Virat Kohli: ಕಿಂಗ್ ಕೊಹ್ಲಿಗೆ ಇನ್‌ಸ್ಟಾಗ್ರಾಮ್​ನಲ್ಲಿ 150 ಮಿಲಿಯನ್ ಫಾಲೋವರ್ಸ್..!

ಮೈದಾನದಲ್ಲಿ ಅಕ್ರಮಣಶೀಲತೆಗೆ ಹೆಸರುವಾಸಿಯಾಗಿರುವ ಕೊಹ್ಲಿ 150 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಹೊಂದಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Written by - Puttaraj K Alur | Last Updated : Sep 4, 2021, 04:36 PM IST
  • ವಿಶ್ವದಲ್ಲಿ ಕೆಲವೇ ಕ್ರೀಡಾಪಟುಗಳು ಮಾಡಿದ ಸಾಧನೆಯ ಸಾಲಿಗೆ ಸೇರಿದ ರನ್ ಮಷಿನ್ ವಿರಾಟ್ ಕೊಹ್ಲಿ
  • ಇನ್‌ಸ್ಟಾಗ್ರಾಮ್ ನಲ್ಲಿ 150 ಮಿಲಿಯನ್ ಫಾಲೋವರ್ಸ್ ಹೊಂದಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರ
  • ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 337 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ
Virat Kohli: ಕಿಂಗ್ ಕೊಹ್ಲಿಗೆ ಇನ್‌ಸ್ಟಾಗ್ರಾಮ್​ನಲ್ಲಿ 150 ಮಿಲಿಯನ್ ಫಾಲೋವರ್ಸ್..! title=
ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದಾರೆ (Photo Courtesy: @Zee News)

ನವದೆಹಲಿ: ಟೀಂ ಇಂಡಿಯಾ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ(Virat Kohli)ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಬರೆದಿಟ್ಟುಕೊಂಡಿದ್ದಾರೆ. ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಮೈದಾನದ ಒಳಗೂ ಹೊರಗೂ ಕೊಹ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ತಾರೆಯಾಗಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ಕೆಲವೇ ಕ್ರೀಡಾಪಟುಗಳು ಮಾಡಿದ ಸಾಧನೆಯ ಸಾಲಿಗೆ ಸೇರಿದ್ದಾರೆ.

ಮೈದಾನದಲ್ಲಿ ಅಕ್ರಮಣಶೀಲತೆಗೆ ಹೆಸರುವಾಸಿಯಾಗಿರುವ ಅಬ್ಬರದ ಬ್ಯಾಟ್ಸ್ ಮನ್ ಕೊಹ್ಲಿ 150 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌(Instagram Followers)ಗಳನ್ನು ಹೊಂದಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಡೀ ಏಷ್ಯಾದಲ್ಲಿಯೇ ಇಷ್ಟೊಂದು ಅನುಯಾಯಿಗಳನ್ನು ಯಾವ ವ್ಯಕ್ತಿಯೂ ಹೊಂದಿಲ್ಲ. ಈ ವಿಶೇಷ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಸೆಲೆಬ್ರಿಟಿ ಕೂಡ ಕೊಹ್ಲಿ ಆಗಿದ್ದು, ಇನ್‌ಸ್ಟಾಗ್ರಾಮ್ ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 15th Season Update: IPL ಹೊಸ ತಂಡಗಳಿಗಾಗಿ Tender ಜಾರಿ, BCCI ಷರತ್ತುಗಳೇನು? ಇಲ್ಲಿದೆ ವರದಿ

ಕ್ರೀಡಾ ಪ್ರಪಂಚಕ್ಕೆ ಬಂದಾಗ ಕೊಹ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿದ್ದಾರೆ. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ, ಪೋರ್ಚುಗೀಸ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಕ್ರೀಡಾ ಜಗತ್ತಿನಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ರೊನಾಲ್ಡೊ(Cristiano Ronaldo) ಬರೋಬ್ಬರಿ 337 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅರ್ಜೆಂಟೀನಾ ಫಾರ್ವರ್ಡ್ ಲಿಯೋನೆಲ್ ಮೆಸ್ಸಿ 260 ಮಿಲಿಯನ್ ಅನುನಾಯಿಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ ಇನ್‌ಸ್ಟಾಗ್ರಾಮ್‌ನಲ್ಲಿ 160 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದು, 3ನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ರನ್ ಮಷಿನ್ ಕೊಹ್ಲಿ(150 ಮಿಲಿಯನ್) ಇದ್ದಾರೆ.

