ನವದೆಹಲಿ: ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌(Shakib Al Hasan) ಅವರ ಲವ್ ಲೈಫ್ ತುಂಬಾ ರೋಮ್ಯಾಂಟಿಕ್ ಆಗಿದೆ. ಶಕೀಬ್ ಅವರ ಪತ್ನಿ ಹೆಸರು ಉಮ್ಮಿ ಅಹ್ಮದ್ ಶಿಶಿರ್. ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಅನೋನ್ಯತೆಯಿಂದ ಬದುಕುತ್ತಿದ್ದಾರೆ. ಆಘಾತಕಾರಿ ಘಟನೆಯೊಂದರಲ್ಲಿ ಶಕೀಬ್ ಪತ್ನಿ ಶಿಶಿರ್ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿದ್ದರು. ವಾಸ್ತವವಾಗಿ ಈ ಘಟನೆ 2014ರಲ್ಲಿ ನಡೆದಿತ್ತು. ಅಂದು ಭಾರತ ಮತ್ತು ಬಾಂಗ್ಲಾದೇಶ(IND vs BNG) ನಡುವಿನ ಪಂದ್ಯದ ವೇಳೆ ಶಕೀಬ್ ಮಿರ್‌ಪುರದಲ್ಲಿ ಉದ್ಯಮಿಯೊಬ್ಬರ ಮಗನನ್ನು ಥಳಿಸಿದ್ದರು.


COMMERCIAL BREAK
SCROLL TO CONTINUE READING

ಶಕೀಬ್ ಪತ್ನಿಯೊಂದಿಗೆ ಅನುಚಿತ ವರ್ತನೆ


ವಾಸ್ತವವಾಗಿ ಆ ಪಂದ್ಯದ ವೇಳೆ ಉದ್ಯಮಿಯೊಬ್ಬರ ಪುತ್ರ ಶಕೀಬ್ ಅವರ ಪತ್ನಿ ಜೊತೆಗೆ ಅನುಚಿತವಾಗಿ(Sexually Harassing) ವರ್ತಿಸಿದ್ದನಂತೆ. ಈ ವಿಷಯ ತಿಳಿದ ಶಕೀಬ್ ಕೆಲವು ಭದ್ರತಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತಲುಪಿ ಉದ್ಯಮಿಯ ಮಗನಿಗೆ ಮನಬಂದಂತೆ ಥಳಿಸಿದ್ದರಂತೆ. ಬಳಿಕ ಉದ್ಯಮಿಯ ಮಗನನ್ನು ಪೊಲೀಸರು ಬಂಧಿಸಿದ್ದರು.  


ಇದನ್ನೂ ಓದಿ: ನಾಳೆ IND vs NZ ಚೊಚ್ಚಲ ಟೆಸ್ಟ್ ಮ್ಯಾಚ್ : ಟೀಂ ಇಂಡಿಯಾಗೆ ಇಬ್ಬರು ಹೊಸ ಆಟಗಾರರು ಎಂಟ್ರಿ!


2010ರಲ್ಲಿ ಶಿಶಿರ್ ಭೇಟಿ ಮಾಡಿದ್ದ ಶಕೀಬ್


ಶಕೀಬ್ 2010ರಲ್ಲಿ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಿದ್ದರು. ಅಲ್ಲಿ ಅವರು ಉಮ್ಮಿ ಅಹ್ಮದ್ ಶಿಶಿರ್(Ummi Ahmed Shishir) ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಶಿಶಿರ್ ಕುಟುಂಬವು ಮೂಲತಃ ಬಾಂಗ್ಲಾದೇಶಿಯರು. ಆದರೆ ಅವರು 10 ವರ್ಷದವರಿದ್ದಾಗ ಆಕೆಯ ಪೋಷಕರು ಅಮೆರಿಕಕ್ಕೆ ವಲಸೆ ಬಂದಿದ್ದರು. ಅಂದಿನಿಂದ ಶಿಶಿರ್ ಮತ್ತು ಅವರ ಕುಟುಂಬ ಅಮೆರಿಕದಲ್ಲಿ ವಾಸಿಸುತ್ತಿತ್ತು.


ಮೊದಲ ಭೇಟಿಯಲ್ಲಿಯೇ ಪ್ರೀತಿಯಾಗಿತ್ತು


ಒಂದೆಡೆ ಕೌಂಟಿ ಕ್ರಿಕೆಟ್‌ ಆಡಲು ಶಕೀಬ್ ಅಲ್ ಹಸನ್ ಇಂಗ್ಲೆಂಡ್‌ನಲ್ಲಿದ್ದರೆ, ಇನ್ನೊಂದೆಡೆ ಶಿಶಿರ್(Shakib Al Hasan Wife) ಕೂಡ ರಜೆಗಾಗಿ ಇಂಗ್ಲೆಂಡ್ ಗೆ ಬಂದಿದ್ದರು. ಆ ಸಮಯದಲ್ಲಿ ಇಬ್ಬರೂ ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇಲ್ಲಿಯೇ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲಿಯೇ ಇಬ್ಬರೂ ಪರಸ್ಪರ ಒಳ್ಳೆಯ ಸ್ನೇಹಿತರಾಗಿದ್ದರು. ಆಗ ಈ ಸ್ನೇಹ ಯಾವಾಗ ಪ್ರೇಮಕ್ಕೆ ತಿರುಗುತ್ತದೋ ಎಂಬುದರ ಬಗ್ಗೆ ಶಿಶಿರ್ ಗಾಗಲಿ, ಶಕೀಬ್ ಗಾಗಲಿ ತಿಳಿದಿರಲಿಲ್ಲ.


ಇದನ್ನೂ ಓದಿ: IPL 2022: ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ, ಈ ತಿಂಗಳಂದು ಶುರುವಾಗಲಿದೆ ಐಪಿಎಲ್ ಟೂರ್ನಿ..!


ಪ್ರೀತಿ ಮದುವೆಗೆ ತಿರುಗಿತು


ಸಮಯ ಕಳೆದಂತೆ ಶಕೀಬ್(Shakib Al Hasan) ಮತ್ತು ಶಿಶಿರ್ ಪ್ರೀತಿ ಗಾಢವಾಯಿತು. ಇಬ್ಬರೂ ಒಬ್ಬರಿಗೊಬ್ಬರಿಲ್ಲದೆ ಬದುಕಲು ಸಾಧ್ಯವಿಲ್ಲವೆಂದು ಅರಿತುಕೊಂಡಾಗ ಮದುವೆಯಾಗಲು ನಿರ್ಧರಿಸಿದರು. ನಂತರ 2012ರ ಡಿಸೆಂಬರ್ 12 ರಂದು ಶಕೀಬ್ ಮತ್ತು ಶಿಶಿರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ 2015ರಲ್ಲಿ ಶಕೀಬ್ ಮತ್ತು ಶಿಶಿರ್ ದಂಪತಿಗೆ ಪುತ್ರಿ ಜನಿಸಿದಳು. ಮೊದಲ ಪುತ್ರಿಗೆ ಅಲೈನಾ ಹಸನ್ ಆಬ್ರೆ ಎಂದು ಹೆಸರಿಟ್ಟರು. ಏಪ್ರಿಲ್ 2020ರಲ್ಲಿ ಶಕೀಬ್ ಪತ್ನಿ 2ನೇ ಪುತ್ರಿಗೆ ಜನ್ಮ ನೀಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.