ಇಂದು ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಗೆದ್ದು, 1-0 ಅಂತರದಲ್ಲಿರುವ ಟೀಂ ಇಂಡಿಯಾ ಇಂದೂ ಸಹ ವಿಜಯ ಸಾಧಿಸಿ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. 


COMMERCIAL BREAK
SCROLL TO CONTINUE READING

ಒಂದೆಡೆ ಈ ಪಂದ್ಯಾಟದಲ್ಲಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳುವುದಿಲ್ಲ. ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ಈ ಸುದ್ದಿ ಟೀಂ ಇಂಡಿಯಾ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಳೆದ ಟಿ20 ವಿಶ್ವಕಪ್‌ನಿಂದ ಭಾರತ ಆಡಿದ 33 ಟಿ20ಐಗಳಲ್ಲಿ ಕೇವಲ 5ರಲ್ಲಿ ಮಾತ್ರ ಬುಮ್ರಾ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ: Indonesia: ಫುಟ್ ಬಾಲ್ ಪಂದ್ಯದ ವೇಳೆ ಹಿಂಸಾಚಾರ, 150ಕ್ಕೂ ಹೆಚ್ಚು ಜನ ಸಾವು


ಆದರೆ ಅರ್ಷದೀಪ್ ಸಿಂಗ್ ಬುಮ್ರಾ ಅನುಪಸ್ಥಿತಿಯನ್ನು ತುಂಬುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದ ಅರ್ಷದೀಪ್ ಮೂರು ವಿಕೆಟ್ ಕಬಳಿಸಿದ್ದರು. ಇದೇ ಅಬ್ಬರ ಎರಡನೇ ಪಂದ್ಯದಲ್ಲೂ ಮುಂದುವರೆದರೆ ಭಾರತ ಆಸ್ಟ್ರೇಲಿಯಾ ಬಳಿಕ ದಕ್ಷಿಣ ಆಫ್ರಿಕಾ ಸರಣಿಯನ್ನು ಗೆಲ್ಲುವ ಸಾಧ್ಯತೆಯಿದೆ.


ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಸೂರ್ಯಕುಮಾರ್ ಯಾದವ್ ಹರಿಣಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದ ಯಾದವ್ ಕೇವಲ 33 ಬಾಲ್ ಗೆ 50 ಪೇರಿಸಿದ್ದರು. ಉಳಿದಂತೆ ಕನ್ನಡಿಗ ರಾಹುಲ್ 56 ಬಾಲ್ ಗೆ 51 ರನ್ ಬಾರಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು.


ತಿರುವನಂಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂ ಬೌಲರ್ ಗಳಿಗೆ ಉತ್ತಮವಾದ ಪಿಚ್ ಎಂದು ಪರಿಗಣಿಸಲಾಗಿದೆ. ಆದರೆ ಬ್ಯಾಟಿಂಗ್ ಮಾಡುವವರು ಕಷ್ಟ ಅನುಭವಿಸಬೇಕಾಗಿದೆ. ಇದಕ್ಕೆಸಾಕ್ಷಿ ಎಂಬಂತೆ ಕಳೆದ ಪಂದ್ಯವೂ ನಡೆದಿತ್ತು. ಆದರೆ ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಇದುವರೆಗೆ ಎರಡು ಒಡಿಐ ಮತ್ತು ಐದು ಟಿ20 ಪಂದ್ಯಗಳು ನಡೆದಿದೆ. ಅದರಲ್ಲಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ತಂಡಗಳೇ ಹೆಚ್ಚಿನ ಪಂದ್ಯ ಗೆದ್ದಿದೆ ಎಂದು ವರದಿಗಳು ತಿಳಿಸುತ್ತವೆ.


