RCB New Captain: ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ನೂತನ ನಾಯಕ..?

ಸದ್ಯ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮ್ಯಾಕ್ಸ್‌ವೆಲ್ ನಾಯಕತ್ವದ ರೇಸ್ ನಲ್ಲಿ ಇಲ್ಲದ ಕಾರಣ ಆರ್‌ಸಿಬಿ ಡುಪ್ಲೆಸಿಸ್‍ ಕಡೆ ಒಲವು ತೋರಿದಂತೆ ಕಾಣುತ್ತಿದೆ.

Written by - Puttaraj K Alur | Last Updated : Feb 17, 2022, 08:36 PM IST
  • ಆರ್‌ಸಿಬಿಗೆ ನೂತನ ನಾಯಕನಾಗಿ ಫಾಫ್ ಡು ಪ್ಲೆಸಿಸ್ ಆಯ್ಕೆ ಬಹುತೇಕ ಖಚಿತ?
  • ಶೀಘ್ರವೇ ನೂತನ ನಾಯನಕ ಬಗ್ಗೆ ಆರ್‌ಸಿಬಿ ಫ್ರಾಂಚೈಸಿಯಿಂದ ಘೋಷಣೆ ಸಾಧ್ಯತೆ
  • ಐಪಿಎಲ್ ಮೆಗಾ ಹರಾಜಿನಲ್ಲಿ 7 ಕೋಟಿ ಕೊಟ್ಟು ಡುಪ್ಲೆಸಿಸ್ ಖರೀದಿಸಿರುವ ಆರ್‌ಸಿಬಿ
RCB New Captain: ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ನೂತನ ನಾಯಕ..? title=
ಆರ್‌ಸಿಬಿಗೆ ಫಾಫ್ ಡು ಪ್ಲೆಸಿಸ್ ಕ್ಯಾಪ್ಟನ್?

ಬೆಂಗಳೂರು: ಸುಮಾರು ಒಂದು ದಶಕದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವು ನಾಯಕತ್ವದಲ್ಲಿ ಬದಲಾವಣೆಯನ್ನು ಕಾಣಲಿದೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ಮತ್ತು ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ ನಂತರ ಆರ್‌ಸಿಬಿ IPL 2022ರ ಮೆಗಾ ಹರಾಜಿನಲ್ಲಿ ನಾಯಕತ್ವದ ಆಯ್ಕೆಯನ್ನು ಮುಂದೂಡಿತು.

ಭಾರತೀಯ ಮೂಲದ ಯುವತಿ ಜೊತೆಗೆ ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ದಾಂಪತ್ಯ ಜೀವನಕ್ಕೆ ಕಾಲುಡುತ್ತಿರುವ ಕಾರಣ ಕೆಲ ಆರಂಭಿಕ ಪಂದ್ಯಗಳಿಗೆ ಅವರು ಅಲಭ್ಯರಾಗಿರುತ್ತಾರೆ. ಹೀಗಾಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಅವರನ್ನೇ RCB ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: India Vs Sri Lanka Series: ಬದಲಾಯ್ತು ವೆನ್ಯೂ... ಈಗ Virat Kohli ಇಲ್ಲಿ ತನ್ನ 100ನೇ ಟೆಸ್ಟ್ ಆಡಲಿದ್ದಾರೆ

ಫಾಫ್ ಡು ಪ್ಲೆಸಿಸ್ ನೂತನ ನಾಯಕ?

ಆರ್‌ಸಿಬಿ ತಂಡದ ನೂತನ ನಾಯಕನಾಗಿ ಫಾಫ್ ಡು ಪ್ಲೆಸಿಸ್(Faf du Plessis) ಆಯ್ಕೆ ಬಹುತೇಕ ಖಚಿತವಾದಂತಾಗಿದೆ. ಶೀಘ್ರವೇ ಅವರನ್ನು ನಾಯಕ ಅಂತಾ ಆರ್‌ಸಿಬಿ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ(IPl 2022) ಚೆನ್ನೈ ಸೂಪರ್ ಕಿಂಗ್ಸ್‌ ಜೊತೆಗೆ ಪೈಪೋಟಿಗಿಳಿದು ಆರ್‌ಸಿಬಿ ಫ್ರಾಂಚೈಸಿ ಡುಪ್ಲೆಸಿಸ್ ಅವರಿಗೆ 7 ಕೋಟಿ ರೂ. ನೀಡಿ ಖರೀದಿಸಿದೆ.

ಸದ್ಯ ವಿರಾಟ್ ಕೊಹ್ಲಿ(Virat Kohli), ಎಬಿ ಡಿವಿಲಿಯರ್ಸ್ ಮತ್ತು ಮ್ಯಾಕ್ಸ್‌ವೆಲ್ ನಾಯಕತ್ವದ ರೇಸ್ ನಲ್ಲಿ ಇಲ್ಲದ ಕಾರಣ ಆರ್‌ಸಿಬಿ(RCB New Captain) ಡುಪ್ಲೆಸಿಸ್‍ ಕಡೆ ಒಲವು ತೋರಿದಂತೆ ಕಾಣುತ್ತಿದೆ. ತಂಡದ ನಾಯಕತ್ವಕ್ಕೆ ಡುಪ್ಲೆಸಿಸ್‍ ಅವರೇ ಸೂಕ್ತ ವ್ಯಕ್ತಿ ಅನ್ನೋ ಅಭಿಪ್ರಾಯಗಳು ಕೇಳಿಬರುತ್ತಿವೆ. 

ಇದನ್ನೂ ಓದಿ: Ind Vs WI : ವೆಸ್ಟ್ ಇಂಡೀಸ್ ವಿರುದ್ಧ ಗೆದ್ದ ನಂತರ ಅತೃಪ್ತನಾದ ರೋಹಿತ್ ಶರ್ಮಾ!

ಮ್ಯಾಕ್ಸ್‌ವೆಲ್ ಅಥವಾ ಡುಪ್ಲೆಸಿಸ್‍ ಈ ಇಬ್ಬರಲ್ಲಿ  ಒಬ್ಬರಿಗೆ ಆರ್‌ಸಿಬಿ ನಾಯಕತ್ವ(RCB New Captain) ವಹಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಆದರೆ ಮ್ಯಾಕ್ಸ್‌ವೆಲ್ ಸದ್ಯ ಬ್ಯುಸಿಯಾಗಿರುವ ಕಾರಣ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ. ಹೀಗಾಗಿ ಡುಪ್ಲೆಸಿಸ್ ಅವರೇ ಸರಿಯಾದ ಆಯ್ಕೆ ಅಂತಲೂ ಹೇಳಲಾಗುತ್ತಿದೆ. ಅಂತಿಮವಾಗಿ ಆರ್‌ಸಿಬಿ ಯಾರಿಗೆ ನಾಯಕತ್ವದ ಹೊಣೆ ವಹಿಸುತ್ತದೋ ಕಾದು ನೋಡಬೇಕಿದೆ. ತಮ್ಮ ತಂಡಕ್ಕೆ ಯಾರು ನೂತನ ಸಾರಥಿಯಾಗುತ್ತಾರೆ ಅನ್ನೋ ಕುತೂಹಲ ಆರ್‌ಸಿಬಿ(RCB) ಅಭಿಮಾನಿಗಳ ಮನದಲ್ಲಿ ಮೂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News