ಐಪಿಎಲ್‌ನಲ್ಲಿ ಕೋಟಿಗಟ್ಟಲೆಗೆ ಬಿಕರಿಯಾಗುತ್ತಿದ್ದಂತೆಯೇ ತನ್ನ ತಂಡಕ್ಕೆ ಬೆನ್ನು ತೋರಿದ ಆಟಗಾರ

ಮೆಗಾ ಹರಾಜಿನಲ್ಲಿ ಮ್ಯಾಥ್ಯೂ ವೇಡ್ ಅವರನ್ನು ಗುಜರಾತ್ ಟೈಟಾನ್ಸ್ 2 ಕೋಟಿ 40 ಲಕ್ಷಕ್ಕೆ ಖರೀದಿಸಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಮ್ಯಾಥ್ಯೂ ವೇಡ್ ಗೆ  ಸಾಕಷ್ಟು ಬೇಡಿಕೆ ಇತ್ತು.

Written by - Ranjitha R K | Last Updated : Feb 18, 2022, 08:26 AM IST
  • ಮೆಗಾ ಹರಾಜಿನಲ್ಲಿ 2 ಕೋಟಿ 40 ಲಕ್ಷಕ್ಕ ಮ್ಯಾಥ್ಯೂ ವೇಡ್ ಬಿಕರಿ
  • ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡಲಿರುವ ಮ್ಯಾಥ್ಯೂ ವೇಡ್
  • ಮಾರ್ಚ್ 26 ರಿಂದ ಆರಂಭವಾಗಲಿದೆ ಐಪಿಎಲ್ 2022 ರ ಸೀಸನ್
ಐಪಿಎಲ್‌ನಲ್ಲಿ ಕೋಟಿಗಟ್ಟಲೆಗೆ ಬಿಕರಿಯಾಗುತ್ತಿದ್ದಂತೆಯೇ ತನ್ನ ತಂಡಕ್ಕೆ ಬೆನ್ನು ತೋರಿದ ಆಟಗಾರ  title=
ಮೆಗಾ ಹರಾಜಿನಲ್ಲಿ 2 ಕೋಟಿ 40 ಲಕ್ಷಕ್ಕ ಮ್ಯಾಥ್ಯೂ ವೇಡ್ ಬಿಕರಿ (file photo)

ನವದೆಹಲಿ : ಕ್ರಿಕೆಟ್  ಅನುಭವಿ ಆಟಗಾರನೊಬ್ಬ ಐಪಿಎಲ್‌ನಲ್ಲಿ (IPL)ಕೋಟಿಗಟ್ಟಲೆಗೆ   ಮಾರಾಟವಾದ ಕೂಡಲೇ ತನ್ನ ತಂಡಕ್ಕೆ ಮೋಸ ಮಾಡಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ವೇಡ್ (Matthew Wade). ಮೆಗಾ ಹರಾಜಿನಲ್ಲಿ (IPL Mega Auction) ಮ್ಯಾಥ್ಯೂ ವೇಡ್ ಅವರನ್ನು ಗುಜರಾತ್ ಟೈಟಾನ್ಸ್ 2 ಕೋಟಿ 40 ಲಕ್ಷಕ್ಕೆ ಖರೀದಿಸಿದೆ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಅವರು ಸತತ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕಳೆದ ವರ್ಷ 2021 ರ ಟಿ 20 ವಿಶ್ವಕಪ್ ಅನ್ನು ತಮ್ಮ ತಂಡಕ್ಕೆ ಗೆದ್ದುಕೊಟ್ಟಿದ್ದರು.  

