Arpit Guleria: ನಿನ್ನೆ (ಡಿ. 5, 2023) ಹಿಮಾಚಲ ಮತ್ತು ಗುಜರಾತ್ ನಡುವೆ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಗುಜರಾತ್ ತಂಡ 8 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಪಂದ್ಯದಲ್ಲಿ ಹಿಮಾಚಲ ತಂಡದ ಪರ ಆಡುತ್ತಿರುವ ಮಧ್ಯಮ ವೇಗಿ ಅರ್ಪಿತ್ ಗುಲೇರಿಯಾ ಗುಜರಾತ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿ 8 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ  ಭಾರತೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. 


COMMERCIAL BREAK
SCROLL TO CONTINUE READING

ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಅದ್ಭುತ ಕೈಚಳಕ ಪ್ರದರ್ಶಿಸಿರುವ ಹಿಮಾಚಲ ತಂಡದ ಅರ್ಪಿತ್ ಗುಲೇರಿಯಾ ಗುಜರಾತ್ ನ 8 ಬ್ಯಾಟ್ಸ್ ಮನ್ ಗಳಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ವಿಶೇಷ ದಾಖಲೆ ಪುಸ್ತಕದಲ್ಲಿ ಅವರ ಹೆಸರು ದಾಖಲಿಸಿದ್ದಾರೆ.


ಇದನ್ನೂ ಓದಿ- ಕೇವಲ 21 ಎಸೆತಗಳಲ್ಲಿ 98 ರನ್! ಬಿರುಸಿನ ಶತಕ ಬಾರಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ ಬ್ಯಾಟ್ಸ್‌ಮನ್


ಭಾರತೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್!
ಈ ಪಂದ್ಯದಲ್ಲಿ ಪ್ರಿಯಾಂಕ್ ಪಾಂಚಾಲ್ (96 ರನ್), ಉಮಂಗ್ ಕುಮಾರ್ (14 ರನ್), ಚಿರಾಗ್ ಗಾಂಧಿ (42 ರನ್), ಸೌರವ್ ಚೌಹಾಣ್ (0 ರನ್), ಕ್ಷಿತಿಜ್ ಪಟೇಲ್ (4 ರನ್), ಚಿಂತನ್ ಗಜ (0 ರನ್), ಸಿದ್ಧಾರ್ಥ್ ದೇಸಾಯಿ (0 ರನ್) ಅವರನ್ನು ಔಟ್ ಮಾಡಿ  ಜೈವೀರ್ ಪರ್ಮಾರ್ (0 ರನ್) ಅವರ ವಿಕೆಟ್ ಅನ್ನು ಸಹ ಕಬಳಿಸಿದರು.  ಇದರೊಂದಿಗೆ, ಲಿಸ್ಟ್-ಎ ಕ್ರಿಕೆಟ್‌ನ ಪಂದ್ಯದಲ್ಲಿ ಎಂಟು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ಮೂರನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಮಾತ್ರವಲ್ಲ,  ಭಾರತೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎಂಬ ಕೀರ್ತಿಗೂ ಸಹ ಅರ್ಪಿತ್ ಗುಲೇರಿಯಾ ಪಾತ್ರರಾಗಿದ್ದಾರೆ. 


ಇದನ್ನೂ ಓದಿ- Shikhar Dhawan Birthday: 10 ವರ್ಷಗಳಿಂದ ಶಿಖರ್ ಧವನ್ ಈ ದಾಖಲೆ ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ


ಈ ಸಾಧನೆ ಮಾಡಿದ ವಿಶ್ವದ 15ನೇ ಬೌಲರ್: 
2018ರಲ್ಲಿ ಲಿಸ್ಟ್ ಎ ಗೆ ಪದಾರ್ಪಣೆ ಮಾಡಿದ ಅರ್ಪಿತ್ ಗುಲೇರಿಯಾ ಪ್ರಸಕ್ತ ವಿಜಯ್ ಹಜಾರೆ ಟ್ರೋಫಿ ಋತುವಿನಲ್ಲಿ ಗುಲೇರಿಯಾ 4 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.26ರ ಹರೆಯದ ಅರ್ಪಿತ್ ಗುಲೇರಿಯಾ ಈ  ಪಂದ್ಯದ 49ನೇ ಓವರ್‌ನಲ್ಲಿ ಲಿಸ್ಟ್ ಎನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದರು. ಅದೇ ಓವರ್‌ನಲ್ಲಿ ಇನ್ನೂ ಮೂರು ವಿಕೆಟ್‌ಗಳನ್ನು ಪಡೆದರು. ಪ್ರಪಂಚದಾದ್ಯಂತ ದಾಖಲಾದ ಎಲ್ಲಾ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 15 ನೇ ಬೌಲರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.