ಈ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡೆದಿದ್ದ ಪಂದ್ಯಾಟದಲ್ಲಿ ಅತೀ ಹೆಚ್ಚು ಅಂದರೆ ಎರಡು ವಿಕೆಟ್ ನಷ್ಟಕ್ಕೆ ಬರೋಬ್ಬರಿ 326 ರನ್ ಪೇರಿಸಲಾಗಿತ್ತು. ಈ ಮೂಲಕ ವಿಂಡೀಸ್ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು.  ಇದರ ಜೊತೆಗೆ ಮಹಿಳೆಯರ ವನ್ ಡೇ ಇಂಟರ್ ನ್ಯಾಷನಲ್ ಪಂದ್ಯಾಟ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿದ್ದು, ಈ ಪಂದ್ಯದಲ್ಲಿ 10 ವಿಕೆಟ್ ನಷ್ಟಕ್ಕೆ ಕೇವಲ 50 ರನ್ ಬಾರಿಸಲಾಗಿತ್ತು. ಇದು ಇಲ್ಲಿನ ಅತೀ ಕಡಿಮೆ ರನ್ ಗಳಿಕೆ ಮಾಡಿರುವ ವರದಿ.


ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ T20I ಇಂದು ಸಂಜೆ 7 ಗಂಟೆಗೆ ಅಸ್ಸಾಂನ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಒಂದು ಪಂದ್ಯ ಗೆದ್ದು ಮುನ್ನಡೆ ಸಾಧಿಸಿರುವ ಭಾರತ, ಈ ಆಟವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.


ಭಾರತ ಸಂಭಾವ್ಯ ಆಟಗಾರರ ಪಟ್ಟಿ: ರೋಹಿತ್ ಶರ್ಮಾ (ಕ್ಯಾ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿ.ಕೀ), ಅಕ್ಷರ್ ಪಟೇಲ್, ಆರ್. ಅಶ್ವಿನ್, ದೀಪಕ್ ಚಹಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್


ದಕ್ಷಿಣ ಆಫ್ರಿಕಾ ಸಂಭಾವ್ಯ ಆಟಗಾರರ ಪಟ್ಟಿ: ಟೆಂಬಾ ಬವುಮಾ (ಕ್ಯಾ), ಕ್ವಿಂಟನ್ ಡಿ ಕಾಕ್ (ವಿ.ಕೀ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ


ನಿಮಗಿದು ಗೊತ್ತೇ?


ಕಳೆದ ವರ್ಷದ ಟಿ 20 ವಿಶ್ವಕಪ್‌ ಬಳಿಕ ಗುವಾಹಟಿಯಲ್ಲಿ ನಡೆದ 9 ಟಿ20ಐ ಸರಣಿಗಳಲ್ಲಿ ಭಾರತ 8 ಪಂದ್ಯವನ್ನು ಗೆದ್ದಿದೆ. ಆದರೆ ದಕ್ಷಿಣ ಆಫ್ರಿಕಾ ಭಾರತದಲ್ಲಿ T20I ಸರಣಿಯನ್ನು ಎಂದೂ ಕಳೆದುಕೊಂಡಿಲ್ಲ. ಈ ಬಾರಿ ಸರಣಿ ವಶಪಡಿಸಿಕೊಂಡು ದ. ಆಫ್ರಿಕಾದ ಈ ರೆಕಾರ್ಡ್ ನ್ನು ಮುರಿಯುವ ಕುತೂಹಲ ಭಾರತದ್ದು. 


ಇದನ್ನೂ ಓದಿ: IND vs SA 2nd T20 : ಎರಡನೇ ಟಿ20 ಪಂದ್ಯ ಗೆದ್ದು ಇತಿಹಾಸ ಸೃಷ್ಟಿಸಲಿದೆ ಟೀಂ ಇಂಡಿಯಾ!


ಇನ್ನೊಂದೆಡೆ ಐಪಿಎಲ್ 2022 ರ ನಂತರ ಟಿ 20 ಗಳಲ್ಲಿ ಕ್ವಿಂಟನ್ ಡಿ ಕಾಕ್ ಅವರ ಪವರ್‌ಪ್ಲೇ ಪ್ರಭಾವವು ಗಮನಾರ್ಹವಾಗಿ ಕುಸಿದಿದೆ. ಅವರು ಸರಣಿಯ ಆರಂಭದ ಮೊದಲು 19 ಇನ್ನಿಂಗ್ಸ್‌ಗಳಿಂದ 14.27 ಮತ್ತು 103.29 SR ಸರಾಸರಿಯಲ್ಲಿ 157 ರನ್ ಗಳಿಸಿದ್ದರು. ಆದರೆ, ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ಬಾಲ್ ಗೆ ಕೇವಲ 1 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.