Kohli Catch Video : ಗಾಳಿಯಲ್ಲಿ ಜಿಗಿದು ಅಚ್ಚರಿಯ ಕ್ಯಾಚ್ ಹಿಡಿದ ವಿರಾಟ್ : ನೋಡಿದ್ರೆ ನೀವು ಶಾಕ್ ಆಗ್ತೀರಾ!
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಗಾಳಿಯಲ್ಲಿ ಹಾರಿ ಕ್ಯಾಪ್ಟನ್ ರಿಷಬ್ ಪಂತ್ ಹೊಡೆದ ಬಾಲ್ ಅನ್ನು ಅಚ್ಚರಿಯವಾಗಿ ಕ್ಯಾಚ್ ಹಿಡಿದಿದ್ದು, ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಈ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಮುಂಬೈ : ಸೀಸನ್ 15ರ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 16 ರನ್ ಗಳಿಂದ ಸೋಲಿಸಿತು. ಈ ಸೀಸನ್ ನಲ್ಲಿ ಬೆಂಗಳೂರು ತಂಡಕ್ಕೆ ಇದು ನಾಲ್ಕನೇ ಗೆಲುವಾಗಿದೆ. ಐಪಿಎಲ್ 2022 ರಲ್ಲಿ ಬೆಂಗಳೂರು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ, ಆದರೆ ತಂಡದ ಮಾಜಿ ಕ್ಯಾಪ್ಟನ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ವಿಫಲರಾಗಿದ್ದಾರೆ. ಈ ಪಂದ್ಯದಲ್ಲೂ ವಿರಾಟ್ 12 ರನ್ ಗಳಿಸಿದ್ದಾರೆ. ಆದ್ರೆ, ಈ ಪಂದ್ಯದಲ್ಲಿ ಅತ್ತುತ್ಯಮ ಫೀಲ್ಡಿಂಗ್ ಮಾಡುವ ಮೂಲಕ ಕೊಹ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಗಾಳಿಯಲ್ಲಿ ಹಾರಿ ಕ್ಯಾಪ್ಟನ್ ರಿಷಬ್ ಪಂತ್ ಹೊಡೆದ ಬಾಲ್ ಅನ್ನು ಅಚ್ಚರಿಯವಾಗಿ ಕ್ಯಾಚ್ ಹಿಡಿದಿದ್ದು, ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಈ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಅಚ್ಚರಿಯ ಕ್ಯಾಚ್ ಹಿಡಿದ ವಿರಾಟ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮ್ಯಾಚ್ ನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಿಂದ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ, ಆದರೆ ಫೀಲ್ಡಿಂಗ್‌ನಲ್ಲಿ ಕಮಾಲ್ ಮಾಡಿದರು. ವಾಸ್ತವವಾಗಿ, ದೆಹಲಿಯ ಇನಿಂಗ್ಸ್‌ನ 17 ನೇ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಎಸೆದ ಮೂರನೇ ಎಸೆತಕ್ಕೆ ರಿಷಬ್ ಪಂತ್ ಭರ್ಜರಿ ಬ್ಯಾಟ್ ಬಿಸಿದರು, ಆದರೆ ಕೊಹ್ಲಿ ಗಾಳಿಯಲ್ಲಿ ತೂರಿ ಬರುತ್ತಿದ್ದ ಬಾಲಿನ ವೇದಷ್ಟೇ ಜಿಗಿದು ಒಂದೇ ಕೈಯಿಂದ ಈ ಕ್ಯಾಚ್ ಹಿಡಿದರು, ಇಲ್ಲಿ ಕೊಹ್ಲಿ ತಮ್ಮ ಫಿಟ್‌ನೆಸ್ ಪ್ರದರ್ಶಿಸಿದರು. ಇದೇ ಕಾರಣಕ್ಕೆ ಇದೀಗ ಈ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
DC vs RCB: ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನದ ಹಿಂದಿನ ಗುಟ್ಟೇನು ಗೊತ್ತೇ?
ಕೊಹ್ಲಿ ರನೌಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 40 ರನ್ ಗಳಿಸುವಷ್ಟರಲ್ಲಿ ತಂಡ 3 ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟ್ ಆಗಿ ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಲಲಿತ್ ಯಾದವ್ ನೇರ ಎಸೆತದಲ್ಲಿ ಕೊಹ್ಲಿ ರನ್ ಔಟ್ ಆದರು. ಒಂದು ರನ್ ಪಡೆಯುವಸಲುವಾಗಿ ಕೊಹ್ಲಿ ರನ್ ಔಟ್ ಆದರು. ಈ ಸೀಸನ್ ನಲ್ಲಿ ವಿರಾಟ್ ರನ್ ಔಟ್ ಆಗುತ್ತಿರುವುದು ಇದು ಎರಡನೇ ಬಾರಿ. ಈ ಸೀಸನ್ ನಲ್ಲಿ ಕೊಹ್ಲಿ ಇದುವರೆಗೆ 6 ಪಂದ್ಯಗಳಲ್ಲಿ 23.80 ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ.
ಇಡೀ ಪಂದ್ಯ ಹೀಗಿತ್ತು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ರಿಷಬ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ RCB ಮ್ಯಾಕ್ಸ್‌ವೆಲ್ 55 ರನ್ ಮತ್ತು ದಿನೇಶ್ ಕಾರ್ತಿಕ್ ಅವರ 34 ಎಸೆತಗಳಲ್ಲಿ 66 ರನ್‌ಗಳ ಆಧಾರದ ಮೇಲೆ 189 ರನ್‌ಗಳ ಸ್ಕೋರ್ ನೀಡಿತು. 189 ರನ್‌ಗಳಿಗೆ ಉತ್ತರವಾಗಿ ಡೆಲ್ಲಿ 7 ವಿಕೆಟ್‌ಗೆ 173 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ಡೇವಿಡ್ ವಾರ್ನರ್ 38ಕ್ಕೆ 66 ರನ್ ಗಳಿಸಿದರು. ಆರ್‌ಸಿಬಿ ಪರ ಜೋಶ್ ಹೇಜಲ್‌ವುಡ್ 28 ರನ್‌ಗಳಿಗೆ ಮೂರು ಮತ್ತು ಮೊಹಮ್ಮದ್ ಸಿರಾಜ್ 31 ರನ್‌ಗಳಿಗೆ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ : MI vs LSG: ಕನ್ನಡಿಗ ಕೆ.ಎಲ್ ರಾಹುಲ್ ಆರ್ಭಟಕ್ಕೆ ಸಚಿನ್, ಸೆಹ್ವಾಗ್ ದಾಖಲೆ ಧೂಳಿಪಟ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.