IPL 2022 : ಈ ಸ್ಪೋಟಕ ಬ್ಯಾಟ್ಸ್‌ಮನ್ ಆಗಲಿದ್ದಾರೆ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕ
ರಾಹುಲ್ ಪಂಜಾಬ್ ತಂಡವನ್ನು ತೊರೆದಿದ್ದರೂ, ಪಂಜಾಬ್ ತಂಡವನ್ನು ಮುನ್ನಡೆಸಬಲ್ಲ ಸಮರ್ಥ ಮತ್ತು ಆಟಗಾರನ ಈಗ ತಂಡದಲ್ಲಿದ್ದಾರೆ.
ನವದೆಹಲಿ : ಐಪಿಎಲ್ 2022 ರ ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್ (Punjab Kings)ತಮ್ಮ ತಂಡದಲ್ಲಿ ದಿಗ್ಗಜ ಆಟಗಾರನನ್ನು ಸೇರಿಸಿಕೊಂಡಿದೆ. ಇದೇ ಆಟಗಾರ ಈಗ ಈ ತಂಡವನ್ನು ಮುನ್ನಡೆಸುವ ಎಲ್ಲಾ ಸಾಧ್ಯತೆಗಳು ಇವೆ. ಕಳೆದ ಋತುವಿನಲ್ಲಿ, ಕೆಎಲ್ ರಾಹುಲ್ (KL Rahul) ಪಂಜಾಬ್ ಕಿಂಗ್ಸ್ ನಾಯಕರಾಗಿದ್ದರು, ಆದರೆ, ಈ ಬಾರಿ ಅವರು ಈ ತಂಡವನ್ನು ತೊರೆದು ಲಕ್ನೋ ತಂಡವನ್ನು ಸೇರಲು ನಿರ್ಧರಿಸಿದ್ದರು. ರಾಹುಲ್ ಪಂಜಾಬ್ ತಂಡವನ್ನು ತೊರೆದಿದ್ದರೂ, ಪಂಜಾಬ್ ತಂಡವನ್ನು ಮುನ್ನಡೆಸಬಲ್ಲ ಸಮರ್ಥ ಮತ್ತು ಆಟಗಾರನ ಈಗ ತಂಡದಲ್ಲಿದ್ದಾರೆ.
ಈ ಬ್ಯಾಟ್ಸ್‌ಮನ್ ಪಂಜಾಬ್ ತಂಡದ ಹೊಸ ನಾಯಕರಾಗಲಿದ್ದಾರೆ :
ಐಪಿಎಲ್ 2022 ರ (IPL 2022) ಹರಾಜಿನಲ್ಲಿ, ಪಂಜಾಬ್ ಕಿಂಗ್ಸ್, ಶಿಖರ್ ಧವನ್ (Shikhar Dhawan) ಅವರನ್ನು 8.5 ಕೋಟಿ ರೂಪಾಯಿಗಳಿಗೆ ಖರೀದಿಸಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಶಿಖರ್ ಧವನ್ ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್‌ನ (Punjab Kings Captain)ನಾಯಕತ್ವವನ್ನೂ ಮವಹಿಸುವ ಸಾಧ್ಯತೆ ಇದೆ. ಶಿಖರ್ ಧವನ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
ಇದನ್ನೂ ಓದಿ : ಐಪಿಎಲ್‌ನಲ್ಲಿ ಕೋಟಿಗಟ್ಟಲೆಗೆ ಬಿಕರಿಯಾಗುತ್ತಿದ್ದಂತೆಯೇ ತನ್ನ ತಂಡಕ್ಕೆ ಬೆನ್ನು ತೋರಿದ ಆಟಗಾರ
ಗೆಲ್ಲಲಿದೆಯೇ ಐಪಿಎಲ್ ಟ್ರೋಫಿ ?:
ಶಿಖರ್ ಧವನ್ ನಾಯಕತ್ವದ ಅನುಭವವನ್ನು ಹೊಂದಿದ್ದು, ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ವೇಳೆ ವಿಭಿನ್ನ ಛಾಪು ಮೂಡಿಸಿದ್ದರು. ಐಪಿಎಲ್ 2021 ರಲ್ಲಿ ಶಿಖರ್ ಧವನ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದರು. ಶಿಖರ್ ಧವನ್ ತಮ್ಮ ನಾಯಕತ್ವ ಮತ್ತು ಬಿರುಸಿನ ಬ್ಯಾಟಿಂಗ್‌ನಿಂದ ಪಂಜಾಬ್ ಕಿಂಗ್ಸ್ (Punjab Kings) ಈ ಬಾರಿ ಮೊದಲ ಐಪಿಎಲ್ ಟ್ರೋಫಿಯನ್ನು (IPL Trophy) ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಶಿಖರ್ ಧವನ್ ಕ್ರೀಸ್‌ನಲ್ಲಿದ್ದರೆ ತಂಡದ ಗೆಲುವು ಖಚಿತ ಎಂದೇ ಹೇಳಲಾಗುತ್ತದೆ. ಶಿಖರ್ ಧವನ್ ಅವರಿಗೆ 36 ವರ್ಷ ವಯಸ್ಸು. ಆದರೆ ಈ ವಯಸ್ಸಿನಲ್ಲೂ ಅವರು ತಮ್ಮ ಅದ್ಬುತ ಆಟದ ಮೂಲಕ ಯುವಕರನ್ನು ನಾಚಿಸುತ್ತಾರೆ. ಶಿಖರ್ ಧವನ್ ಅವರು ತಮ್ಮ ಫಾರ್ಮ್ ನಲ್ಲಿದ್ದಾಗ, ಬೌಲರ್ ನ ಬೆವರಿಳಿಸಿ ಬಿಡುತ್ತಾರೆ.
ಇದನ್ನೂ ಓದಿ : RCB New Captain: ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ನೂತನ ನಾಯಕ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.