TPL Season-2: ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ

TPL Season-2: ಎನ್ 1 ಕ್ರಿಕೆಟ್ ಅಕಾಡೆಮಿ ಕಳೆದ ವರ್ಷದಿಂದ ಕಿರುತೆರೆ ತಾರೆಯರಿಗೆಂದೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಆರಂಭಿಸಿದೆ. ಮೊದಲ ಸೀಸನ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್ 2 ಕೂಡ ಆರಂಭವಾಗಿದೆ. ಜೆರ್ಸಿ, ಟ್ರೋಫಿ ಅನಾವರಣ ಮೂಲಕ ಗಮನ ಸೆಳೆದಿದೆ. 

Written by - YASHODHA POOJARI | Last Updated : Mar 12, 2023, 03:08 PM IST
  • ಕಿರುತೆರೆ ತಾರೆಯರಿಗೆಂದೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಆರಂಭ
  • ಗಮನ ಸೆಳೆದಿರುವ ಜೆರ್ಸಿ, ಟ್ರೋಫಿ
  • ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ
TPL Season-2: ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ title=

TPL Season-2: ಎನ್ 1 ಕ್ರಿಕೆಟ್ ಅಕಾಡೆಮಿ ಕಳೆದ ವರ್ಷದಿಂದ ಕಿರುತೆರೆ ತಾರೆಯರಿಗೆಂದೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಆರಂಭಿಸಿದೆ. ಮೊದಲ ಸೀಸನ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್ 2 ಕೂಡ ಆರಂಭವಾಗಿದೆ. ಜೆರ್ಸಿ, ಟ್ರೋಫಿ ಅನಾವರಣ ಮೂಲಕ ಗಮನ ಸೆಳೆದಿದೆ.  ಕಿರುತೆರೆಯಲ್ಲಿ ರಂಜಿಸುತ್ತಿದ್ದ ಕಲಾವಿದರು ಬಿಡುವು ಮಾಡಿಕೊಂಡು ಬ್ಯಾಟ್ ಬಾಲ್ ಹಿಡಿದು ಜಾಲಿ ಮೂಡ್ ನಲ್ಲಿದ್ಧಾರೆ .

ಎನ್ 1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ.ಆರ್ ಕಿರುತೆರೆ ತಾರೆಯರಿಗೆಂದೇ ಟಿಪಿಎಲ್ ಹುಟ್ಟು ಹಾಕಿದ್ದಾರೆ. ಮೊದಲ ಸೀಸನ್ ಅದ್ದೂರಿಯಾಗಿ ಆರಂಭಗೊಂಡು ಯಶಸ್ಸನ್ನು ಕಂಡಿತ್ತು. ಸೀಸನ್ -2 ಕೂಡ ಅಷ್ಟೇ ಅದ್ದೂರಿ ಹಾಗೂ ಕಲರ್ ಫುಲ್ ಆಗಿ ಉದ್ಘಾಟನೆಯಾಗಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್  ಕ್ರಿಕೆಟ್ ಗ್ರೌಂಡ್ ನಲ್ಲಿ ಸೀಸನ್-2 ಪಂದ್ಯಾವಳಿ ನಡೆಯಲಿದೆ. 

ಇದನ್ನೂ ಓದಿ: ಈ ನಟಿಯ ಸೋದರಿಗೆ ಎಲ್ಲರೆದುರು "ಸೀರೆ ಬಿಚ್ಚಿ ನಿಲ್ಲು" ಎಂದಿದ್ದರಂತೆ ಆ ನಿರ್ಮಾಪಕ.!
 ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಒಟ್ಟು ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ  ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.ಎಲ್ಲಾ ತಂಡಗಳಿಗೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಹಲೋಕ ತ್ಯಜಿಸಿದ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್..!

ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಎನಿಎಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್  ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ನಲ್ಲಿ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News