Vinod Kambli Birthday: ಭಾರತ ವಿಶ್ವಕ್ಕೆ ಅದೆಷ್ಟೋ ಅದ್ಭುತ ಕ್ರಿಕೆಟಿಗರನ್ನು ನೀಡಿದೆ. ಇವರಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಸೇರಿದ್ದಾರೆ. ಆದರೆ ಸಚಿನ್‌ಗಿಂತ ಉತ್ತಮ ಎಂದು ಪರಿಗಣಿಸಲ್ಪಟ್ಟ ಒಬ್ಬ ಬ್ಯಾಟ್ಸ್‌ಮನ್ ಇದ್ದಾರೆ. ಆದರೆ ಈ ಆಟಗಾರನ ವೃತ್ತಿಜೀವನವು ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯಲಿಲ್ಲ.  ಇಂದು ನಾವು ಅನುಭವಿ ವಿನೋದ್ ಕಾಂಬ್ಳಿಯವರ ಬಗ್ಗೆ ಮಾತನಾಡುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಇಂದು (ಜನವರಿ 18 ರಂದು) ವಿನೋದ್ ಕಾಂಬ್ಳಿ ತಮ್ಮ 51 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಬಾಲ್ಯ ಸ್ನೇಹಿತನ ಜೀವನದ ಅನೇಕ ವಿಷಯಗಳನ್ನು ಇಲ್ಲಿ ನೀಡಲಾಗಿದೆ.  


ಇದನ್ನೂ ಓದಿ: IND vs NZ: ಟೀಂ ಇಂಡಿಯಾಗೆ ಹಠಾತ್ ಎಂಟ್ರಿಕೊಟ್ಟ ಈ ಅಪಾಯಕಾರಿ ಬ್ಯಾಟ್ಸ್‌ಮನ್‌! 


ಬಾಲ್ಯದಲ್ಲಿ ಸಚಿನ್ ಜೊತೆ ಕ್ರಿಕೆಟ್ ಆಟ:


ವಿನೋದ್ ಕಾಂಬ್ಳಿ 18 ಜನವರಿ 1972 ರಂದು ಮುಂಬೈನಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಚಿನ್ನಾಭರಣ ಧರಿಸುವುದು ಎಂದರೆ ಇವರಿಗೆ ಒಲವು. ಶಾಲಾ ದಿನಗಳಲ್ಲಿ ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದರು. ಶಾರದಾಶ್ರಮ ಶಾಲೆಯ ಪರ ಆಡುವಾಗ ಇಬ್ಬರೂ 664 ರನ್‌ಗಳ ಜೊತೆಯಾಟವಾಡಿದ್ದರು. ಈ ಅವಧಿಯಲ್ಲಿ ಕಾಂಬ್ಳಿ ಔಟಾಗದೆ 349 ರನ್ ಗಳಿಸಿದ್ದರು.


ಸಚಿನ್ ತೆಂಡೂಲ್ಕರ್ 1989 ರಲ್ಲಿ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು. 1991ರಲ್ಲಿ ಪಾಕಿಸ್ತಾನ ವಿರುದ್ಧ ವಿನೋದ್ ಕಾಂಬ್ಳಿ ಈ ಅವಕಾಶ ಪಡೆದಿದ್ದರು. ಇದಾದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಅವರು ಲಾಂಗ್ ಸಿಕ್ಸರ್ ಬಾರಿಸಿ ಫೇಮಸ್ ಆಗಿದ್ದರು.


ಮೊದಲ 7 ಪಂದ್ಯಗಳಲ್ಲಿ 4 ಶತಕ:


ವಿನೋದ್ ಕಾಂಬ್ಳಿ ಚೊಚ್ಚಲ ಪಂದ್ಯದ ನಂತರ ಟೀಮ್ ಇಂಡಿಯಾ ಪರ ಬ್ಯಾಟಿಂಗ್ ಮುಂದುವರಿಸಿದರು. ಮೊದಲ 7 ಪಂದ್ಯಗಳಲ್ಲಿ 4 ಶತಕಗಳನ್ನು ಗಳಿಸಿದರು. ಅದರಲ್ಲಿ ಎರಡು ದ್ವಿಶತಕಗಳು. ಇದಾದ ನಂತರ ಅವರು ಎಲ್ಲರಿಗೂ ಹೀರೋ ಆದರು. ಅಷ್ಟೇ ಅಲ್ಲ, ಭಾರತ ಪರ ಟೆಸ್ಟ್ ಪಂದ್ಯಗಳಲ್ಲಿ ವೇಗವಾಗಿ 1000 ರನ್ ಪೂರೈಸಿದರು. ಅವರು ಕೇವಲ 14 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು.


ವಿನೋದ್ ಕಾಂಬ್ಳಿ ಅವರ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ಅವರ ಅಶಿಸ್ತಿನ ಬಗ್ಗೆ ಚರ್ಚೆಯಲ್ಲಿದ್ದರು. ನಂತರ ಕಳಪೆ ಫಾರ್ಮ್‌ನಿಂದಾಗಿ, ಅವರು ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ, ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲು ಇಲ್ಲ. ಅವರ ವೃತ್ತಿಜೀವನದಲ್ಲಿ ಭಾರತಕ್ಕಾಗಿ 17 ಟೆಸ್ಟ್‌ಗಳಲ್ಲಿ 54.20 ರ ಸರಾಸರಿಯಲ್ಲಿ ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ 1084 ರನ್ ಗಳಿಸಿದರು. 104 ODIಗಳಲ್ಲಿ ಎರಡು ಶತಕಗಳು ಮತ್ತು 14 ಅರ್ಧ ಶತಕಗಳನ್ನು ಒಳಗೊಂಡಂತೆ 32.59 ರ ಸರಾಸರಿಯಲ್ಲಿ 2477 ರನ್ಗಳನ್ನು ಗಳಿಸಿದರು.


ಇದನ್ನೂ ಓದಿ: ICC Test ranking: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶುಭ ಸುದ್ದಿ: ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್-1 ಸ್ಥಾನ!


ಎರಡು ಮದುವೆ:


ವಿನೋದ್ ಕಾಂಬ್ಳಿ ತಮ್ಮ ಜೀವನದಲ್ಲಿ ಎರಡು ಬಾರಿ ವಿವಾಹವಾಗಿದ್ದಾರೆ. ಅವರು 1998 ರಲ್ಲಿ ಪುಣೆಯ ಹೋಟೆಲ್ ಬ್ಲೂ ಡೈಮಂಡ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ನೋಯೆಲ್ ಲೂಯಿಸ್ ಅವರನ್ನು ವಿವಾಹವಾದರು. ಆದರೆ ಈ ಪ್ರೇಮ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದರು. ಇದರ ನಂತರ ಕಾಂಬ್ಳಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ವಿವಾಹವಾದರು. ಸದ್ಯ ಕಾಂಬ್ಳಿ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.