ವಿಕೆಟ್‌ ಹಿಂದೆ ನಿಂತು ಮ್ಯಾಜಿಕ್‌ ಮಾಡುತ್ತಿದ್ದ 'ಕ್ಯಾಚ್‌' ಮಾರ್ಷ್‌ ಇನ್ನಿಲ್ಲ!

80ರ ದಶಕದಲ್ಲಿ ವಿಕೆಟ್‌ ಹಿಂದೆ ನಿಂತು ಮ್ಯಾಜಿಕ್‌ ಮಾಡುತ್ತಿದ್ದ ಕ್ಯಾಚ್‌ ಮಾರ್ಷ್‌ (Catch Marsh) ಖ್ಯಾತಿಯ ಆಸ್ಟ್ರೇಲಿಯಾ ಕ್ರಿಕೆಟ್‌ (Cricket) ದಿಗ್ಗಜ ರಾಡ್‌ ಮಾರ್ಷ್‌ ಇನ್ನಿಲ್ಲ.

Written by - Zee Kannada News Desk | Last Updated : Mar 4, 2022, 06:36 PM IST
  • ವಿಕೆಟ್‌ ಹಿಂದೆ ನಿಂತು ಮ್ಯಾಜಿಕ್‌ ಮಾಡುತ್ತಿದ್ದ ಕ್ಯಾಚ್‌ ಮಾರ್ಷ್‌
  • ಖ್ಯಾತಿಯ ಆಸ್ಟ್ರೇಲಿಯಾ ಕ್ರಿಕೆಟ್‌ ದಿಗ್ಗಜ ರಾಡ್‌ ಮಾರ್ಷ್‌ ಇನ್ನಿಲ್ಲ
ವಿಕೆಟ್‌ ಹಿಂದೆ ನಿಂತು ಮ್ಯಾಜಿಕ್‌ ಮಾಡುತ್ತಿದ್ದ 'ಕ್ಯಾಚ್‌' ಮಾರ್ಷ್‌ ಇನ್ನಿಲ್ಲ!  title=
ರಾಡ್‌ ಮಾರ್ಷ್‌

80ರ ದಶಕದಲ್ಲಿ ವಿಕೆಟ್‌ ಹಿಂದೆ ನಿಂತು ಮ್ಯಾಜಿಕ್‌ ಮಾಡುತ್ತಿದ್ದ ಕ್ಯಾಚ್‌ ಮಾರ್ಷ್‌ (Catch Marsh) ಖ್ಯಾತಿಯ ಆಸ್ಟ್ರೇಲಿಯಾ ಕ್ರಿಕೆಟ್‌ (Cricket) ದಿಗ್ಗಜ ರಾಡ್‌ ಮಾರ್ಷ್‌ ಇನ್ನಿಲ್ಲ.

1970-80ರ ಕಾಲಘಟ್ಟದಲ್ಲಿ ವಿಕೆಟ್‌ ಹಿಂದಿನ ಆ ಕೈಗಳೆಂದರೆ ಬ್ಯಾಟ್ಸ್‌ ಮನ್‌ಗೆ (Batsman) ಒಂಥರಾ ನಡುಕ. ಯಾಕೆಂದರೆ ವಿಕೆಟ್‌ ಹಿಂದೆ ನಿಂತ ಆ ದಾಂಡಿಗ ಅದಾಗಲೇ 300ಕ್ಕೂ ಹೆಚ್ಚು ಬಲಿ ಪಡೆದಿದ್ದ. ಈ ದಾಖಲೆಯನ್ನು ಮೀರಿಸುವುದು ಬಿಡಿ ಅದರ ಹತ್ತಿರಕ್ಕೂ ಆ ದಿನಗಳಲ್ಲಿ ಯಾರೂ ಸುಳಿದಿರಲಿಲ್ಲ. ಅವನ ಹೆಸರು ಅದಾಗಲೇ ರೆಕಾರ್ಡ್‌ ಬುಕ್‌ಗಳಲ್ಲಿ ರಾರಾಜಿಸುತ್ತಿತ್ತು. ಆಸ್ಟ್ರೇಲಿಯಾದ ಈ ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ಮತ್ಯಾರೂ ಅಲ್ಲ. ಅವರೇ ರಾಡ್‌ ಮಾರ್ಷ್‌. ಅಂದ್ಹಾಗೆ ಇಂದು ರಾಡ್‌ ಮಾರ್ಷ್‌ ನಮ್ಮೆಲ್ಲರನ್ನು ಅಗಲಿದ್ದಾರೆ.

ಇದನ್ನೂ ಓದಿ: Rohit Sharma : ರೋಹಿತ್ ನಾಯಕತ್ವಕ್ಕೆ ಅಚ್ಚರಿಗೊಂಡ ಇಡೀ ಕ್ರಿಕೆಟ್ ಜಗತ್ತು!

