ನವದೆಹಲಿ: IND VS ENG Test Series - ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ (IND VS ENG 4th Test) ನಡೆಯುತ್ತಿದೆ. ಏತನ್ಮಧ್ಯೆ ಒಂದು ಬಿಗ್ ಅಪ್ಡೇಟ್ ಪ್ರಕಟವಾಗಿದೆ. ನಿನ್ನೆ ಸಂಜೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಕೋವಿಡ್ ಪಾಸಿಟಿವ್ ಕಂಡುಬಂದಿದ್ದಾರೆ.
ರವಿ ಶಾಸ್ತ್ರಿಗೆ ಕೊರೊನಾ (Ravi Shastri Tested Covid Positive)
ರವಿ ಶಾಸ್ತ್ರಿ ಅವರ ಲ್ಯಾಟರಲ್ ಫ್ಲೋ ಟೆಸ್ಟ್ ಧನಾತ್ಮಕ ಪ್ರಕಟವಾಗಿದೆ. ಇದಾದ ಬಳಿಕ ರವಿಶಾಸ್ತ್ರಿ ಸೇರಿದಂತೆ ಟೀಂ ಇಂಡಿಯಾದ ನಾಲ್ವರು ಸಿಬ್ಬಂದಿಗಳನ್ನು ಐಸೊಲೆಟ್ ಮಾಡಲಾಗಿದೆ. ಇವರಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್, ಫಿಲ್ಡಿಂಗ್ ಕೋಚ್ ಆರ್. ಶ್ರೀಧರ್, ಭಾರತೀಯ ತಂಡದ ಫಿಸಿಯೋ ನಿತೀನ್ ಪಟೇಲ್ ಶಾಮೀಲಾಗಿದ್ದಾರೆ. ಈ ಎಲ್ಲರನ್ನು RT-PCR ಟೆಸ್ಟ್ ಗೂ ಕೂಡ ಒಳಪಡಿಸಲಾಗಿದೆ ಹಾಗೂ ವರದಿ ಬರುವವರೆಗೂ ಕೂಡ ಈ ಆಟಗಾರರು ಹೋಟೆಲ್ ಐಸೋಲೆಶನ್ ನಲ್ಲಿ ಇರಲಿದ್ದಾರೆ.
BCCI Medical Team has isolated Head Coach Ravi Shastri, Bowling Coach B Arun, Fielding Coach R Sridhar, and Physiotherapist Nitin Patel as a precautionary measure after Shastri’s lateral flow test returned positive last evening: BCCI pic.twitter.com/48D4RQ4Pk8
— ANI (@ANI) September 5, 2021
4ನೇ ಟೆಸ್ಟ್ ಕುರಿತು ಬಿಗ್ ಅಪ್ಡೇಟ್
ರವಿಶಾಸ್ತ್ರಿ (Ravi Shastri) ಅವರ ಲ್ಯಾಟರಲ್ ಫ್ಲೋ ಟೆಸ್ಟ್ ಪಾಸಿಟಿವ್ ಬಂದ ಬಳಿಕ ಅವರನ್ನು ಹಾಗೂ ಉಳಿದ ಸಿಬ್ಬಂಧಿಗಳನ್ನು ಐಸೊಲೆಟ್ ಮಾಡಲಾಗಿದೆ. ಆದರೆ, ಇದರಿಂದ ಪಂದ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಏಕೆಂದರೆ, ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾದ ಎಲ್ಲಾ ಆಟಗಾರರ ಟೆಸ್ಟ್ ಮಾಡಿಸಲಾಗಿದ್ದು, ಎಲ್ಲರ ವರದಿ ಋಣಾತ್ಮಕ ಹೊರಬಂದಿದೆ. ಹೀಗಿರುವಾಗ ಟೆಸ್ಟ್ ಸರಣಿಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಮತ್ತು ಪಂದ್ಯಗಳು ಈ ಮೊದಲು ನಿಗದಿಯಂತೆಯೇ ನಡೆಯಲಿವೆ.
4ನೇ ಟೆಸ್ಟ್ ಪಂದ್ಯ ಜಾರಿಯಲ್ಲಿರಲಿದೆ
ನಾಲ್ಕನೇ ಟೆಸ್ಟ್ ನಲ್ಲಿ ಟಾಸ್ ಸೋತ ನಂತರ, ಮೊದಲು ಬ್ಯಾಟಿಂಗ್ ಮಾಡಲು ಬಂದ ಟೀಂ ಇಂಡಿಯಾ 191 ರನ್ ಗಳಿಗೆ ಆಲೌಟ್ ಆಯಿತು. ನಂತರ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಓಪನರ್ ರೋಹಿತ್ ಶರ್ಮಾ (127) (Rohit Sharma) ವಿದೇಶಿ ನೆಲದಲ್ಲಿ ಮೊದಲ ಶತಕ ದಾಖಲಿಸಿದ್ದಾರೆ ಮತ್ತು ಚೇತೇಶ್ವರ ಪೂಜಾರ (61) ಜೊತೆ ಎರಡನೇ ವಿಕೆಟ್ ಗೆ 153 ರನ್ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ಇದರಿಂದ ಭಾರತವು ಇಲ್ಲಿ ಶನಿವಾರ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದೆ.
ಇದನ್ನೂ ಓದಿ-Tokyo Paralympics 2020 ನಲ್ಲಿ ಪದಕಗಳ ಸುರಿ ಮಳೆ : ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಸುಹಾಸ್!
1-1 ರಿಂದ ಸರಣಿ ಸಮಬಲವಾಗಿದೆ
ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯು ಪ್ರಸ್ತುತ 1-1ರಲ್ಲಿ ಸಮಬಲವಾಗಿದೆ. ಈ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಡ್ರಾ ಆಗಿತ್ತು. ಅದರ ನಂತರ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಭಾರತ ಇಂಗ್ಲೆಂಡ್ ಅನ್ನು ಸೋಲಿಸಿತ್ತು. ಆದರೆ ಮೂರನೇ ಟೆಸ್ಟ್ ನಲ್ಲಿ, ಇಂಗ್ಲೆಂಡ್ ಸರಣಿಗೆ ಮರಳಿ ಏಕಪಕ್ಷೀಯವಾಗಿ ಟೆಸ್ಟ್ ಪಂದ್ಯವನ್ನು ತನ್ನದಾಗಿಸಿಕೊಂದಿತು ಮತ್ತು ಸರಣಿಯು 1-1ರಲ್ಲಿ ಸಮಬಲಗೊಂಡಿತು. ಪ್ರಸ್ತುತ ಎರಡೂ ತಂಡಗಳು ನಾಲ್ಕನೇ ಟೆಸ್ಟ್ ನಲ್ಲಿ ಮುನ್ನಡೆ ಸಾಧಿಸಲು ಯತ್ನಿಸುತ್ತಿವೆ.
ಇದನ್ನೂ ಓದಿ-Tokyo Paralympics: ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್ 3 ನಲ್ಲಿ ಕಂಚು ಗೆದ್ದ ಮನೋಜ್ ಸರ್ಕಾರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.