ಪ್ರೀಮಿಯರ್ ಲೀಗ್ ದೈತ್ಯ ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ತನ್ನ 2ನೇ ಅವಧಿಯನ್ನು ಆರಂಭಿಸಲಿರುವ ರೊನಾಲ್ಡೊ 337 ಮಿಲಿಯನ್‌ಗಿಂತಲೂ ಹೆಚ್ಚಿನ ಅನುಯಾಯಿಗಳನ್ನು ಹೊಂದುವ ಮೂಲಕ ಇನ್‌ಸ್ಟಾಗ್ರಾಮ್‌ನ ರಾಜನಾಗಿ ಮೆರೆಯುತ್ತಿದ್ದಾರೆ. ಇನ್‌ಸ್ಟಾಗ್ರಾಮ್(Instagram) ಹೊರತಾಗಿ ಕೊಹ್ಲಿ ಟ್ವಿಟರ್ ಮತ್ತು ಫೇಸ್‌ಬುಕ್‌ ಸೇರಿ ಇತರ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದುವರೆಗೆ ಟ್ವಿಟರ್‌(@imVkohli)ನಲ್ಲಿ 43.5 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅದರಂತೆ ಫೇಸ್‌ಬುಕ್‌(Virat Kohli)ನಲ್ಲಿ 47 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ..!

ಕಳೆದ 6-7 ತಿಂಗಳುಗಳ ಅವಧಿಯಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 50 ಮಿಲಿಯನ್ ಗಿಂಗಲೂ ಹೆಚ್ಚು ಅನುಯಾಯಿಗಳನ್ನು ಸಂಪಾದಿಸಿದ್ದಾರಂತೆ. ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಅವರು 100 ಮಿಲಿಯನ್ ಫಾಲೋವರ್ಸ್ ಗಡಿಯನ್ನು ತಲುಪಿದ್ದರು. ಏತನ್ಮಧ್ಯೆ ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 32 ವರ್ಷ ವಯಸ್ಸಿನ ಕೊಹ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯ A ಗ್ರೇಡ್ ಕಾಂಟ್ರ್ಯಾಕ್ಟ್ ನಡಿ ವಾರ್ಷಿಕ 7 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಇದೇ ಕಾಂಟ್ರ್ಯಾಕ್ಟ್ ನಡಿ ಸಂಭಾವಣೆ ಪಡೆದುಕೊಳ್ಳುತ್ತಿದ್ದಾರೆ.

ಪ್ರಸ್ತುತ ಆಂಗ್ಲರ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಪಂದ್ಯಗಳ ಸರಣಿಗಾಗಿ ಕೊಹ್ಲಿ ಇಂಗ್ಲೆಂಡ್(England) ಪ್ರವಾಸದಲ್ಲಿದ್ದಾರೆ. ಈ ಸರಣಿಯು ಸದ್ಯ 1-1 ರಲ್ಲಿ ಸಮಬಲ ಕಂಡಿದೆ. ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರೆ, ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಲೀಡ್ಸ್ ಮೈದಾನದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಹೀನಾಯ ಸೋಲು ಕಂಡಿತ್ತು. ಸರಣಿಯ 4ನೇ ಟೆಸ್ಟ್ ಪಂದ್ಯವು ಪ್ರಸ್ತುತ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಭಾರತ 2ನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದ್ದು, 56 ರನ್ ಗಳ ಹಿನ್ನಡೆ ಅನುಭವಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News