Indonesia: ಫುಟ್ ಬಾಲ್ ಪಂದ್ಯದ ವೇಳೆ ಹಿಂಸಾಚಾರ, 150ಕ್ಕೂ ಹೆಚ್ಚು ಜನ ಸಾವು

Indonesia Football Fans Clash: ಇಂಡೋನೇಷ್ಯಾದಲ್ಲಿ ಫುಟ್ ಬಾಲ್ ಅಭಿಮಾನಿಗಳ ಮಧ್ಯೆ ಘರ್ಷಣೆ ಸಂಭವಿಸಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದರೆ, ಘರ್ಷಣೆಯನ್ನು ನಿಲ್ಲಿಸಲು ಅವರು ವಿಫಲರಾಗಿದ್ದಾರೆ.  

Written by - Nitin Tabib | Last Updated : Oct 2, 2022, 12:47 PM IST
  • ಈ ಘಟನೆಯ ಬಳಿಕ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ BRI Liga 1 ಲೀಗ್ ಅನ್ನು 7 ದಿನಗಳ ಮಟ್ಟಿಗೆ ಸಸ್ಪೆಂಡ್ ಮಾಡಲಾಗಿದೆ.
  • ಈಸ್ಟ್ ಜಾವಾ ದ್ವೀಪದ ಕಂಜುರ್ಹಾನ್ ಸ್ಟೇಡಿಯಂ ನಲ್ಲಿ ಈ ಪಂದ್ಯ ನಡೆಯುತ್ತಿತ್ತು.
  • ಮಾಬ್ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಗುಂಡುಗಳನ್ನು ಸಿಡಿಸಿದ್ದಾರೆ ಮತ್ತು ವಿಪರೀತ ಲಾಠಿಚಾರ್ಜ್ ಕೂಡ ನಡೆಸಿದ್ದಾರೆ
Indonesia: ಫುಟ್ ಬಾಲ್ ಪಂದ್ಯದ ವೇಳೆ ಹಿಂಸಾಚಾರ, 150ಕ್ಕೂ ಹೆಚ್ಚು ಜನ ಸಾವು title=
Riot At Football Stadium

Indonesia Football Fans Clash: ಇಂಡೋನೇಷ್ಯಾದಲ್ಲಿ ಫುಟ್ಬಾಲ್ ಪಂದ್ಯವೊಂದರ ವೇಳೆ ಭೀಕರ ಘರ್ಷಣೆ ಸಂಭವಿಸಿದೆ. ಇಲ್ಲಿ ಎರಡು ಫುಟ್ಬಾಲ್ ತಂಡಗಳ ಬೆಂಬಲಿಗರು ಪರಸ್ಪರ ಕಾದಾಟಕ್ಕಿಳಿದಿದ್ದಾರೆ. ನಂತರ ಈ ಘರ್ಷಣೆ ಎಷ್ಟು ಹಿಂಸಾತ್ಮಕ ರೂಪ ಪಡೆದುಕೊಂಡಿದೆ ಎಂದರೆ ಇದುವರೆಗೆ  150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ವೇಗವಾಗಿ ಹೆಚ್ಚುತ್ತಲೇ ಇದೆ. ವಾಸ್ತವವಾಗಿ, ಅಭಿಮಾನಿಗಳ ಈ ಪರಸ್ಪರ ಘರ್ಷಣೆಯ ಬಳಿಕ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಭಾರಿ ಜನಸ್ತೋಮವಿದದ ಕಾರಣ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ವಿಫಲವಾಗಿದ್ದಾರೆ. ಸಿಟ್ಟಿಗೆದ್ದ ಅಭಿಮಾನಿಗಳು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ನೂರಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ-Road Safety World Series: ಓಜಾ ಶತಕದ ಅಬ್ಬರಕ್ಕೆ ತತ್ತರಿಸಿದ ಶ್ರೀಲಂಕಾ: ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಗೆದ್ದ ಇಂಡಿಯಾ ‘ಲೆಜೆಂಡ್ಸ್’

