ಕೇವಲ 21 ಎಸೆತಗಳಲ್ಲಿ 98 ರನ್! ಬಿರುಸಿನ ಶತಕ ಬಾರಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ ಬ್ಯಾಟ್ಸ್‌ಮನ್

Dwayne Smith Century:ಹೈದರಾಬಾದ್ ತಂಡದ 40 ವರ್ಷದ ಆರಂಭಿಕ ಬ್ಯಾಟ್ಸ್‌ಮನ್ ಟೂರ್ನಿಯ ವೇಗದ ಶತಕ  ಬಾರಿಸಿದರು. 

Written by - Ranjitha R K | Last Updated : Dec 6, 2023, 09:46 AM IST
  • ಲೆಜೆಂಡ್ಸ್ ಲೀಗ್ ಕ್ರಿಕೆಟ್ 2023 ಈಗ ನಾಕೌಟ್ ಸುತ್ತು ತಲುಪಿದೆ.
  • ಮಣಿಪಾಲ ತಂಡಕ್ಕೆ 75 ರನ್‌ಗಳ ಬೃಹತ್ ಅಂತರದ ಸೋಲು
  • ವೇಗದ ಶತಕ ಬಾರಿಸಿದ ಆರಂಭಿಕ ಬ್ಯಾಟ್ಸ್‌ಮನ್
ಕೇವಲ 21 ಎಸೆತಗಳಲ್ಲಿ 98 ರನ್! ಬಿರುಸಿನ ಶತಕ ಬಾರಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ ಬ್ಯಾಟ್ಸ್‌ಮನ್ title=

Dwayne Smith Century : ಲೆಜೆಂಡ್ಸ್ ಲೀಗ್ ಕ್ರಿಕೆಟ್ 2023 ಈಗ  ನಾಕೌಟ್ ಸುತ್ತು ತಲುಪಿದೆ. ಅರ್ಬನ್ ರೈಸರ್ಸ್ ಹೈದರಾಬಾದ್ ಮತ್ತು ಮಣಿಪಾಲ್ ಟೈಗರ್ಸ್ ನಡುವಿನ ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್ ಪಂದ್ಯ ಸೂರತ್‌ನ ಲಾಲಾಭಾಯಿ ಕಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವದ ಹೈದರಾಬಾದ್ ತಂಡ ಮಣಿಪಾಲವನ್ನು 75 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಹೈದರಾಬಾದ್ ತಂಡದ 40 ವರ್ಷದ ಆರಂಭಿಕ ಬ್ಯಾಟ್ಸ್‌ಮನ್ ಟೂರ್ನಿಯ ವೇಗದ ಶತಕ  ಬಾರಿಸಿದರು. 

ಅರ್ಬನ್ ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದ ಬ್ಯಾಟ್ಸ್‌ಮನ್ ಡ್ವೇನ್ ಸ್ಮಿತ್ ಮಂಗಳವಾರ ಮೈದಾನದಲ್ಲಿ ಅಬ್ಬರಿಸಿದ್ದರು. ಈ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 53 ಎಸೆತಗಳನ್ನು ಎದುರಿಸಿದ ಸ್ಮಿತ್ ವೇಗವಾಗಿ 120 ರನ್ ಗಳಿಸಿದರು.  ಇದರಲ್ಲಿ 14  ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಅವರು ಕೇವಲ 21 ಎಸೆತಗಳಲ್ಲಿ 98 ರನ್ ಗಳಿಸಿದರು. ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ತಂಡ 20 ಓವರ್‌ಗಳಲ್ಲಿ 253 ರನ್‌ಗಳ ದೊಡ್ಡ ಸ್ಕೋರ್ ಗಳಿಸಿತು.

ಇದನ್ನೂ ಓದಿ : Shikhar Dhawan Birthday: 10 ವರ್ಷಗಳಿಂದ ಶಿಖರ್ ಧವನ್ ಈ ದಾಖಲೆ ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ

ಫೈನಲ್‌ನಲ್ಲಿ ರೈನಾ ತಂಡ :
ಮಣಿಪಾಲ ಟೈಗರ್ಸ್ ವಿರುದ್ಧ ಜಯ ದಾಖಲಿಸುವ ಮೂಲಕ ಹೈದರಾಬಾದ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಆಡುತ್ತಿರುವ ಮಣಿಪಾಲ್ ಟೈಗರ್ಸ್ 253 ರನ್ ಗಳ ಗುರಿ ಬೆನ್ನತ್ತಿ 178 ರನ್ ಗಳಿಗೆ ಆಲ್ ಔಟ್ ಆಯಿತು. ಏಂಜೆಲೊ ಪೆರೆರಾ ತಂಡದ ಪರ ಗರಿಷ್ಠ 73 ರನ್ ಗಳಿಸಿದರು. ಹೈದರಾಬಾದ್ ಪರ ಪೀಟರ್ ಟ್ರೆಗೊ ಮತ್ತು ಜೆರೋಮ್ ಟೇಲರ್ ತಲಾ 3 ವಿಕೆಟ್ ಪಡೆದರು. ಬಿರುಸಿನ ಶತಕ ಸಿಡಿಸಿದ ಸ್ಮಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.  

ಡಿಸೆಂಬರ್ 6 ರಂದು ಎಲಿಮಿನೇಟರ್ ಪಂದ್ಯ : 
ಕ್ವಾಲಿಫೈಯರ್-1 ಬಳಿಕ ಇದೀಗ ಎಲಿಮಿನೇಟರ್ ಪಂದ್ಯದ ಸರದಿ. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಸೂರತ್‌ನ ಲಾಲಾಭಾಯಿ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಇಂಡಿಯಾ ಕ್ಯಾಪಿಟಲ್ಸ್ ತಂಡದ ನಾಯಕತ್ವ ಗೌತಮ್ ಗಂಭೀರ್ ಕೈಯಲ್ಲಿದೆ. ಕೆವಿನ್ ಒ'ಬ್ರಿಯಾನ್ ಗುಜರಾತ್ ಜೈಂಟ್ಸ್‌ನ  ಸಾರಥ್ಯ ವಹಿಸಿದ್ದಾರೆ. ಈ ಪಂದ್ಯದ ನಂತರ ಕ್ವಾಲಿಫೈಯರ್-2 ಡಿಸೆಂಬರ್ 7 ರಂದು ನಡೆಯಲಿದೆ. ಟೂರ್ನಿಯ ಫೈನಲ್ ಪಂದ್ಯ ಡಿಸೆಂಬರ್ 9 ರಂದು ನಡೆಯಲಿದೆ.

ಇದನ್ನೂ ಓದಿ : ಗಲ್ಲು ಶಿಕ್ಷೆಗೆ ಗುರಿಯಾದ ವಿಶ್ವದ ಏಕೈಕ ಕ್ರಿಕೆಟಿಗ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಗುಂಡಿಕ್ಕಿ ಕೊಂದಿದ್ದೇಕೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News