Women's Asia Cup: ಏಷ್ಯಾ ಕಪ್ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾ ತಂಡವನ್ನು ಸೋಲಿಸಿದ ಭಾರತೀಯ ವನಿತೆಯರು

IND-W vs SL-W: ಏಷ್ಯಾ ಕಪ್ ಮಹಿಳಾ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತೀಯ ವನಿತೆಯರು, ನಿಗದಿತ 20 ಓವರ್ ಗಳಲ್ಲಿ 156 ರನ್ ಗಳನ್ನು ಕಲೆ ಹಾಕಿದ್ದಾರೆ. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ವನಿತೆಯರ ತಂದ 18.2 ಓವರ್ ಗಳಲ್ಲಿ ಕೇವಲ 109 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿದೆ.  

Written by - Nitin Tabib | Last Updated : Oct 1, 2022, 05:32 PM IST
  • ಇದಕ್ಕೂ ಮೊದಲು ಜೆಮಿಮಾ ರಾಡ್ರಿಗಸ್ ಭಾರತ ತಂಡದ ಪರ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ ಮತ್ತು
  • ನಂತರ ದಯಾಲನ್ ಹೇಮಲತಾ, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ಮೆರೆದಿದ್ದಾರೆ.
  • ಹೇಮಲತಾ ಮೂರು ವಿಕೆಟ್ ಕಬಳಿಸಿದರೆ, ದೀಪ್ತಿ ಮತ್ತು ಪೂಜಾ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.
Women's Asia Cup: ಏಷ್ಯಾ ಕಪ್ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾ ತಂಡವನ್ನು ಸೋಲಿಸಿದ ಭಾರತೀಯ ವನಿತೆಯರು title=
Women's Asia Cup 2022

India Women vs Sri Lanka Women: 2022ರ ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ಮಹಿಳಾ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿದೆ. ಸಿಲ್ಹೆಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 156 ರನ್ ಗಳಿಸಿದೆ. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 18.2 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ಆಲೌಟ್ ಆಗಿದೆ.

ಇದಕ್ಕೂ ಮೊದಲು ಜೆಮಿಮಾ ರಾಡ್ರಿಗಸ್ ಭಾರತ ತಂಡದ ಪರ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ ಮತ್ತು ನಂತರ ದಯಾಲನ್ ಹೇಮಲತಾ, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ಮೆರೆದಿದ್ದಾರೆ. ಹೇಮಲತಾ ಮೂರು ವಿಕೆಟ್ ಕಬಳಿಸಿದರೆ, ದೀಪ್ತಿ ಮತ್ತು ಪೂಜಾ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ-ಟೀಮ್ ಇಂಡಿಯಾ ಪ್ರವೇಶಿಸಲಿದ್ದಾರೆ ಈ ಮಾರಣಾಂತಿಕ ವೇಗಿ! ಎದುರಾಳಿಗೆ ನಡುಕ ಹುಟ್ಟಿಸೋದು ಗ್ಯಾರಂಟಿ

ಬ್ಯಾಟಿಂಗ್ ವಿಫಲವಾದ ಶ್ರೀಲಂಕಾ
ಭಾರತ ನೀಡಿದ 151 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಅಟಪಟ್ಟು ಕೇವಲ 05 ರನ್ ಗಳಿಸಿ ಔಟಾದರು. ಇದಾದ ಬಳಿಕ ಶ್ರೀಲಂಕಾ ನಿಗದಿತ ಅಂತರದಲ್ಲಿ ತನ್ನ ವಿಕೆಟ್ ಕಳೆದುಕೊಂಡಿತು. ಭಾರತದ ಮಾರಕ ಬೌಲಿಂಗ್ ದಾಳಿಯ ಮುಂದೆ ಶ್ರೀಲಂಕಾದ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮುಟ್ಟಲು ಯಶಸ್ವಿಯಾಗಿದ್ದಾರೆ. ಶ್ರೀಲಂಕಾ ಪರ ಹಾಸಿನಿ ಪೆರೇರಾ ಗರಿಷ್ಠ 30 ರನ್ ಗಳಿಸಿದ್ದಾರೆ. ಇದೇ ವೇಳೆ ಹರ್ಷಿತಾ ಮಾಧವಿ 26 ಮತ್ತು ರಣಸಿಂಗೆ 11 ರನ್ ಗಳಿಸಿದ್ದಾರೆ.

ಇದನ್ನೂ ಓದಿ-ನಿಮಗೆ ಗೊತ್ತಿರಲಿ..! ಈ ಐದು ಕ್ರಿಕೆಟ್‌ ದಾಖಲೆಗಳನ್ನು ಮುರಿಯುವುದೆಂದರೆ ಕನಸಿನ ಮಾತು...!

ಭಾರತದ ಪರ ಜೆಮಿಮಾ ರೋಡ್ರಿಗಸ್ ಅರ್ಧಶತಕ ಬಾರಿಸಿದ್ದಾರೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭ ಅಷ್ಟೊಂದು ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 10 ಮತ್ತು ಸ್ಮೃತಿ ಮಂಧಾನ 06 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ. ಭಾರತದ ಇಬ್ಬರೂ ಆರಂಭಿಕರು ಒಟ್ಟು 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದರು. ಇದಾದ ಬಳಿಕ ಜೆಮಿಮಾ ರೋಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 92 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಜೆಮಿಮಾ 76 ಮತ್ತು ಹರ್ಮನ್‌ಪ್ರೀತ್ 33 ರನ್ ಗಳಿಸಿದ್ದಾರೆ. ಇನ್ನೊಂದೆಡೆ ರಿಚಾ ಘೋಷ್ ಸಿಕ್ಸರ್ ಬಾರಿಸಿ ಭಾರತದ ಸ್ಕೋರ್ ಅನ್ನು 150 ರ ಗಡಿ ದಾಟುವಂತೆ ಮಾಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News