ಟಿ20 ವಿಶ್ವಕಪ್‌ಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಆಟ ಪ್ರದರ್ಶಿಸಿದರು. ಇವರಿಬ್ಬರ ಕಾರಣದಿಂದ ಟೀಂ ಇಂಡಿಯಾ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಆದರೆ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರು ಎಸೆದ ಬಾಲ್ ಸೂರ್ಯಕುಮಾರ್ ಯಾದವ್ ಅವರ ಹೆಲ್ಮೆಟ್‌ಗೆ ತಗುಲಿ ಕ್ರೀಡಾಂಗಣದಲ್ಲಿದ್ದವರನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: T20 ವಿಶ್ವಕಪ್‌ ಕ್ರಿಕೆಟ್‌ : ಅಭ್ಯಾಸ ಪಂದ್ಯದಲ್ಲಿ ಆಸಿಸ್‌ ಪಡೆ ಬಗ್ಗು ಬಡಿದ ಟೀಂ ಇಂಡಿಯಾ


ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಆಟ ಪ್ರದರ್ಶಿಸಿದರು. ಮೈದಾನದ ಪ್ರತೀ ಮೂಲೆಗಳಿಗೂ ಬಾಲ್ ಎಸೆಯುತ್ತಿದ್ದ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 50 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್‌ನಿಂದಾಗಿ ಟೀಂ ಇಂಡಿಯಾ ಅದ್ಭುತ ಸ್ಕೋರ್ ಮಾಡಲು ಸಾಧ್ಯವಾಯಿತು.


ತಪ್ಪಿದ ಭಾರೀ ಅನಾಹುತ:


ಸೂರ್ಯಕುಮಾರ್ ಯಾದವ್ ಯಾವಾಗಲೂ ವಿಕೆಟ್ ಹಿಂದಿನಿಂದ ರನ್ ಗಳಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ, ಅವರು ಮಿಚೆಲ್ ಸ್ಟಾರ್ಕ್ ಅವರ ಐದನೇ ಎಸೆತವನ್ನು ಎದುರಿಸಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅವರ ಹೆಲ್ಮೆಟ್‌ಗೆ ತಗುಲಿತ್ತು. ಹೀಗಾಗಿ ಸ್ವಲ್ಪ ಸಮಯದವರೆಗೆ ಪಂದ್ಯವನ್ನು ನಿಲ್ಲಿಸಲಾಯಿತು. ಆದರೆ ಸೂರ್ಯಕುಮಾರ್ ಯಾದವ್ ಗಾಯದಿಂದ ಪಾರಾಗಿದ್ದಾರೆ. ಇದಾದ ಬಳಿಕ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಬಂದರು. ಇದಾದ ನಂತರ ಸೂರ್ಯಕುಮಾರ್ ಮತ್ತೆ ಬ್ಯಾಟಿಂಗ್ ಪ್ರಕ್ರಿಯೆ ಮುಂದುವರಿಸಿದರು.


Virat Kohli: ವಿರಾಟ್ ‘ರಾಕೆಟ್ ಥ್ರೋ’ ಅಬ್ಬರಕ್ಕೆ ಕಾಂಗರೂ ಪಡೆ ಕಂಗಾಲು: ವ್ಹಾವ್! ಅನಿಸೋ ಈ ವಿಡಿಯೋ ನೋಡಿ


2022ರಲ್ಲಿ ಸೂರ್ಯಕುಮಾರ್ ಯಾದವ್ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅವರು ಮೈದಾನದ ಮೂಲೆ ಮೂಲೆಗೂ ಅದ್ಭುತ ಬ್ಯಾಟಿಂಗ್ ಮೂಲಕ ಬಾಲ್ ಎಸೆಯುವಲ್ಲಿ ನಿಪುಣರಾಗಿದ್ದಾರೆ ಇವರನ್ನು ಭಾರತದ ಎಬಿ ಡಿವಿಲಿಯರ್ಸ್ ಎಂದು ಕರೆಯಲಾಗುತ್ತದೆ. 2022 ರ ಟಿ 20 ವಿಶ್ವಕಪ್‌ನಲ್ಲಿ ಭಾರತೀಯರು ಇವರಿಂದ ಅದ್ಭುತ ಪ್ರದರ್ಶನವನ್ನು ನಿರೀಕ್ಷಿಸತ್ತಿದ್ದಾರೆ. ಭಾರತ ಪರ 34 ಟಿ20 ಪಂದ್ಯಗಳಲ್ಲಿ 1045 ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.