ಈ ಬಾರಿಯ ಮೆಗಾ ಹರಾಜಿನಲ್ಲಿ (IPL Mega Auction) ಮ್ಯಾಥ್ಯೂ ವೇಡ್ ಗೆ (Matthew Wade) ಸಾಕಷ್ಟು ಬೇಡಿಕೆ ಇತ್ತು. ಇವರನ್ನು  ಗುಜರಾತ್ ಟೈಟಾನ್ಸ್ 2 ಕೋಟಿ, 40 ಲಕ್ಷಕ್ಕೆ ತನ್ನ ಪಾಳಯಕ್ಕೆ ಸೇರಿಸಿಕೊಂಡಿದೆ. IPLನ  ಈ ಬಿಗ್ ಡೀಲ್ ಸಿಕ್ಕ ಕೂಡಲೇ, ಮ್ಯಾಥ್ಯೂ ವೇಡ್ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.  ಮ್ಯಾಥ್ಯೂ ವೇಡ್ ಇಂಗ್ಲೆಂಡ್‌ನ ದೇಶೀಯ ಪಂದ್ಯಾವಳಿಯ ಕೌಂಟಿ ಕ್ರಿಕೆಟ್‌ನಲ್ಲಿ ವೋರ್ಸೆಸ್ಟರ್‌ಶೈರ್ ಕ್ಲಬ್‌ಗಾಗಿ ಆಡುತ್ತಿದ್ದರು. 

ಇದನ್ನೂ ಓದಿ : RCB New Captain: ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ನೂತನ ನಾಯಕ..?

ಇದ್ದಕ್ಕಿದ್ದಂತೆ ಈ ತಂಡ ತೊರೆದ  ಮ್ಯಾಥ್ಯೂ ವೇಡ್ :
ಮ್ಯಾಥ್ಯೂ ವೇಡ್ ಕೌಂಟಿ ಕ್ರಿಕೆಟ್‌ನಲ್ಲಿ ಇಡೀ ಸೀಸನ್‌ ನಲ್ಲಿ ಆಡುವುದಾಗಿ ಸಹಿ ಹಾಕಿದ್ದರು. ಆದರೆ ಈಗ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಮ್ಯಾಥ್ಯೂ ವೇಡ್ ಈ ನಡೆಯನ್ನು ವಂಚನೆ ಎಂದು ಹೇಳಲಾಗುತ್ತಿದೆ. ಮ್ಯಾಥ್ಯೂ ವೇಡ್ ಐಪಿಎಲ್‌ನಲ್ಲಿ (IPL 2022) ಎರಡನೇ ಬಾರಿಗೆ ಆಡಲಿದ್ದಾರೆ. ಇದಕ್ಕೂ ಮುನ್ನ ಅವರು 2011ರ ಐಪಿಎಲ್‌ನಲ್ಲಿ ಆಡಿದ್ದರು. ಆ ಸಂದರ್ಭದಲ್ಲಿ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಆಡಿದ್ದರು. 

ಈ ಬಾರಿ ಮ್ಯಾಥ್ಯೂ ವೇಡ್  ಅವರನ್ನು ಹೊಸ ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ (Gujarat Titans) ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿ ಐಪಿಎಲ್ ನಲ್ಲಿ 10 ತಂಡಗಳಿರುವ ಕಾರಣ ಸಂಭ್ರಮ ಇಮ್ಮಡಿಗೊಳ್ಳಲಿದೆ. ಈ ತಂಡದ ಸಾರಥ್ಯವನ್ನು  ಹಾರ್ದಿಕ್ ಪಾಂಡ್ಯ (Hardik Pandya) ವಹಿಸಿಕೊಳ್ಳಲಿದ್ದಾರೆ. ಐಪಿಎಲ್ 2022 ರ ಸೀಸನ್ ಮಾರ್ಚ್ 26 ರಿಂದ ಆರಂಭವಾಗಲಿದೆ. . ಪಂದ್ಯಾವಳಿಯು ಮೇ ತಿಂಗಳವರೆಗೆ ನಡೆಯಲಿದೆ.

ಇದನ್ನೂ ಓದಿ :  Indian Team : ಟೀಂ ಇಂಡಿಯಾಗೆ ಸಿಕ್ಕಿದ್ದಾನೆ ಧೋನಿಯಂತಹ ಈ ಬಲಿಷ್ಠ ಫಿನಿಶರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News