IND vs NZ: ಟೀಂ ಇಂಡಿಯಾಗೆ ಹಠಾತ್ ಎಂಟ್ರಿಕೊಟ್ಟ ಈ ಅಪಾಯಕಾರಿ ಬ್ಯಾಟ್ಸ್‌ಮನ್‌! 

IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ ಅಂದರೆ ಜನವರಿ 18ರಂದು ಹೈದರಾಬಾದ್‌ನಲ್ಲಿ ಮಧ್ಯಾಹ್ನ 1:30ರಿಂದ ಶುರುವಾಗಲಿದೆ.

Written by - Puttaraj K Alur | Last Updated : Jan 17, 2023, 04:51 PM IST
  • ನಾಳೆಯಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ ಆರಂಭ
  • ಕೆ.ಎಲ್.ರಾಹುಲ್ ಸ್ಥಾನಕ್ಕೆ ಅವಕಾಶ ಪಡೆದ ಸ್ಫೋಟಕ ಬ್ಯಾಟ್ಸ್ಮನ್ ಇಶಾನ್ ಕಿಶನ್
  • ವಿರಾಟ್ ಕೊಹ್ಲಿ ಫಾರ್ಮ್‍ಗೆ ಮರಳಿರುವುದು ನ್ಯೂಜಿಲ್ಯಾಂಡ್ ತಂಡದ ನಿದ್ದೆಗೆಡಿಸಿದೆ
IND vs NZ: ಟೀಂ ಇಂಡಿಯಾಗೆ ಹಠಾತ್ ಎಂಟ್ರಿಕೊಟ್ಟ ಈ ಅಪಾಯಕಾರಿ ಬ್ಯಾಟ್ಸ್‌ಮನ್‌!  title=
ಭಾರತ vs ನ್ಯೂಜಿಲ್ಯಾಂಡ್ ಏಕದಿನ ಸರಣಿ

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ ಅಂದರೆ ಜನವರಿ 18ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಮಧ್ಯಾಹ್ನ 1:30ರಿಂದ ಶುರುವಾಗಲಿರುವ ಈ ಏಕದಿನ ಪಂದ್ಯದಲ್ಲಿ ಆಡುವ 11ರ ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಟೀಂ ಇಂಡಿಯಾಗೆ ಸ್ಫೋಟಕ ಬ್ಯಾಟಿಂಗ್ ನಡೆಸುವ ಅಪಾಯಕಾರಿ ಆಟಗಾರನ ಎಂಟ್ರಿಯಾಗಿದೆ. ಈ ಆಟಗಾರನ ಆಗಮನದಿಂದ ನ್ಯೂಜಿಲೆಂಡ್ ತಂಡದಲ್ಲಿ ತಲ್ಲಣ ಉಂಟಾಗಿದೆ.

ಟೀಂ ಇಂಡಿಯಾಗೆ ಈ ಬ್ಯಾಟ್ಸ್‌ಮನ್‌ ಹಠಾತ್ ಪ್ರವೇಶ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಆಡುವ XIರಲ್ಲಿ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿದ್ದು, ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. ಕೆ.ಎಲ್.ರಾಹುಲ್ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆಗೆ ಜ.23ರಂದು ಮದುವೆಯಾಗುತ್ತಿರುವ ಕಾರಣ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯಲ್ಲಿ ಆಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಅವರ ಸ್ಥಾನದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ: Babar Azam: ಬಾಬರ್ ಆಜಮ್ ಖಾಸಗಿ ವಿಡಿಯೋ ಸೋರಿಕೆ: ಪ್ರತಿಕ್ರಿಯೆ ನೀಡಿ ಟಾಂಗ್ ಕೊಟ್ಟ ಪಾಕ್ ನಾಯಕ