ವಿವಾದ ಆರಂಭಗೊಂಡಿದ್ದು ಹೇಗೆ
ಇಂಡೋನೇಷ್ಯಾದ ದೊಡ್ಡ ಕ್ರೀಡಾಂಗಣದಲ್ಲಿ ಅರೆಮಾ ಎಫ್‌ಸಿ ಮತ್ತು ಪರ್ಸೆಬಾಯ್ ಕ್ಲಬ್ ನಡುವೆ ಈ ಫುಟ್‌ಬಾಲ್ ಪಂದ್ಯ ನಡೆಯುತ್ತಿತ್ತು. ಸ್ಟೇಡಿಯಂನ ಎರಡೂ ಬದಿ ಬೆಂಬಲಿಗರು ಕಿಕ್ಕಿರಿದು ತುಂಬಿದ್ದರು, ಆದರೆ ನಂತರ ಈ ಪಂದ್ಯದಲ್ಲಿ ಅರೆಮಾ ತಂಡ 2-3 ಅಂತರದಿಂದ ಸೋಲನ್ನು ಅನುಭವಿಸಿದ ಕಾರಣ, ಎರಡೂ ತಂಡಗಳ ಅಭಿಮಾನಿಗಳ ನಡುವೆ ಕಾದಾಟ ಪ್ರಾರಂಭವಾಗಿದೆ. ಇದನ್ನು ಕಂಡು ಇಡೀ ಕ್ರೀಡಾಂಗಣದಲ್ಲಿ ವಾಗ್ವಾದ ನಡೆದು ಜನರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲಿದ್ದ ಭದ್ರತಾ ಪಡೆಗಳು ಹೇಗಾದರೂ ಮಾಡಿ ಪ್ರಾಣ ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಲಭೆ ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಇಂಡೋನೇಷ್ಯಾದ ರಾಷ್ಟ್ರೀಯ ಸಶಸ್ತ್ರ ಪಡೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ತಡವಾಗಿತ್ತು. ಹೇಗಾದರೂ, ಸೇನಾ ಸಿಬ್ಬಂದಿ ಗಲಭೆಯಲ್ಲಿದ್ದ ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಹೊರಗೆಳೆದರು. ಕ್ರೀಡಾಂಗಣದಿಂದ ಹೊರಬಂದ ನಂತರವೂ ಹಿಂಸಾಚಾರ ನಡೆದಿದೆ.

ಇದನ್ನೂ ಓದಿ-ದ.ಆಫ್ರಿಕಾಗೆ ವಿಲನ್ ಆದ್ರು ಟೀಂ ಇಂಡಿಯಾದ ಈ ಆಟಗಾರ: ಈತನಿಂದ ತಪ್ಪಿಸಿಕೊಳ್ಳೋದೇ ದೊಡ್ಡ ಸಾಹಸ

ಈ ಘಟನೆಯ ಬಳಿಕ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ BRI Liga 1 ಲೀಗ್ ಅನ್ನು 7 ದಿನಗಳ ಮಟ್ಟಿಗೆ ಸಸ್ಪೆಂಡ್ ಮಾಡಲಾಗಿದೆ. ಈಸ್ಟ್ ಜಾವಾ ದ್ವೀಪದ ಕಂಜುರ್ಹಾನ್ ಸ್ಟೇಡಿಯಂ ನಲ್ಲಿ ಈ ಪಂದ್ಯ ನಡೆಯುತ್ತಿತ್ತು. ಮಾಬ್ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಗುಂಡುಗಳನ್ನು ಸಿಡಿಸಿದ್ದಾರೆ ಮತ್ತು ವಿಪರೀತ ಲಾಠಿಚಾರ್ಜ್ ಕೂಡ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪೆರುವಿನಲ್ಲಿ 320 ಜನ ಸಾವನ್ನಪ್ಪಿದ್ದರು
1964 ರಲ್ಲಿ ಪೆರುವಿನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫುಟ್ಬಾಲ್ ಇತಿಹಾಸದಲ್ಲಿ ಅತಿದೊಡ್ಡ ದುರಂತ ಸಂಭವಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, ಸುಮಾರು 320 ಜನರು ಅದರಲ್ಲಿ ತನ್ನ ಪ್ರಾಣ ಕಳೆದುಕೊಂಡಿದ್ದರು. 24 ಮೇ 1964 ರಂದು, ಅರ್ಜೆಂಟೀನಾ ಮತ್ತು ಪೆರು ನಡುವೆ ಪಂದ್ಯವನ್ನು ಏರ್ಪಡಿಸಲಾಗಿತ್ತು. ಈ ಎರಡೂ ತಂಡಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ಸೆಣೆಸಾಟಕ್ಕಿಳಿದಿದ್ದವು.

ಪಂದ್ಯ ಪೂರ್ಣಗೊಳ್ಳಲು 2 ನಿಮಿಷಗಳ ಬಾಕಿ ಇರುವಾಗ ಅರ್ಜೆಂಟೀನಾ ತಂಡ 1-0 ಮುನ್ನಡೆ ಸಾಧಿಸಿತ್ತು. ಇದೇ ವೇಳೆ ಪೆರುವಿನಿಂದ ಒಂದು ಗೋಲು ವಜಾಗೊಂಡಿತು. ಇದರಿಂದಾಗಿ, ಪೆರುವಿಯನ್ ಅಭಿಮಾನಿಗಳು ಆಕ್ರೋಶಗೊಂಡರು ಮತ್ತು ಪಾನಮತ್ತ ಬೆಂಬಲಿಗರು ಮೈದಾನಕ್ಕೆ ಇಳಿದಿದ್ದರು. ಅವರ ಜೊತೆಗೆ ಇನ್ನೂ ಕೆಲವರು ಮೈದಾನಕ್ಕೆ ತಲುಪಿದ್ದರು. ಇದೇ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿದ್ದು, ಕಾಲ್ತುಳಿತ ಉಂಟಾಯಿತು. ಕ್ರೀಡಾಂಗಣದ ಬಾಗಿಲು ಮುಚ್ಚಿದ್ದರಿಂದ ಜನರು ಹೊರಗೆ ಬರಲಾಗದೆ ಸುಮಾರು 320 ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ಘಟನೆಯಲ್ಲಿ 500 ಮಂದಿ ಗಾಯಗೊಂಡಿದ್ದರು.
 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News