Virat Kohli 28th Century: ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌’ನಲ್ಲಿ ವಿರಾಟ್ ಕೊಹ್ಲಿ 3 ವರ್ಷಗಳಿಂದ ಬಹುನಿರೀಕ್ಷಿತ ಟೆಸ್ಟ್ ಶತಕ ಪೂರೈಸಿದ್ದಾರೆ. ಇಂದಿನ ಎರಡನೇ ಸೆಷನ್ ನಲ್ಲಿ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದ 75ನೇ ಶತಕ ದಾಖಲಿಸಿದರು. ಈ ಶತಕದ ಮೂಲಕ ಆಸ್ಟ್ರೇಲಿಯಾ ವಿರುದ್ಧ ದೊಡ್ಡ ದಾಖಲೆ ಬರೆದಿದ್ದಾರೆ.  ಇವೆಲ್ಲದರ ಜೊತೆಗೆ ಭಾರತದ ಮಾಜಿ ಅನುಭವಿ ಬ್ಯಾಟ್ಸ್‌ಮನ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: TPL Season-2: ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ


ವಿರಾಟ್ ಈ ಅನುಭವಿ ಆಟಗಾರನಿಗೆ ಸಮ:


ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 28ನೇ ಶತಕ ದಾಖಲಿಸಿದರು. ಇದರ ಜೊತೆಗೆ ಅವರ ಹೆಸರಿನಲ್ಲಿ ದೊಡ್ಡ ಸಾಧನೆಯೊಂದು ದಾಖಲಾಗಿದೆ. ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅವರ 8ನೇ ಟೆಸ್ಟ್ ಶತಕವಾಗಿದೆ. ಈ ಶತಕದ ಮೂಲಕ ಕೊಹ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಗವಾಸ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ 8 ಟೆಸ್ಟ್ ಶತಕಗಳನ್ನು ಬಾರಿಸಿದ್ದರು


ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಮತ್ತು ಗವಾಸ್ಕರ್ ಅವರ ಅಂಕಿಅಂಶಗಳು


ಸುನಿಲ್ ಗವಾಸ್ಕರ್ 20 ಟೆಸ್ಟ್, 8 ಶತಕ, 4 ಅರ್ಧ ಶತಕ, 1550 ರನ್


ವಿರಾಟ್ ಕೊಹ್ಲಿ 20 ಟೆಸ್ಟ್ 8 ಶತಕ, 5 ಅರ್ಧ ಶತಕ, 1682 ರನ್


ಕೊಹ್ಲಿಯ 75ನೇ ಅಂತಾರಾಷ್ಟ್ರೀಯ ಶತಕ:


ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ 75ನೇ ಶತಕವಾಗಿದೆ. ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಇದುವರೆಗೆ 46 ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 28 ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಟಿ 20 ನಲ್ಲಿ ಒಂದು ಶತಕವನ್ನು ಹೊಂದಿದ್ದಾರೆ, ಇದು ಏಷ್ಯಾ ಕಪ್ 2022 ರಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಬಾರಿಸಿದ ಶತಕವಾಗಿದೆ. ಈ ವರ್ಷದಲ್ಲಿ ಕೊಹ್ಲಿ ಮೂರು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.


ಕಳೆದ ವರ್ಷ ಏಷ್ಯಾಕಪ್ 2022ರಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಶತಕ ದಾಖಲಿಸಿದ್ದರು. ಡಿಸೆಂಬರ್ ತಿಂಗಳ ದೀರ್ಘ ಕಾಯುವಿಕೆಯ ನಂತರ, ಅವರು ODI ಸ್ವರೂಪದಲ್ಲಿ ಶತಕ ಸಿಡಿಸಿದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 3 ವರ್ಷಗಳ ನಂತರ 100 ರನ್ ಗಡಿ ದಾಟಿದ್ದಾರೆ. ಇದು ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 28ನೇ ಟೆಸ್ಟ್ ಶತಕವಾಗಿದೆ. ಇದಕ್ಕೂ ಮೊದಲು, 22 ನವೆಂಬರ್ 2019 ರಂದು, ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಶತಕವನ್ನು ಗಳಿಸಿದರು.


ಇದನ್ನೂ ಓದಿ:  Shukra Gochar 2023: ಇಂದಿನಿಂದ ಈ 5 ರಾಶಿಗಳ ಭವಿಷ್ಯ ಬದಲಾಗಲಿದೆ


ಇನ್ನು ಈ ಶತಕವನ್ನು ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ. ತನ್ನ ಕೊರಳಲ್ಲಿರುವ ಉಂಗುರ ಸಹಿತ ಸರಕ್ಕೆ ಮುತ್ತಿಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.