Shane Warne ಅವರ ಈ ಬೌಲ್ ಅನ್ನು `Ball Of The Century` ಎನ್ನಲಾಗುತ್ತದೆ, ಇಡೀ ವಿಶ್ವವೇ ನಿಬ್ಬೇರಗಾಗಿತ್ತು
Shane Warne Died - ವಿಶ್ವದ ಸರ್ವ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಶೇನ್ ವಾರ್ನ್ (Shane Warne) ಇಂದು ನಿಧನರಾಗಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ಕರಿಯರ್ ನಲ್ಲಿ ಅವರು 700 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
ನವದೆಹಲಿ: RIP Shane Warne - ವಿಶ್ವದ ಸರ್ವ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ (Australia Legendary Spinner) ಶೇನ್ ವಾರ್ನ್ ವಿಧಿವಶರಾಗಿದ್ದಾರೆ. ವಿಶ್ವದ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಶೇನ್ ವಾರ್ನ್ ಬೌಲಿಂಗ್ ಶೈಲಿಯ ಫ್ಯಾನ್ ಆಗಿದ್ದರು. ಅವರ ಎಸೆತಗಳನ್ನು ಆಡುವುದು ದಿಗ್ಗಜ ಬ್ಯಾಟ್ಸ್ ಮನ್ ಗಳಿಗೂ ಒಂದು ಸವಾಲಿನ ಪ್ರಶ್ನೆಯೇಯಾಗಿರುತ್ತಿತ್ತು. ಶೇನ್ ವಾರ್ನ್ ಅವರು ಎಸೆದ ಒಂದು ಬೌಲ್ ಅನ್ನು 'ಶತಮಾನದ ಬೌಲ್' (Ball Of The Century)ಎಂದು ಕರೆಯಲಾಗುತ್ತದೆ. ಆ ಎಸೆತ ಯಾವುದು ತಿಳಿದುಕೊಳ್ಳೋಣ ಬನ್ನಿ.
ಈ ಎಸೆತವನ್ನು 'Ball Of The Century' ಎಂದು ಕರೆಯಲಾಗುತ್ತದೆ
ಆಸ್ಟ್ರೇಲಿಯಾದ ದಂತಕಥೆ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರು 14 ವರ್ಷಗಳ ಹಿಂದೆ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು, ಆದರೆ ಇಂದಿಗೂ 'ಲೆಗ್-ಸ್ಪಿನ್ ರಾಜ' ಬೌಲ್ ಮಾಡಿದ ಅತ್ಯದ್ಭುತ ಎಸೆತ 'Ball Of The Century' ರೂಪದಲ್ಲಿ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯೋತ್ತಿದೆ. 28 ವರ್ಷಗಳ ಹಿಂದೆ ಇದೇ ದಿನ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮೈಕ್ ಗ್ಯಾಟಿಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ವಾರ್ನ್ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದ್ದರು. ವಾರ್ನ್ ಎಸೆದ ಈ ಮ್ಯಾಜಿಕಲ್ ಬೌಲ್ ಗ್ಯಾಟಿಂಗ್ ಅವರ ಆಫ್ ಸ್ಟಂಪ್‌ಗೆ ಅಪ್ಪಳಿಸಲು 90 ಡಿಗ್ರಿ ತಿರುವು ಪಡೆದುಕೊಂಡಿತ್ತು.
ಇದನ್ನೂ ಓದಿ-ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ!
ಟೆಸ್ಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್
ಶೇನ್ ವಾರ್ನ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್‌ಗಳನ್ನು ಪಡೆದರೆ, 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್‌ಗಳನ್ನು ಪಡೆಯುವ ವಿಷಯದಲ್ಲಿ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ, ಎರಡನೇ ಸ್ಥಾನದಲ್ಲಿರುವ ಶೇನ್ ವಾರ್ನ್ ಅವರಿಗಿಂತ ಮೊದಲು 700 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಬೌಲಿಂಗ್‌ನ ಈ ಉನ್ನತ ಶಿಖರವನ್ನು ಮುಟ್ಟಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದರು.
ಇದನ್ನೂ ಓದಿ-ರೋಹಿತ್ ಶರ್ಮಾಗೆ ಕೊಹ್ಲಿ ಸಿಡಿಸಿದ ಈ ಶತಕ ಫೇವರಿಟ್ ಅಂತೆ..!
ಶತಕವಿಲ್ಲದೆ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ
ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ 3154 ರನ್ ಗಲಿಸಿದ್ದಾರೆ. ಇದು ಶತಕವಿಲ್ಲದೆ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ವಿಶ್ವದಾಖಲೆಯಾಗಿದೆ. ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಅವರ ಅತ್ಯಧಿಕ ಸ್ಕೋರ್ 2001 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪರ್ತ್ ಟೆಸ್ಟ್‌ನಲ್ಲಿ ಮಾಡಿದ 99 ರನ್ ಗಳಾಗಿದೆ. ಇದಲ್ಲದೆ, ಇನ್ನೊಂದು ಬಾರಿ ಕೂಡ ವಾರ್ನ್ ಶತಕದ ಸನೀಹಕ್ಕೆ ತಲುಪಿ ಶತಕ ವಂಚಿತರಾಗಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 1018 ರನ್ ಗಳಿಸಿದ್ದಾರೆ. ಟೆಸ್ಟ್ ಮತ್ತು ODI ಎರಡರಲ್ಲೂ ಬ್ಯಾಟ್‌ನೊಂದಿಗೆ 1000+ ರನ್ ಮತ್ತು 200+ ವಿಕೆಟ್‌ಗಳನ್ನು ಹೊಂದಿರುವ ವಿಶ್ವದ ಕೆಲವೇ ಕ್ರಿಕೆಟಿಗರಲ್ಲಿ ಶೇನ್ ಕೂಡ ಒಬ್ಬರು.
ಇದನ್ನೂ ಓದಿ-ವಿಕೆಟ್ ಹಿಂದೆ ನಿಂತು ಮ್ಯಾಜಿಕ್ ಮಾಡುತ್ತಿದ್ದ 'ಕ್ಯಾಚ್' ಮಾರ್ಷ್ ಇನ್ನಿಲ್ಲ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.