Virat Kohli Video, IND vs WI 1st Test : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ಶೈಲಿಗೆ ಬಹಳ ಪ್ರಸಿದ್ಧರಾಗಿದ್ದಾರೆ. ಪಂದ್ಯ ಗೆಲ್ಲಲಿ, ಸೋಲಲಿ, ಅವರು ನಾಯಕರಾಗಲಿ, ಇಲ್ಲದಿರಲಿ ವಿರಾಟ್ ಶೈಲಿ ಎಂದಿಗೂ ಬದಲಾಗುವುದಿಲ್ಲ. ವಿರಾಟ್ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 141 ರನ್‌ಗಳಿಂದ ಗೆದ್ದಿದೆ. ಈ ನಡುವೆ ವಿರಾಟ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಡೊಮಿನಿಕಾದಲ್ಲಿ ನಡೆಯುತ್ತಿರುವ ಸರಣಿಯ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ರೈಗ್ ಬ್ರಾಥ್‌ವೈಟ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವಿಂಡೀಸ್ ತಂಡದ ಮೊದಲ ಇನಿಂಗ್ಸ್ ಕೇವಲ 150 ರನ್‌ಗಳನ್ನು ಗಳಿಸಿತು. ನಂತರ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5 ವಿಕೆಟ್ ಪಡೆದರು. ಇದಾದ ಬಳಿಕ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್ 171 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ನಾಯಕ ರೋಹಿತ್ 103 ಮತ್ತು ವಿರಾಟ್ 76 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 7 ವಿಕೆಟ್ ಕಬಳಿಸಿದ್ದು, ವಿಂಡೀಸ್ ತಂಡ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಗಿತ್ತು.


ಇದನ್ನೂ ಓದಿ: “RCBಗಾಗಿ 8 ವರ್ಷ ಆಡಿದೆ, ಆದ್ರೆ ಹೊರಹಾಕುವಾಗ ಒಂದು ಫೋನ್ ಕೂಡ ಮಾಡಿಲ್ಲ”: ಸ್ಟಾರ್ ಸ್ಪಿನ್ನರ್ ಬೇಸರ


ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲುವಿನ ಸನಿಹದಲ್ಲಿದ್ದಾಗ ವಿರಾಟ್ ಕೊಹ್ಲಿ ಎದುರಾಳಿ ತಂಡದೊಂದಿಗೆ ಸ್ಲೆಡ್ಜಿಂಗ್ ಮಾಡಲು ಯತ್ನಿಸಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಜೋಮೆಲ್ ವಾರಿಕನ್ ಅವರ ಬ್ಯಾಟಿಂಗ್ ನೋಡಿ ಕೊಹ್ಲಿ ಅವರನ್ನು ತೆಗಳಿದ್ದಾರೆ. ವಾಸ್ತವವಾಗಿ, ಆಗ ಭಾರತಕ್ಕೆ ಗೆಲ್ಲಲು ಕೇವಲ ಒಂದು ವಿಕೆಟ್ ಬೇಕಾಗಿತ್ತು.  


 


22ರ ಹರೆಯದ ಈ ಕ್ರಿಕೆಟಿಗನಿಗೆ ಮರುಜೀವ ಕೊಟ್ಟ BCCI: ಕೊಹ್ಲಿ ಗೆಳೆಯನಿಗೆ Team Indiaದಲ್ಲಿ ಸಿಕ್ಕೇಬಿಡ್ತು ಸ್ಥಾನ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.