ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ ಸರ್ಫರಾಜ್; ಕಳೆದ 10 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ
Sarfaraz Khan Century: ನ್ಯೂಜಿಲೆಂಡ್ ವಿರುದ್ಧದ 2ನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು, ಶತಕ ಬಾರಿಸುವ ಮೂಲಕ ಭಾರತದ ಮಾಜಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Sarfaraz Khan Century: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಭರ್ಜರಿ ಶತಕ ಸಿಡಿಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಾದ್ಯಂತ ಸ್ಟ್ರೋಕ್‌ಗಳನ್ನು ಹೊಡೆದರು. ರನ್ ಗಳಿಸುವಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಸರ್ಫರಾಜ್‌ರ ಈ ಶತಕ ಸಾಧನೆಯಿಂದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಲು ನೆರವಾಯಿತು. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವರಿಗೆ ಒಂದೇ ಒಂದು ಟೆಸ್ಟ್ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಸದುಪಯೋಗಪಡಿಸಿಕೊಂಡರು.
ಪಂತ್ & ಕೊಹ್ಲಿ ಜೊತೆಗೆ ಉತ್ತಮ ಜೊತೆಯಾಟ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕತ್ತಿನ ಸೆಳೆತದಿಂದ ಶುಭಮನ್ ಗಿಲ್ ಆಡಲಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಸರ್ಫರಾಜ್‌ಗೆ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಸರ್ಫರಾಜ್ ಭರ್ಜರಿ ಶತಕ ಸಿಡಿಸಿದರು. 195 ಎಸೆತಗಳಲ್ಲಿ 18 ಬೌಂಡರಿ ಮತ್ತು 3 ಸಿಕ್ಸರ್ ಇದ್ದ 150 ಗಳಿಸಿ ಮಿಂಚಿದರು. ಮೊದಲು ವಿರಾಟ್ ಕೊಹ್ಲಿ ಜೊತೆ 136 ರನ್‌ಗಳ ಜೊತೆಯಾಟವಾಡಿದ ಸರ್ಫರಾಜ್, ನಂತರ ರಿಷಭ್ ಪಂತ್ ಜೊತೆ 100+ ರನ್‌ಗಳ ಜೊತೆಯಾಟ ನಡೆಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಸರ್ವಪತನ ಕಂಡಿತ್ತು. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 402 ರನ್ ಗಳಿಸಿ 356 ರನ್‌ಗಳ ಮುನ್ನಡೆ ಸಾಧಿಸಿತ್ತು. ಹೀಗಾಗಿ ಟೀಂ ಇಂಡಿಯಾ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿತ್ತು.
ಇದನ್ನೂ ಓದಿ: ಸುನಾಮಿಗೆ ಸಿಲುಕಿ ಕೊಚ್ಚಿಯೇ ಹೋಗುತ್ತಿದ್ದರು ಈ ದಿಗ್ಗಜ್ಜ ಕ್ರಿಕೆಟಿಗ !ಕೊನೆ ಘಳಿಗೆಯಲ್ಲಿ ಬಚಾವಾದ ರೀತಿ ಪವಾಡವೇ !
2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದರೂ ಸಹ ನಂತರ ಚೇತರಿಸಿಕೊಂಡ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಆಟವನ್ನು ಪ್ರದರ್ಶಿಸಿತು. ಯಶಸ್ವಿ ಜೈಸ್ವಾಲ್ (35), ನಾಯಕ ರೋಹಿತ್ ಶರ್ಮಾ (52) ವಿರಾಟ್ ಕೊಹ್ಲಿ (70) ಮತ್ತು ರಿಷಭ್ ಪಂತ್(99) ರನ್ ಗಳಿಸಿ ಔಟಾದರು.
ನ್ಯೂಜಿಲೆಂಡ್ ವಿರುದ್ಧ ಸರ್ಫರಾಜ್ ಅದ್ಭುತ ಆಟ!
IND vs NZ, 1st Test: ರಿಷಭ್ ಪಂತ್ ಹೆಗಲೆರಿದ ಸಚಿನ್ ತೆಂಡೂಲ್ಕರ್‌ಗೆ ಕಾಡಿದ್ದ ʼನರ್ವಸ್ 90ʼ ಭೂತ..!
ಕಳೆದ 10 ವರ್ಷಗಳಲ್ಲಿ ನ್ಯೂಜಿಲೆಂಡ್ ವಿರುದ್ಧದ ಒಂದೇ ಟೆಸ್ಟ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ಶೂನ್ಯ ಮತ್ತು ಶತಕ ಗಳಿಸಿದ್ದು ಇದೇ ಮೊದಲು. ಸರ್ಫರಾಜ್ ಅವರಿಗಿಂತ ಮೊದಲು 2014ರಲ್ಲಿ ಶಿಖರ್ ಧವನ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಶೂನ್ಯ ಮತ್ತು 115 ರನ್ ಗಳಿಸಿದ್ದರು. ಸರ್ಫರಾಜ್ ಇದೀಗ ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಪದಾರ್ಪಣೆ
ಸರ್ಫರಾಜ್ ಖಾನ್ 2024ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಅವರು ಟೀಂ ಇಂಡಿಯಾ ಪರ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 325 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳು ಸೇರಿವೆ. ಈ ಅವಧಿಯಲ್ಲಿ ಅವರ ಸರಾಸರಿ 65.00 ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.