ಸ್ಫೋಟಕ ಬ್ಯಾಟ್ಸ್ಮನ್‍ ಇಶಾನ್ ಕಿಶನ್

ಇಶಾನ್ ಕಿಶನ್ ಬುಧವಾರ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ 11ರಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವ ದಾಖಲೆಯ ದ್ವಿಶತಕದ ಹೊರತಾಗಿಯೂ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಚರ್ಚೆಯ ನಡುವೆಯೇ ತಂಡಕ್ಕೆ ಕಿಶನ್ ಹಠಾತ್ ಎಂಟ್ರಿಯಾಗಿದೆ. 4ರ ಕ್ರಮಾಂಕದಲ್ಲಿ ಕಿಶನ್ ಬ್ಯಾಟಿಂಗ್ ನಡೆಸಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ದ್ವಿಶತಕ ಸಿಡಿಸಿದ ಕಿಶನ್‍ರನ್ನು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗಿಡಲಾಗಿತ್ತು. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಅವರಿಗೆ ಆದ್ಯತೆ ನೀಡಲಾಗಿತ್ತು. ಶುಬ್ಮನ್ ಗಿಲ್ 3 ಪಂದ್ಯಗಳಲ್ಲಿ 70, 21 ಮತ್ತು 116 ರನ್ ಗಳಿಸಿದ್ದರು.

ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ

ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಜೋಡಿಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ವೈಯಕ್ತಿಕ ಕಾರಣಗಳಿಂದ ಕೆ.ಎಲ್.ರಾಹುಲ್ ಲಭ್ಯರಿಲ್ಲ, ಹೀಗಾಗಿ ಕಿಶನ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಬಹುದು. ಇದುವರೆಗಿನ 10 ಏಕದಿನ ಪಂದ್ಯಗಳ ಪೈಕಿ ಮೂರರಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ತಂಡದಲ್ಲಿ 2ನೇ ವಿಕೆಟ್ ಕೀಪರ್ ಕೆ.ಎಸ್.ಭರತ್ ಆಯ್ಕೆಯಾಗುವ ಸಾಧ್ಯತೆ ಕಡಿಮೆಯಾಗಿದ್ದು, ರಾಹುಲ್ ಅನುಪಸ್ಥಿತಿಯಲ್ಲಿ ಅವರನ್ನು ಕವರ್ ಆಗಿ ಇರಿಸಲಾಗಿದೆ.

ಇದನ್ನೂ ಓದಿ: Ranji Trophy 2023: ಸ್ಟಾರ್ ಕ್ರಿಕೆಟಿಗನಿಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು: ಹೊಸ ಕ್ಯಾಪ್ಟನ್ ಘೋಷಣೆ!

ನ್ಯೂಜಿಲ್ಯಾಂಡ್‌ಗೆ ಎಚ್ಚರಿಕೆಯ ಗಂಟೆ!

ಈ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿ ಗಮನಿಸಿದರೆ, ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಲಯವನ್ನು ಕಾಯ್ದುಕೊಳ್ಳಲು ಬಯಸಿತ್ತು. ಶ್ರೀಲಂಕಾ ವಿರುದ್ಧ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ಶ್ಲಾಘನೀಯವಾಗಿತ್ತು. ಗಿಲ್ ಮತ್ತು ವಿರಾಟ್ ಕೊಹ್ಲಿ ಹೊರತುಪಡಿಸಿ, ರೋಹಿತ್ 83 ಮತ್ತು 42 ರನ್ ಗಳಿಸಿದರು. ಆದರೆ ಅವರಿಗೆ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಕೊಹ್ಲಿ ಒಂದರ ಹಿಂದೆ ಒಂದರಂತೆ ಶತಕ ಬಾರಿಸಿ ಹಳೆಯ ಫಾರ್ಮ್‌ಗೆ ಮರಳುತ್ತಿರುವುದು ನ್ಯೂಜಿಲೆಂಡ್‌ಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ

ತಂಡಗಳು:

ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ.ಎಸ್.ಭರತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಶಮಿ ಮತ್ತು ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ಫಿನ್ ಅಲೆನ್, ಡೌಗ್ ಬ್ರಾಸ್ವೆಲ್, ಮೈಕೆಲ್ ಬ್ರಾಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫ್ಫಿ, ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಷಿಪ್ಲಿ ಮತ್ತು ಬಿಲಾ ಸೋಧಿನರ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News