Yuzvendra Chahal on RCB: ಟೀಂ ಇಂಡಿಯಾದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಮಾತನಾಡಿದ್ದು, ತಂಡದಿಂದ ತಮಗಾದ ನೋವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ಆರ್‌ಸಿಬಿ ನನ್ನನ್ನು ಬಿಡುಗಡೆಗೊಳಿಸಿದಾಗ ಅದು ನನಗೆ ತುಂಬಾ ಆಶ್ಚರ್ಯಕರ ಸಂಗತಿಯಾಗಿತ್ತು” ಎಂದು ಹೇಳಿದರು.
ಇದನ್ನೂ ಓದಿ: “ವಿಶ್ವಕಪ್ ಪಂದ್ಯದಲ್ಲಿ ಭಾರತದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ”: ಪಾಕ್ ಆಟಗಾರನ ವಿವಾದಾತ್ಮಕ ಹೇಳಿಕೆ
“ಆರ್ ಸಿ ಬಿ ಬಗ್ಗೆ ತುಂಬಾ ಬೇಸರವಾಯಿತು. ನಾನು ಯಾವಾಗಲೂ ಆರ್ ಸಿ ಬಿ ಜೊತೆ ನನ್ನ ಪಯಣದ ಬಗ್ಗೆ ಯೋಚಿಸುತ್ತಿದ್ದೆ, ಆದರೆ ಈ ನಿರ್ಧಾರ ನನಗೆ ಆಘಾತಕಾರಿ ಎನಿಸಿತು” ಎಂದು ಅವರು ಹೇಳಿದರು.
ಯುಜ್ವೇಂದ್ರ ಚಹಾಲ್ ತಮ್ಮ ವೃತ್ತಿ ಜೀವನದಲ್ಲಿ 8 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು. ಆ ಬಳಿಕ ಫ್ರಾಂಚೈಸಿ ಆರ್‌ಸಿಬಿಯಿಂದ ಅವರನ್ನು ರಿಲೀಸ್ ಮಾಡಿದ್ದು, ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. “ ನಾನು ಆರ್ ಸಿಬಿ ಪರ 8 ವರ್ಷ ಆಡಿದ್ದೇನೆ. ರಿಲೀಸ್ ಮಾಡುವಾಗ ನನಗೆ ತುಂಬಾ ಕಷ್ಟವಾಗಿತ್ತು. ಬಿಡುಗಡೆಗೂ ಮುನ್ನ ಒಂದು ಫೋನ್ ಕೂಡ ಮಾಡಿಲ್ಲ” ಎಂದರು.
ಪಾಡ್‌ಕಾಸ್ಟ್ ನಲ್ಲಿ ಯುಜುವೇಂದ್ರ ಚಹಾಲ್ ಮಾತನಾಡಿದ್ದು, ”ಆರ್‌ಸಿಬಿ ನನ್ನನ್ನು ಬಿಡುಗಡೆ ಮಾಡಿದಾಗ ನಾನು ತುಂಬಾ ಕೋಪಗೊಂಡಿದ್ದೆ. ನನ್ನ ಪ್ರಯಾಣವು 2014 ರಲ್ಲಿ ಪ್ರಾರಂಭವಾಯಿತು. ಆ ತಂಡದೊಂದಿಗೆ 8 ವರ್ಷಗಳ ಕಾಲ ಸಂಬಂಧ ಹೊಂದಿದ್ದೆ. ನಾನು ಸಾಕಷ್ಟು ಹಣ ಅಥವಾ ಬೇಡಿಕೆ ಇಟ್ಟಿದ್ದೇನೆ ಎಂದು ನನ್ನ ಬಗ್ಗೆ ಹೇಳಲಾಯಿತು. ನಿಜ ಹೇಳಬೇಕೆಂದರೆ ನಾನು ಯಾವುದೇ ಬೇಡಿಕೆಯನ್ನು ಇಟ್ಟಿರಲಿಲ್ಲ. RCB ಯಿಂದ ರಿಲೀಸ್ ಮಾಡುವ ಮೊದಲು ನನ್ನೊಂದಿಗೆ ಮಾತು ಕೂಡ ಕೇಳಲಿಲ್ಲ, ಯಾರೊಬ್ಬರೂ ಫೋನ್ ಸಹ ಮಾಡಲಿಲ್ಲ. ನನ್ನ ಜೀವನದ 8 ವರ್ಷಗಳನ್ನು ಕೊಟ್ಟ ಸ್ಥಳದಿಂದ ಈ ರೀತಿ ಹೊರಹಾಕಿರುವುದು ಬೇಸರ ತಂದಿದೆ” ಎಂದರು.
“ನಾನು RCB ಪರ 140 ಪಂದ್ಯಗಳನ್ನು ಆಡಿದ್ದೇನೆ. ಅವರು ಯಾವುದೇ ಸುಳಿವು ಕೂಡ ನೀಡದೆ ರಿಲೀಸ್ ಮಾಡಿರುವುದು ಬೇಸರ ತರಿಸಿದೆ. ನನ್ನನ್ನು ಏಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳುವ ಅಗತ್ಯವೂ ಇರಲಿಲ್ಲ. ಅವರು ನನಗೆ ಬಿಡ್ ಮಾಡುವುದಾಗಿ ಆರ್‌ಸಿಬಿ ಭರವಸೆ ನೀಡಿತ್ತು. ಆದರೆ ಅವರು ಹರಾಜಿನಲ್ಲಿ ನನಗೆ ಬಿಡ್ ಮಾಡಲಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ನನಗೆ ಕೋಪ ಮತ್ತು ದುಃಖವಾಯಿತು. ಚಿನ್ನಸ್ವಾಮಿ ಕ್ರೀಡಾಂಗಣ ಇಂದಿಗೂ ನನ್ನ ನೆಚ್ಚಿನ ಮೈದಾನ” ಎಂದರು.
ಇದನ್ನೂ ಓದಿ: ಟೆಸ್ಟ್’ನಲ್ಲಿ ವಿರಾಟ್ ವಿಕೆಟ್ ಕಿತ್ತ ಈ ಆಟಗಾರನ ತೂಕ 143 ಕೆಜಿ! ದೈತ್ಯ ಕ್ರಿಕೆಟಿಗ ವಿಂಡೀಸ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?
ಆರ್‌ಸಿಬಿಯ ಪ್ರಮುಖ ಆಟಗಾರರಲ್ಲಿ ಯುಜ್ವೇಂದ್ರ ಚಾಹಲ್ ಅವರು ಕೂಡ ಒಬ್ಬರು. 2014 ರಿಂದ 2021 ರವರೆಗೆ ಫ್ರಾಂಚೈಸಿಯೊಂದಿಗೆ ಇದ್ದ ಚಹಾಲ್, 140 ಪಂದ್ಯಗಳನ್ನು ಆಡಿದ್ದರು. 2022 ರಲ್ಲಿ, ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿತು ಮತ್ತು ರಾಜಸ್ಥಾನ್ ರಾಯಲ್ಸ್ 6.40 ಕೋಟಿಗೆ ಖರೀದಿಸಿತು. 2022 ರಲ್ಲಿ, ಚಹಾಲ್ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದರು ಮತ್ತು ಪರ್ಪಲ್ ಕ್ಯಾಪ್ ಅನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಐಪಿಎಲ್ 2023ರಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಅವರು 14 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಸದ್ಯ ಚಾಹಲ್ ಹೇಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