ನವದೆಹಲಿ: ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ಸಿಹಿ ಸುದ್ದಿ ಸಿಕ್ಕಿದೆ. 2022ರ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022 Schedule) ಟೂರ್ನಿಯ ವೇಳಾಪಟ್ಟಿ ಅಂತಿಮಗೊಂಡಿದೆ ಎಂದು ವರದಿಯಾಗಿದೆ. ಭಾರತದಲ್ಲಿಯೇ ನಡೆಯಲಿರುವ ಈ ಚುಟುಕು ಮೆಗಾ ಟೂರ್ನಮೆಂಟ್ ಏಪ್ರಿಲ್ 2 ರಂದು ಪ್ರಾರಂಭವಾಗಲಿದೆ. ಚೆನ್ನೈ(Chennai)ನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್(CSK vs MI) ತಂಡಗಳು ಮುಖಾಮುಖಿಯಾಗಲಿವೆ ಎಂದು ತಿಳಿದುಬಂದಿದೆ.
ಜೂನ್ 4 ಅಥವಾ 5 ರಂದು ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ(IPL 2022 Final Match) ನಡೆಯುವ ಸಾಧ್ಯತೆ ಇದೆ. ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ. ಒಟ್ಟು 60 ದಿನಗಳವರೆಗೆ ಈ ಚುಟುಕು ಮಹಾಸಮರ ನಡೆಯಲಿದೆ. ಪ್ರತಿ ತಂಡವೂ 14 ಲೀಗ್ ಪಂದ್ಯಗಳನ್ನು ಆಡಲಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Ind vs NZ: ಟೀಂ ಇಂಡಿಯಾದ ಬಹು ದೊಡ್ಡ ಅಸ್ತ್ರ ಈ ಆಟಗಾರ, ನ್ಯೂಜಿಲ್ಯಾಂಡ್ ಬೌಲರ್ ಗಳ ಪಾಲಿನ ಸಿಂಹ ಸ್ವಪ್ನ
ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಮನರಂಜನೆ
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಮನರಂಜನೆ ಸಿಗಲಿದೆ. ಈಗಿರುವ 8 ತಂಡಗಳ ಜೊತೆ 2 ಹೊಸ ತಂಡಗಳು ಸೇರ್ಪಡೆಯಾಗಿರುವುದರಿಂದ ಟೂರ್ನಿ ಮತ್ತಷ್ಟು ರೋಮಾಂಚನಕಾರಿ ಅನುಭವ ನೀಡಲಿದೆ. ಸೀಸನ್ ಆರಂಭಕ್ಕೂ ಮುನ್ನ ಮೆಗಾ ಆಕ್ಷನ್(IPL 2022 Auction date) ನಡೆಯಲಿದೆ. ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು 4 ಆಟಗಾರರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುತ್ತವೆ. ನ.31ರಂದು ಫ್ರಾಂಚೈಸಿ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡುತ್ತವೆ. ನಂತರ 2 ಹೊಸ ತಂಡಗಳು ಕೂಡ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತೇವೆ.
14ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4ನೇ ಬಾರಿ ಟ್ರೋಫಿ ಎತ್ತಿಹಿಡಿದಿತ್ತು. CSKಯ ಗೆಲುವಿನ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದ್ದ BCCI ಕಾರ್ಯದರ್ಶಿ ಜಯ್ ಶಾ(Jay Shah) ಐಪಿಎಲ್ ಭಾರತಕ್ಕೆ ಮರಳುತ್ತಿದೆ ಎಂದು ಹೇಳಿದ್ದರು. ‘ಚೆಪಾಕ್‌ನಲ್ಲಿ ಸಿಎಸ್‌ಕೆ ಪಂದ್ಯವನ್ನು ನೋಡಲು ನೀವೆಲ್ಲರೂ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಈ ಸಮಯ ಹೆಚ್ಚು ದೂರವಿಲ್ಲ. ಐಪಿಎಲ್‌ನ 15ನೇ ಸೀಸನ್ ಭಾರತದಲ್ಲಿ ನಡೆಯಲಿದೆ ಮತ್ತು 2 ಹೊಸ ತಂಡಗಳು ಸೇರ್ಪಡೆಗೊಳ್ಳುವುದರೊಂದಿಗೆ ಇದು ಹಿಂದೆಂದಿಗಿಂತಲೂ ಹೆಚ್ಚು ರೋಮಾಂಚನಕಾರಿಯಾಗಿರಲಿದೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ನಾಳೆ IND vs NZ ಚೊಚ್ಚಲ ಟೆಸ್ಟ್ ಮ್ಯಾಚ್ : ಟೀಂ ಇಂಡಿಯಾಗೆ ಇಬ್ಬರು ಹೊಸ ಆಟಗಾರರು ಎಂಟ್ರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.