ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಗೆಲುವಿಗೆ ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ಪ್ರಮುಖ ಕಾರಣ. ಇನ್ನು ಭಾರತ ಪಾಕ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದ ನಂತರ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ: Arshdeep Singh: ಏಷ್ಯಾಕಪ್ ನಲ್ಲಿ ಟ್ರೋಲ್…ವಿಶ್ವಕಪ್ ನಲ್ಲಿ ಗೋಲ್ಡ್: ಅರ್ಷದೀಪ್ ಆಟಕ್ಕೆ ‘ಹರ್ಷ’ವಾದ ಟೀಂ ಇಂಡಿಯಾ
ಐಸಿಸಿ ಕಾಮೆಂಟರಿ ತಂಡದ ಸದಸ್ಯರಾಗಿರುವ 73ರ ಹರೆಯದ ಗವಾಸ್ಕರ್ ಅವರು ಇರ್ಫಾನ್ ಪಠಾಣ್ ಮತ್ತು ಕ್ರಿಸ್ ಶ್ರೀಕಾಂತ್ ರಂತಹ ದಿಗ್ಗಜರೊಂದಿಗೆ ಬೌಂಡರಿ ಬಳಿ ನಿಂತಿದ್ದರು. ಈ ವೇಳೆ ಆರ್ ಅಶ್ವಿನ್ ಗೆಲುವಿನ ರನ್ ಗಳಿಸುತ್ತಿದ್ದಂತೆ ಗವಾಸ್ಕರ್ ಸಂತಸದಲ್ಲಿ ಮುಳುಗಿದರು.
ಇರ್ಫಾನ್ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಹೀಗೆ ಶೀರ್ಷಿಕೆ ನೀಡಿದ್ದಾರೆ. “ಶ್ರೇಷ್ಠ ಸುನಿಲ್ ಗವಾಸ್ಕರ್ ಭಾರತದ ಗೆಲುವನ್ನು ಆಚರಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ವಿರಾಟ್ ನೀನು ಭಾರತದ ನಿಜವಾದ ರಾಜ” ಎಂದು ಹೇಳಿದ್ದಾರೆ.
The celebration by Sunil Gavaskar is gold. pic.twitter.com/5RkFtEJ1nx
— Johns. (@CricCrazyJohns) October 23, 2022
ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ 90,293 ಅಭಿಮಾನಿಗಳ ಮುಂದೆ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಅದ್ಭುತ ಜಯ ಸಾಧಿಸಲು ಮಾರ್ಗದರ್ಶನ ನೀಡುವ ಮೂಲಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ನಲ್ಲಿ ಏಕೆ ಅತ್ಯುತ್ತಮ ಚೇಸರ್‌ಗಳಲ್ಲಿ ಒಬ್ಬರು ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಅ. 27 ರಂದು ರಾಜ್ಯದ ಮಹಿಳಾ ತಂಡದ ಆಯ್ಕೆ
ಬಲ-ಎಡ ವೇಗದ ಬೌಲಿಂಗ್ ಜೋಡಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನವನ್ನು ತಮ್ಮ 20 ಓವರ್‌ಗಳಲ್ಲಿ 159/8 ಗೆ ನಿರ್ಬಂಧಿಸಲು ಸಹಾಯ ಮಾಡಿದರು. ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ (40) ನಂತರ 77 ಎಸೆತಗಳಲ್ಲಿ 113 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟವನ್ನು ಹಂಚಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