T20 World Cup 2022: ಟೀಂ ಇಂಡಿಯಾ ಮೋಸದಿಂದ ಗೆದ್ದಿದೆ ಎಂದ ಪಾಕಿಸ್ತಾನ..!
ಟಿ-20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲ್ಲುತ್ತಿದ್ದ ಪಂದ್ಯದಲ್ಲಿ ಸೋಲು ಕಂಡಿದ್ದು ಪಾಕಿಸ್ತಾನಕ್ಕೆ ತೀವ್ರ ಹತಾಶೆ ಮೂಡಿಸಿದೆ.
ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ವಿರೋಚಿತ ಗೆಲುವು ಸಾಧಿಸಿದ ಟೀಂ ಇಂಡಿಯಾ ಕಳೆದ ಟೂರ್ನಿ ಸೋಲಿನ ಸೇಡು ತೀರಿಸಿಕೊಂಡಿದೆ. ಭಾನುವಾರದ ನಡೆದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕೊನೆ ಎಸೆತದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಜಯಭೇರಿ ಬಾರಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 20 ಓವರ್‍ಗಳಲ್ಲಿ 159 ರನ್ ಗಳಿಸಿತು. ಸವಾಲಿನ ಟಾರ್ಗೆಟ್ ಬೆನ್ನುಹತ್ತಿದ ಭಾರತ ವಿರಾಟ್ ಕೊಹ್ಲಿ(ಅಜೇಯ 82) ಮತ್ತು ಹಾರ್ದಿಕ್ ಪಾಂಡ್ಯ (40) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು.
ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಪಂದ್ಯದ ಕೊನೆಯ ಓವರ್ ನಾಟಕೀಯ ಸನ್ನಿವೇಶಕ್ಕೆ ಕಾರಣವಾಯಿತು. ಅಂತಿಮ ಓವರ್ ನಲ್ಲಿ ಭಾರತದ ಗೆಲುವಿಗೆ 16 ರನ್ ಬೇಕಿತ್ತು. ನವಾಜ್ ಎಸೆದ ಈ ಓವರ್‍ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿ ಔಟಾದರು. ಬಳಿಕ ಕ್ರೀಸ್‍ಗೆ ಬಂದ ದಿನೇಶ್ ಕಾರ್ತಿಕ್ 2ನೇ ಎಸೆತದಲ್ಲಿ 1 ರನ್ ಬಾರಿಸಿ ಕೊಹ್ಲಿಗೆ ಸ್ಟ್ರೈಕ್ ನೀಡಿದರು. 3ನೇ ಎಸೆತದಲ್ಲಿ ಕೊಹ್ಲಿ 2 ರನ್ ಕದ್ದರು.
ಇದನ್ನೂ ಓದಿ: Sunil Gavaskar: ಪಾಕ್ ವಿರುದ್ಧ ಟೀಂ ಇಂಡಿಯಾದ ಗೆಲುವನ್ನು ಮಗುವಿನಂತೆ ಕುಣಿದು ಸಂಭ್ರಮಿಸಿದ ಸುನಿಲ್ ಗವಾಸ್ಕರ್
ಟೀಂ ಇಂಡಿಯಾ ಗೆಲುವಿನ ರೂವಾರಿಗಳ ಮನದಾಳದ ಮಾತು: Hardik-Virat ಸಂದರ್ಶನದಲ್ಲಿದೆ ರೋಚಕ ಮಾಹಿತಿ
ಪಂದ್ಯದ ಬಳಿಕ ಪಾಕಿಸ್ತಾನದ ಮಾಜಿ ಆಟಗಾರರು, ಅಭಿಮಾನಿಗಳು ಭಾರತ ತಂಡವು ಮೋಸದಿಂದ ಗೆದ್ದಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆ ಎಸೆತ ನೋ ಬಾಲ್ ಆಗಿರಲಿಲ್ಲ, ಅದು ಯಾರ್ಕರ್ ಎಸೆತವಾಗಿತ್ತು ಅಂತಾ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