Suryakumar Yadav: ಶ್ರೀಲಂಕಾ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ಪಂದ್ಯ ಹಾಗೂ ಸರಣಿ ಕೈವಶ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ 45 ಎಸೆತಗಳಲ್ಲಿ ವೇಗದ ಬ್ಯಾಟಿಂಗ್ ಮಾಡುತ್ತಾ ಶತಕ ಪೂರೈಸಿದರು. 51 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿ ತಂಡದ ಸ್ಕೋರ್ 228ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರ್ಯಕುಮಾರ್ ಈ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದ್ದು, ಇವುಗಳ ಸಹಾಯದಿಂದಲೇ 82 ರನ್ ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  IND vs SL: ಸರಣಿ ಗೆದ್ದು, ಪಾಕ್ ಹಿಂದಿಕ್ಕಿ ದಾಖಲೆ ಸೃಷ್ಟಿಸಿದ ಭಾರತ: ಇಂಗ್ಲೆಂಡ್ ರೆಕಾರ್ಡ್ ಸರಿಗಟ್ಟಿದ ಟೀಂ ಇಂಡಿಯಾ


ಇನ್ನೊಂದೆಡೆ ರಾಹುಲ್ ತ್ರಿಪಾಠಿ 16 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 35 ರನ್ ಗಳಿಸಿ ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ. ಅಕ್ಷರ್ ಪಟೇಲ್ 9 ಎಸೆತಗಳಲ್ಲಿ 21 ರನ್ ಮತ್ತು ಶುಭಮನ್ ಗಿಲ್ 36 ಎಸೆತಗಳಲ್ಲಿ 46 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ 229 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 137 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ 91 ರನ್‌ಗಳ ದೊಡ್ಡ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ ಭಾರತ ಈ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.


ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮೈದಾನದ ಸುತ್ತ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದರು. ಈ ವೇಳೆ ಎದ್ದು ಬಿದ್ದು ಮೈದಾನದಲ್ಲಿ ಬೌಂಡರಿ ಬಾರಿಸಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಅದ್ಭುತ ಕ್ಷಣದಂತೆ ಭಾಸವಾಗಿತ್ತು. ಪಂದ್ಯದ ಗೆಲುವಿನ ನಂತರ ತಮ್ಮ ಬಿರುಸಿನ ಇನ್ನಿಂಗ್ಸ್ ಕುರಿತು ಸೂರ್ಯಕುಮಾರ್ ಯಾದವ್ ಮಾತನಾಡಿದ್ದು, “ಆಟಕ್ಕೆ ತಯಾರಿ ನಡೆಸುವಾಗ, ನೀವು ನಿಮ್ಮ ಮೇಲೆ ಒತ್ತಡವನ್ನು ಇಟ್ಟುಕೊಳ್ಳಬೇಕು. ಅದು ತುಂಬಾ ಮುಖ್ಯವಾಗಿರುತ್ತದೆ. ಯಾವಾಗ ನಿಮ್ಮ ಮೇಲೆ ನೀವು ಹೆಚ್ಚು ಒತ್ತಡವನ್ನು ಹಾಕುತ್ತೀರಿ, ಆಗ ನಿಮ್ಮ ಆಟವು ಹೆಚ್ಚು ಸುಧಾರಿಸುತ್ತದೆ. ನಿಮ್ಮ ಶ್ರಮ ಇದರಲ್ಲಿ ಸೇರಿದೆ” ಎಂದು ಹೇಳಿದ್ದಾರೆ.


ಕೆಲವು ಉತ್ತಮ ಅಭ್ಯಾಸ ಅವಧಿಗಳಿಂದಾಗಿ ನನ್ನ ಬ್ಯಾಟಿಂಗ್ ಕೂಡ ಸುಧಾರಿಸಿದೆ ಎಂದು ಅವರು ಹೇಳಿದರು. ಇಂದು ನಾನು ಆಡಿದ ರೀತಿಯ ಇನ್ನಿಂಗ್ಸ್‌ನಿಂದ ನನಗೆ ಸಂತೋಷವಾಗಿದೆ. ನಾಯಕ ಕೂಡ ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.


“ಕೆಲವು ಹೊಡೆತಗಳು ಮೊದಲೇ ನಿರ್ಧರಿಸಲ್ಪಟ್ಟಿವೆ. ಇಂದು ನಾನು ಬಾರಿಸಿದ ಹೊಡೆತಗಳು ಕಳೆದ ಒಂದು ವರ್ಷದಿಂದ ನಾನು ಆಡುತ್ತಿರುವ ಪಂದ್ಯಗಳ ಶ್ರಮ. ಇದರಲ್ಲಿ ಭಿನ್ನವೇನೂ ಇಲ್ಲ. ಹಿಂಬದಿಯ ಬೌಂಡರಿ ಚಿಕ್ಕದಿದ್ದುದರಿಂದ ಆ ದಿಕ್ಕಿನಲ್ಲಿ ಬೌಂಡರಿಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದೆ. ಆದರೆ ನೀವು ಆಡುವಾಗ ಎಲ್ಲಾ ರೀತಿಯ ಶಾಟ್ ಗಳನ್ನು ಹೊಡೆಯಲು ಸಿದ್ಧರಾಗಿರಬೇಕು. ಅಂತರವನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕ್ಕೆ ಅನುಗುಣವಾಗಿ ಶಾಟ್‌ಗಳನ್ನು ಆಯ್ಕೆ ಮಾಡಿಕೊಂಡೆ” ಎಂದು ಹೇಳಿದರು.


ಇದನ್ನೂ ಓದಿ: IND vs SL: ಸರಣಿ ಗೆದ್ದು, ಪಾಕ್ ಹಿಂದಿಕ್ಕಿ ದಾಖಲೆ ಸೃಷ್ಟಿಸಿದ ಭಾರತ: ಇಂಗ್ಲೆಂಡ್ ರೆಕಾರ್ಡ್ ಸರಿಗಟ್ಟಿದ ಟೀಂ ಇಂಡಿಯಾ


“2022 ದಾಟಿದೆ. 2023 ರಲ್ಲಿ ಹೊಸ ಆರಂಭವಾಗಿದೆ. ನಾನು ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಲೇ ಇರುತ್ತೇನೆ. ನನ್ನ ಆಟವನ್ನು ಆಡಲು ಕೋಚ್ ರಾಹುಲ್ ದ್ರಾವಿಡ್ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ” ಎಂದು ಸೂರ್ಯ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.