ನವದೆಹಲಿ: ಟೀಂ ಇಂಡಿಯಾ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ(Virat Kohli) ಸುಮಾರು 2 ವರ್ಷಗಳಿಂದ ಶತಕ ಗಳಿಸಿಲ್ಲ. ಪದೇ ಪದೇ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ ಹೇಗಾದರೂ ಮಾಡಿ ಅದರಿಂದ ಹೊರಬರಲು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಲು ಹೊರಟಾಗ ತಮ್ಮ ಶತಕದ ಬರವನ್ನು ಕೊನೆಗೊಳಿಸುವ ಭರವಸೆಯಲ್ಲಿದ್ದರು. ಆದರೆ ಈ ಬಾರಿಯೂ ಅವರ ಆಸೆ ಕೈಗೊಡಲಿಲ್ಲ.


Virat Kohli) ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಅನೇಕ ಹಿರಿಯ ಕ್ರಿಕೆಟಿಗರು ಸಲಹೆ ನೀಡುತ್ತಿದ್ದಾರೆ. ಕೊಹ್ಲಿ ತಮ್ಮ ತಂತ್ರವನ್ನು ಬದಲಾಯಿಸಿಕೊಂಡು ಕಣಕ್ಕಿಳಿಯುವಂತೆ ಹೇಳುತ್ತಿದ್ದಾರೆ. 32 ವರ್ಷದ ಕೊಹ್ಲಿ ಕಳೆದ 2 ವರ್ಷಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೂ ಟೆಸ್ಟ್‌ ನಲ್ಲಿ ಅವರ ಯಶಸ್ಸು ಸ್ಥಿರವಾಗಿಲ್ಲ. ಸದ್ಯ ಇಂಗ್ಲೆಂಡ್ ಪ್ರವಾಸ(India tour of England 2021)ದಲ್ಲಿ ಕೊಹ್ಲಿ 2 ಬಾರಿ ಮಾತ್ರ 50 ರನ್ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಇದುವರೆಗಿನ 4 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್ ಗಳಲ್ಲಿ ಅವರ ಸ್ಕೋರ್ ಗಳು: 0, DNB, 42, 20, 7, 55, 50, 44 ಆಗಿವೆ. ಉತ್ತಮ ಪ್ರದರ್ಶನ ನೀಡುವಲ್ಲಿ ಪದೇ ಪದೇ ವಿಫಲವಾಗುತ್ತಿರುವ ವಿರಾಟ್ ಕೊಹ್ಲಿ ಶತಕ ಭಾರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಕೈಗೂಡುತ್ತಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್


ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್(4th Test Match) ಪಂದ್ಯದಲ್ಲಿ ಉತ್ತಮ ಆರಂಭವನ್ನು ಬಳಸಿಕೊಳ್ಳುವಲ್ಲಿ ಕೊಹ್ಲಿ ವಿಫಲರಾದರು. 96 ಎಸೆತಗಳಲ್ಲಿ 7 ಬೌಂಡರಿ ಇದ್ದ 44 ರನ್ ಗಳಿಸಿದ್ದ ವಿರಾಟ್ ಇಂಗ್ಲೆಂಡ್ ಸ್ಪಿನ್ನರ್ ಮೋಹಿನ್ ಅಲಿ ಬೌಲಿಂಗ್ ನಲ್ಲಿ ಕ್ರೇಗ್ ಓವರ್ಟನ್ ಗೆ ಕ್ಯಾಚಿತ್ತು ನಿರಾಸೆ ಅನುಭವಿಸಿದರು. ಶತಕ ಗಳಿಸುವ ಹುಮ್ಮಸ್ಸಿನಲ್ಲಿದ್ದ ಕೊಹ್ಲಿ111ನೇ ಓವರ್ ನಲ್ಲಿ ಔಟ್ ಆಗಿ ಬೇಸರದಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಹತಾಶರಾಗಿದ್ದ ಕೊಹ್ಲಿ ಸಿಟ್ಟಿನಲ್ಲಿ ಡ್ರೆಸ್ಸಿಂಗ್ ರೂಂನ ಗೋಡೆಗೆ ಗುದ್ದಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ: IND VS ENG: Ravi Shastri ಕೊರೊನಾ ವರದಿ ಪಾಸಿಟಿವ್, 4ನೇ ಟೆಸ್ಟ್ ಆಡುತ್ತಿರುವ ಟೀಂ ಇಂಡಿಯಾ ಕುರಿತು ಬಿಗ್ ಅಪ್ಡೇಟ್


ಕೊಹ್ಲಿ ಡ್ರೆಸ್ಸಿಂಗ್ ರೂಂನ ಗೋಡೆಗೆ ಗುದ್ದಿರುವ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿದೆ. ಕ್ರಿಕೆಟ್ ಇತಿಹಾಸದಲ್ಲಿಯೇ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ ಮನ್‌ಗಳಲ್ಲಿ ಒಬ್ಬರೆಂಬುದನ್ನುಅಲ್ಲಗಳೆಯುವಂತಿಲ್ಲ. ಆದರೆ ಇಂಗ್ಲೆಂಡ್ ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ವೈಭವ ತೋರುವಲ್ಲಿ ಕೊಹ್ಲಿ ವಿಫಲರಾಗಿದ್ದಾರೆ. ಆಂಗ್ಲರ ವಿರುದ್ಧದ 4 ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಕೇವಲ 218 ರನ್ ಗಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.