Viral Video; ಗೆಳತಿಯ ನೋಡಲು ಕಾಂಪೌಡ್ ಹಾರಿಬಂದ… ಅಂಗಳದಲ್ಲಿ ಮಲಗಿದ್ದ ಆಕೆ ಮಾಡಿದ್ದು… ವಿಡಿಯೋ ನೋಡಿ

Monkey Cat Video: ಭಾವನೆಗಳು ಮಾನವನಿಗೆ ಮಾತ್ರ ಸೇರಿದೆಯೇ? ಈ ಪ್ರಶ್ನೆಗೆ ಇಲ್ಲ ಎಂದು ಹೇಳಲು ಒಂದು ಕ್ಷಣವೂ ಯೋಚಿಸಬೇಡಿ. ಪ್ರೀತಿ ಮತ್ತು ಸ್ನೇಹ ಮನುಷ್ಯರಿಗೆ ಮಾತ್ರ ಎಂದು ನೀವು ಭಾವಿಸಿದರೆ, ಅದು ತಪ್ಪು. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ನಾವು ಹೆಚ್ಚು ಪ್ರೀತಿ ಮತ್ತು ಕರುಣೆಯನ್ನು ನೋಡಬಹುದು ಎಂಬುದು ಸತ್ಯ.

Written by - Bhavishya Shetty | Last Updated : Mar 12, 2023, 03:28 PM IST
    • ಪ್ರೀತಿ ಮತ್ತು ಸ್ನೇಹ ಮನುಷ್ಯರಿಗೆ ಮಾತ್ರ ಎಂದು ನೀವು ಭಾವಿಸಿದರೆ, ಅದು ತಪ್ಪು.
    • ಮನುಷ್ಯರಿಗಿಂತ ಪ್ರಾಣಿಗಳಲ್ಲಿ ನಾವು ಹೆಚ್ಚು ಪ್ರೀತಿ ಮತ್ತು ಕರುಣೆಯನ್ನು ನೋಡಬಹುದು ಎಂಬುದು ಸತ್ಯ.
    • ಇಂದು ಅನೇಕ ಜನರು ತಮ್ಮ ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುತ್ತಾರೆ
Viral Video; ಗೆಳತಿಯ ನೋಡಲು ಕಾಂಪೌಡ್ ಹಾರಿಬಂದ… ಅಂಗಳದಲ್ಲಿ ಮಲಗಿದ್ದ ಆಕೆ ಮಾಡಿದ್ದು… ವಿಡಿಯೋ ನೋಡಿ title=
Animal Video

Monkey Cat Video: ಭಾವನೆಗಳು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೂ ಇರುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂದು ನಾವು ನಿಮಗೆ ತೋರಿಸಹೊರಟ ವಿಡಿಯೋ ಈ ಮಾತಿಗೆ ಕನ್ನಡಿ ಹಿಡಿದಂತಿದೆ ಎನ್ನಬಹುದು. ಕೋತಿ ಓಡೋಡಿ ಬಂದು ತನ್ನ ಗೆಳತಿಯನ್ನು ಬಿಗಿದಪ್ಪಿ ಮುದ್ದಾಡುವ ವಿಡಿಯೋ ನೋಡಿದ್ರೆ ಮನಮುಟ್ಟುವುದು ಖಂಡಿತ.

ಇದನ್ನೂ ಓದಿ: Shukra Gochar 2023: ಇಂದಿನಿಂದ ಈ 5 ರಾಶಿಗಳ ಭವಿಷ್ಯ ಬದಲಾಗಲಿದೆ

ಭಾವನೆಗಳು ಮಾನವನಿಗೆ ಮಾತ್ರ ಸೇರಿದೆಯೇ? ಈ ಪ್ರಶ್ನೆಗೆ ಇಲ್ಲ ಎಂದು ಹೇಳಲು ಒಂದು ಕ್ಷಣವೂ ಯೋಚಿಸಬೇಡಿ. ಪ್ರೀತಿ ಮತ್ತು ಸ್ನೇಹ ಮನುಷ್ಯರಿಗೆ ಮಾತ್ರ ಎಂದು ನೀವು ಭಾವಿಸಿದರೆ, ಅದು ತಪ್ಪು. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ನಾವು ಹೆಚ್ಚು ಪ್ರೀತಿ ಮತ್ತು ಕರುಣೆಯನ್ನು ನೋಡಬಹುದು ಎಂಬುದು ಸತ್ಯ.

ಇಂದು ಅನೇಕ ಜನರು ತಮ್ಮ ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುತ್ತಾರೆ. ಹೆಚ್ಚಿನವರಿಗೆ ನಾಯಿಗಳು ಮತ್ತು ಬೆಕ್ಕುಗಳ ಮೇಲಿನ ಪ್ರೀತಿ ಅಗಾಧವಾಗಿರಬಹುದು. ಆದರೆ ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಗೂ ಮನೆಯಲ್ಲಿ ಸಾಕುವ ಪ್ರಾಣಿಗಳಿಗೂ ಉತ್ತಮ ಸಹವಾಸವಿರುತ್ತದೆ ಎಂದರೆ ನಂಬುತ್ತೀರಾ?

ಪ್ರಾಣಿಗಳ ನಡುವಿನ ನವಿರಾದ ವಾತ್ಸಲ್ಯ ಮತ್ತು ಪ್ರೀತಿಯನ್ನು ತೋರಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಸೆಳೆದಿದೆ. ಈ ವೀಡಿಯೋ ನೋಡುವುದರಿಂದ ಮನಸ್ಸಿಗೆ ಮುದ ನೀಡುತ್ತದೆ.

 

ವೈರಲ್ ಆಗಿರುವ ವಿಡಿಯೋದಲ್ಲಿ ಬೆಕ್ಕಿನ ಬಳಿಕ ಒಂದು ಕೋತಿ ಓಡೋಡಿ ಬರುವುದನ್ನು ಕಾಣಬಹುದು. ತಕ್ಷಣವೇ ಬಂದು ಬೆಕ್ಕನ್ನು ಅಪ್ಪಿಕೊಂಡು ಮುದ್ದಾಡುತ್ತಿದೆ.

ಈ ಗೆಳೆತನ ನೋಡಲು ಎರಡು ಕಣ್ಣು ಸಾಕಾಗದು. ಈಗಾಗಲೇ ಸಾವಿರಾರು ಮಂದಿ ಈ ವಿಡಿಯೋವನ್ನು ನೋಡಿದ್ದು, ಮೆಚ್ಚುಗೆಯ ಕಮೆಂಟ್’ಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಮಂಗ ಮತ್ತು ಬೆಕ್ಕಿನ ಸ್ನೇಹ, ಮನುಷ್ಯರಿಗೆ ಉದಾಹರಣೆ ಎಂದಿದ್ದಾರೆ.

ಇದನ್ನೂ ಓದಿ: TPL Season-2: ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ

ಸಂಬಂಧಗಳ ಮಹತ್ವ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳ ಸೊಗಸನ್ನು ಈ ವಿಡಿಯೋ ತೋರಿಸುತ್ತಿದೆ ಎಂದು ನೆಟಿಜನ್’ಗಳು ಹರ್ಷ ವ್ಯಕ್ತಪಡಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News