ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2022ರ ಫೈನಲ್ ಪಂದ್ಯ ಇಂದು ರಾಯ್ ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯ ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ನಡುವೆ ನಡೆದಿದ್ದು, ಇಂಡಿಯಾ ಟೀಂ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2022 ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ದ.ಆಫ್ರಿಕಾಗೆ ವಿಲನ್ ಆದ್ರು ಟೀಂ ಇಂಡಿಯಾದ ಈ ಆಟಗಾರ: ಈತನಿಂದ ತಪ್ಪಿಸಿಕೊಳ್ಳೋದೇ ದೊಡ್ಡ ಸಾಹಸ
ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ತಂಡದ ವಿಕೆಟ್ ಕೀಪರ್ ನಮನ್ ಓಜಾ ಕೇವಲ 71 ಬಾಲ್ ಗೆ 108 ರನ್ ಸಿಡಿಸಿ ಶತಕದಾಟದ ಮೂಲಕ ಅಬ್ಬರಿಸಿದರು. ಇನ್ನುಳಿದಂತೆ ವಿನಯ್ ಕುಮಾರ್ 36, ಯುವರಾಜ್ ಸಿಂಗ್ 19, ಇರ್ಫಾನ್ ಪಠಾನ್ 11, ಬಿನ್ನಿ 8, ಸುರೇಶ್ ರೈನಾ 4 ರನ್ ಬಾರಿಸುವ ಮೂಲಕ ತಂಡ 6 ವಿಕೆಟ್ ನಷ್ಟಕ್ಕೆ 195 ರನ್ ಕಲೆ ಹಾಕಿತ್ತು.
ಇನ್ನು ಇಂಡಿಯಾ ಲೆಜೆಂಡ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್, ರನ್ ಪೇರಿಸುವಲ್ಲಿ ವಿಫಲವಾಯಿತು. ಕೇವಲ 162 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು. ಈ ಮೂಲಕ ಇಂಡಿಯಾ ಲೆಜೆಂಡ್ಸ್ 33 ರನ್ ಗಳ ಭರ್ಜರಿ ಜಯ ಸಾಧಿಸಿತು.
ಇಂಡಿಯಾ ಲೆಜೆಂಡ್ಸ್ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್ ಅನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಗಳಿಸಿತ್ತು. ಇನ್ನೊಂದೆಡೆ ಶ್ರೀಲಂಕಾ ಲೆಜೆಂಡ್ಸ್ ಎರಡನೇ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್‌ಗಳನ್ನು ಸೋಲಿಸಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದರು.
ಶ್ರೀಲಂಕಾ ಲೆಜೆಂಡ್ಸ್ ತಂಡ: ಸನತ್ ಜಯಸೂರ್ಯ, ಮಹೇಲ ಉದವಟ್ಟೆ, ತಿಲಕರತ್ನೆ ದಿಲ್ಶನ್(ನಾಯಕ), ಉಪುಲ್ ತರಂಗ(ವಿ.ಕೀ), ಇಶಾನ್ ಜಯರತ್ನೆ, ಚಾಮರ ಸಿಲ್ವಾ, ಜೀವನ್ ಮೆಂಡಿಸ್, ಚತುರಂಗ ಡಿ ಸಿಲ್ವಾ, ಅಸೆಲಾ ಗುಣರತ್ನೆ, ಇಸುರು ಉದಾನ, ನುವಾನ್ ಕುಲಶೇಖರ, ಧಮ್ಮಿಕಾ ಪ್ರಸಾದ್ , ಚಾಮಿಂದ ವಾಸ್, ಚಾಮರ ಕಪುಗೆಡೆರ, ಕೌಶಲ್ಯ ವೀರರತ್ನ, ತಿಸರ ಪೆರೇರ, ಚಿಂತಕ ಜಯಸಿಂಹ, ದಿಲ್ಶನ್ ಮುನವೀರ
ಇದನ್ನೂ ಓದಿ: Women's Asia Cup: ಏಷ್ಯಾ ಕಪ್ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾ ತಂಡವನ್ನು ಸೋಲಿಸಿದ ಭಾರತೀಯ ವನಿತೆಯರು
ಭಾರತ ಲೆಜೆಂಡ್ಸ್ ತಂಡ: ನಮನ್ ಓಜಾ (ವಿ.ಕೀ), ಸಚಿನ್ ತೆಂಡೂಲ್ಕರ್(ನಾಯಕ), ಸುರೇಶ್ ರೈನಾ, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ರಾಜೇಶ್ ಪವಾರ್, ರಾಹುಲ್ ಶರ್ಮಾ, ಮುನಾಫ್ ಪಟೇಲ್, ಅಭಿಮನ್ಯು ಮಿಥುನ್, ವಿನಯ್ ಕುಮಾರ್, ರವಿ ಗಾಯಕ್ವಾಡ್, ಹರ್ಭಜನ್ ಸಿಂಗ್, ಎಸ್ ಬದ್ರಿನಾಥ್, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.