Tokyo 2020 Paralympics: ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಟೇಬಲ್ ಟೆನಿಸ್ (Table Tennis) ಆಟಗಾರ್ತಿ ಭಾವಿನಾ ಇತಿಹಾಸ ಸೃಷ್ಟಿಸಿದ್ದಾರೆ. ಭಾವಿನಾ ಅವರು ಸೆಮಿಫೈನಲ್‌ನಲ್ಲಿ ಚೀನಾದ ಆಟಗಾರ್ತಿ ಮಿಯಾವೊ ಅವರನ್ನು ಸೋಲಿಸಿ ಫೈನಲ್‌ಗೆ ತಲುಪಿದರು ಮತ್ತು ಚಿನ್ನದ ಪದಕ ಗೆಲ್ಲಲು ಕೇವಲ ಒಂದು ಹೆಜ್ಜೆ ಮಾತ್ರ ತಲುಪಿದ್ದಾರೆ. ಈ ಅದ್ಭುತ ಗೆಲುವಿನ ನಂತರ ಮಾತನಾಡಿರುವ ಭಾವಿನಾ, ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಗೆಲುವಿನ ಕುರಿತು ಮಾತನಾಡಿರುವ ಭಾವಿನಾ, 'ಚೀನಾದ ಮಿಯಾವೋ ವಿರುದ್ದ ತಮ್ಮ ಗೆಲುವನ್ನು ಒಂದು ದೊಡ್ಡ ಸಾಧನೆ ಎಂದು ಹೇಳಿದ್ದಾರೆ. ಚೀನಾದ ಆಟಗಾರರನ್ನು ಸೋಲಿಸುವುದು ಅಸಾಧ್ಯದ ಮಾತು  ಎಂದು ಎಲ್ಲರು ಹೇಳುತ್ತಾರೆ. ಆದರೆ, ಒಂದು ವೇಳೆ ನೀವು ಏನನ್ನಾದರೂ ಸಾಧಿಸಲು ಬಯಸಿದರೆ,  ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನು ಇಂದು ನಾನು ಸಾಬೀತುಪಡಿಸಿದ್ದೇನೆ' ಎಂದಿದ್ದಾರೆ. 


ಫೈನಲ್ ತಲುಪಿದ ನಂತರ, ಭಾವಿನಾ (Bhavina Patel) ಈಗಾಗಲೇ ಭಾರತಕ್ಕೆ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಆದರೆ ಭಾವಿನಾ  ಕಣ್ಣುಗಳು ಮಾತ್ರ ಟೋಕಿಯೊ (Tokyo) ಪ್ಯಾರಾಲಿಂಪಿಕ್ಸ್ (Paralympics)ನಲ್ಲಿ ಭಾರತದ ಮೊದಲ ಚಿನ್ನದ ಪದಕದ ಮೇಲಿದೆ. "ನಾನು ಎಂದಿಗೂ ನನ್ನನ್ನು ಅಂಗವಿಕಲ ಎಂದು ಪರಿಗಣಿಸಿಲ್ಲ ಮತ್ತು ನೀವು ಬಯಸಿದರೆ ಎಲ್ಲವೂ ಸಾಧ್ಯ ಎಂದು ಇಂದು ನಾನು ಈ ಸತ್ಯವನ್ನು ಸಾಬೀತುಪಡಿಸಿದ್ದೇನೆ" ಎಂದು ಎಂದು ಭಾವಿನಾ ಹೇಳಿದ್ದಾರೆ.


ಇದನ್ನೂ ಓದಿ-Viral Video: ಕೆ.ಎಲ್.ರಾಹುಲ್‌ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ


ವಿಶ್ವದ ನಂ.2 ಮತ್ತು ನಂ.3 ಶ್ರೇಯಾಂಕಿತರನ್ನು ಸೋಲಿಸಿದ ಭಾವಿನಾ
ಭಾವಿನಾ ಪಟೇಲ್ ಪ್ರಸ್ತುತ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಭಾವಿನಾ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ .3  ಶ್ರೇಯಾಂಕಿತ ಆಟಗಾರ್ತಿಯನ್ನು ಸೋಲಿಸಿದ್ದಾರೆ.  ಭಾವಿನಾ ಅವರು ಕ್ವಾರ್ಟರ್ ಫೈನಲ್‌ನಲ್ಲಿ ರಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಮತ್ತು ನಂಬರ್ 2. ಆಟಗಾರ್ತಿಯನ್ನು ಕೂಡ ಸೋಲಿಸಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಅವರು ವಿಶ್ವ ನಂ .8  ಶ್ರೇಯಾಂಕಿತ ಆಟಗಾರ್ತೀಯನ್ನು ಸೋಲಿಸಿದ್ದಾರೆ.


ಇದನ್ನೂ ಓದಿ-Anand Mahindra Tweet: ಬಾಲಕನೋರ್ವನ ಕಳರಿಪಯಟ್ಟು ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹಿಂದ್ರಾ


ಆದರೆ ಭಾವಿನಾಗೆ ಆಗಸ್ಟ್ 29ರಂದು ನಡೆಯಬೇಕಿರುವ ಪಂದ್ಯ ಸುಲಭದ ಸವಾಲಾಗಿಲ್ಲ. ಏಕೆಂದರೆ, ಭಾವಿನಾ ಈ ಪಂದ್ಯದಲ್ಲಿ ವಿಶ್ವದ ನಂ.1 ಶ್ರೆಯಾಂಕಿತ ಆಟಗಾರ್ತಿಯನ್ನು ಎದುರಿಸಲಿದ್ದಾರೆ.


ಇದನ್ನೂ ಓದಿ -Ind Vs Eng Test Series: Sachin Tendulkar ಸಿಡ್ನಿಯಲ್ಲಿ ಮಾಡಿದ್ದನ್ನು Virat Kohli ಪುನರಾವರ್ತಿಸಬೇಕು - ಗಾವಸ್ಕರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.