WTC Final: ಪ್ಲೇಯಿಂಗ್ ಇಲೆವನ್ ನಲ್ಲಿ ಸ್ಥಾನ ಪಡೆದ ರವೀಂದ್ರ ಜಡೇಜಾ, ಆರ್.ಆಶ್ವಿನ್
ಶುಕ್ರವಾರದಿಂದ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಆಡಲು ಟೀಮ್ ಇಂಡಿಯಾ ಗುರುವಾರ ಸಂಜೆ ಪ್ಲೇಯಿಂಗ್ ಇಲೆವನ್ ಘೋಷಿಸಿದೆ.
ನವದೆಹಲಿ: ಶುಕ್ರವಾರದಿಂದ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಆಡಲು ಟೀಮ್ ಇಂಡಿಯಾ ಗುರುವಾರ ಸಂಜೆ ಪ್ಲೇಯಿಂಗ್ ಇಲೆವನ್ ಘೋಷಿಸಿದೆ.
ರೋಹಿತ್ ಶರ್ಮಾ ಅವರು ಶುಬ್ಮನ್ ಗಿಲ್ ಜೊತೆಗೆ ಇನ್ನಿಂಗ್ಸ್ ತೆರೆಯಲು ಸಜ್ಜಾಗಿದ್ದರೆ, ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಉಪ ಅಜಿಂಕ್ಯ ರಹಾನೆ ನಡುವೆ ಹಂಚಿಕೊಳ್ಳಲಿದ್ದಾರೆ.ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದರೆ, ಭಾರತ ಇಬ್ಬರು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರನ್ನು ಲೈನ್ ಅಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.ವೇಗದ ಬೌಲಿಂಗ್ ನಲ್ಲಿ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಕಣಕ್ಕೆ ಇಳಿಯಲಿದ್ದಾರೆ.
ಇದನ್ನೂ ಓದಿ: Top 25 Global Instagram Influencer ಪಟ್ಟಿ ಸೇರಿದ ವಿರಾಟ್ - ಅನುಷ್ಕಾ
Kohli-Dhoni ಇಬ್ಬರಲ್ಲಿ ಜೀನಿಯಸ್ ಕ್ಯಾಪ್ಟನ್ ಯಾರು? Michael Vaughan ಹೇಳಿದ್ದೇನು?
ಫೈನಲ್ ನಲ್ಲಿ ಆಡುವ ಭಾರತದ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ
ಇದನ್ನೂ ಓದಿ: Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.