. 2019ರ ವಿಶ್ವಕಪ್‌ ನಲ್ಲಿ ಅಂಬಟಿ ರಾಯುಡು ಅವರನ್ನು ಆಯ್ಕೆಗಾರರು ಹಠಾತ್ತನೆ ತಂಡದಿಂದ ಕೈಬಿಟ್ಟರು. ಇದರ ನಂತರ, ಅಂಬಟಿ ರಾಯುಡು ಈ ನಿರ್ಧಾರವನ್ನು ವಿರೋಧಿಸಿ, ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಐಸಿಸಿ ವಿಶ್ವಕಪ್ 2019 ರ ಸಮಯದಲ್ಲಿ ಅಂಬಾಟಿ ರಾಯುಡು ಬದಲಿಗೆ ವಿಜಯ್ ಶಂಕರ್ ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಂಡ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್, ವಿಜಯ್ ಶಂಕರ್ ತಂಡಕ್ಕೆ 3D ಆಯ್ಕೆಯನ್ನು (ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್) ಒದಗಿಸುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ, ಅಂಬಟಿ ರಾಯುಡು ಅವರು ಆಯ್ಕೆಗಾರರನ್ನು ಲೇವಡಿ ಮಾಡಿ, 'ನಾನು ವಿಶ್ವಕಪ್ ವೀಕ್ಷಿಸಲು ಒಂದು ಜೋಡಿ 3D ಕನ್ನಡಕವನ್ನು ಆರ್ಡರ್ ಮಾಡಿದ್ದೇನೆ' ಎಂದು ಬರೆದುಕೊಂಡಿದ್ದರು. ಇದಾದ ಬಳಿಕ ವಿಜಯ್ ಶಂಕರ್ ಹಾಗೂ ಶಿಖರ್ ಧವನ್ ಗಾಯಗೊಂಡಿದ್ದರೂ ಅಂಬಟಿ ರಾಯುಡುಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ.

ಇದನ್ನೂ ಓದಿ:  ಚೀನಾ ವಿಮಾನನಿಲ್ದಾಣದಲ್ಲಿ ಲಿಯೋನಲ್‌ ಮೆಸ್ಸಿಯನ್ನು ವಶಕ್ಕೆ ಪಡೆದ ಪೊಲೀಸರು, ಕಾರಣವೇನು ಗೊತ್ತಾ?

ಅಂಬಟಿ ರಾಯುಡು 55 ಏಕದಿನ ಪಂದ್ಯಗಳಲ್ಲಿ 47.06 ಸರಾಸರಿಯಲ್ಲಿ 3 ಶತಕ ಮತ್ತು 10 ಅರ್ಧ ಶತಕ ಸೇರಿದಂತೆ 1694 ರನ್ ಗಳಿಸಿದ್ದಾರೆ. ಅಂಬಟಿ ರಾಯುಡು ಏಕದಿನ ಕ್ರಿಕೆಟ್‌ ನಲ್ಲಿ 124 ರನ್ ಗಳ ಬಾರಿಸಿದ್ದು, ಅದುವೇ ಅತ್ಯುತ್ತಮ ಸ್ಕೋರ್ ಆಗಿದೆ. ಇದಲ್ಲದೇ ಅಂಬಟಿ ರಾಯುಡು 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 42 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News