ಫೆಬ್ರವರಿ 24 ರಂದು ಹೃದಯಾಘಾತ ಉಂಟಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಮಾರ್ಷ್‌ (Rod Marsh) ಕೋಮಾ ತಲುಪಿದ್ದರು. ಸಾವು-ಬದುಕಿನ ನಡುವೆ ಹತ್ತು ದಿನ ಕಳೆದ ಮಾರ್ಷ್‌ ಮತ್ತೆ ಮೇಲೇಳಲೇ ಇಲ್ಲ. ಇಂದು ಕ್ರಿಕೆಟ್‌ ಲೋಕ ಬಿಟ್ಟು ಮಾರ್ಷ್‌ ಪಯಣ ಬದಲಿಸಿದ್ದಾರೆ. 

74 ವರ್ಷ ವಯಸ್ಸಿನ ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ರಾಡ್‌ ಮಾರ್ಷ್‌ 1970 ರಲ್ಲಿ ಪಾದಾರ್ಪಣೆ ಪಂದ್ಯವಾಡಿದರು. ಅಲ್ಲಿಂದ ಆಸ್ಟ್ರೇಲಿಯಾ (Australia) ಪರ 96 ಟೆಸ್ಟ್‌ ಹಾಗೂ 92 ಏಕದಿನ ಪಂದ್ಯ ಆಡಿದ್ದ ಮಾರ್ಷ್‌ ಸ್ಪೋಟಕ ಆಟ ಹಾಗೂ ಕೀಪಿಂಗ್‌ನಿಂದ ಗಮನಸೆಳೆದಿದ್ದರು. 1225 ಏಕದಿನ ರನ್‌ ಹಾಗೂ 3633 ಟೆಸ್ಟ್‌ ರನ್‌ ಅವರ ಬ್ಯಾಟ್‌ ನಿಂದ ಹರಿದು ಬಂದಿದ್ದರೆ ಬರೋಬ್ಬರಿ 355 ಸ್ಟಂಪಿಂಗ್‌ ಮಾಡಿ ದಾಖಲೆ ಬರೆದಿದ್ದರು ಮಾರ್ಷ್‌.

ಆಸ್ಟ್ರೇಲಿಯಾದ ಆಗಿನ ವೇಗದ ಬೌಲರ್‌ ಡೆನ್ನಿಸ್‌ ಲಿಲ್ಲೀ ಜೊತೆ ಇವರ ಕಾಂಬಿನೇಷನ್‌ ಎಲ್ಲಿಯವರೆಗೆ ಕೆಲಸ ಮಾಡುತ್ತಿತ್ತು ಎಂದರೆ ಆಗಿನ ಅಂತರಾಷ್ಟ್ರೀಯ ಪಂದ್ಯಾಟಗಳ ಸ್ಕೋರ್‌ ಕಾರ್ಡ್‌ಗಳಲ್ಲಿ ಕ್ಯಾಚ್‌ ಮಾರ್ಷ್‌, ಬೌಲ್ಡ್‌ ಲಿಲ್ಲೀ ಎಂದೇ ಪ್ರಖ್ಯಾತವಾಗಿರುತ್ತಿತ್ತು. 

ಆಟಗಾರನಾಗಿ ನಿವೃತ್ತಿಯಾದ ನಂತರ, ರಾಷ್ಟ್ರದ ಕ್ರಿಕೆಟ್ ಅಕಾಡೆಮಿಯನ್ನು ಮೇಲ್ವಿಚಾರಣೆ ವಹಿಸಿಕೊಂಡ ಮಾರ್ಷ್‌ ನಂತರ ಆಯ್ಕೆಗಾರರಾಗಿಯೂ ಕೆಲಸ ಮಾಡಿದರು. 2001 ಮತ್ತು 2005 ರ ನಡುವಿನ ನಾಲ್ಕು ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ರಾಷ್ಟ್ರೀಯ ಅಕಾಡೆಮಿಯ ನಿರ್ದೇಶಕರಾಗಿ ಇಂಗ್ಲೆಂಡ್‌ನಲ್ಲಿ ಸಮಯವನ್ನು ಕಳೆದ ರಾಡ್‌ ಬಳಿಕ ದುಬೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಚೊಚ್ಚಲ ವಿಶ್ವ ಕೋಚಿಂಗ್ ಅಕಾಡೆಮಿಯನ್ನು ಮೇಲ್ವಿಚಾರಣೆ ಸಹ ಮಾಡಿದ್ದಾರೆ.

ಇದನ್ನೂ ಓದಿ: WATCH video: ಶತಕದ ಟೆಸ್ಟ್ ಗೂ ಮುನ್ನ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ

1982 ರಲ್ಲಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್‌ನ ಸದಸ್ಯರಾದ ಮಾರ್ಷ್‌, 1985 ರಲ್ಲಿ ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದರು. 2005 ರಲ್ಲಿ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಆಯ್ಕೆಯಾದ ಮಾರ್ಷ್‌ ಹೆಸರು ಇಂದಿಗೂ ಆಸ್ಟ್ರೇಲಿಯಾ ಕ್ರಿಕೆಟ್‌ ಜಗತ್ತಿನಲ್ಲಿ ಅಜರಾಮರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News