DC vs RCB: ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನದ ಹಿಂದಿನ ಗುಟ್ಟೇನು ಗೊತ್ತೇ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ಮೂಲಕ ಭರ್ಜರಿ 66 ರನ್ ಗಳಿಸಿದರು.ಆ ಮೂಲಕ ತಮ್ಮಲ್ಲಿನ ಕ್ರಿಕೆಟ್ ಆಟ ಇನ್ನೂ ಮುಗಿದಿಲ್ಲ ಎಂದು ಅವರು ಸೂಚ್ಯವಾಗಿ ಸಾಬೀತುಪಡಿಸಿದ್ದಾರೆ.

Written by - Zee Kannada News Desk | Last Updated : Apr 17, 2022, 01:06 AM IST
  • ಈ ಪೋಸ್ಟ್ ನಲ್ಲಿ ತಮ್ಮ ಮಕ್ಕಳು ಕಾರ್ತಿಕ್ ಜೊತೆ ಮಾತನಾಡುತ್ತಿರುವ ಚಿತ್ರವನ್ನು ದೀಪಿಕಾ ಪೋಸ್ಟ್ ಮಾಡಿದ್ದಾರೆ
 DC vs RCB: ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನದ ಹಿಂದಿನ ಗುಟ್ಟೇನು ಗೊತ್ತೇ?  title=
Photo Courtesy: Twitter

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ಮೂಲಕ ಭರ್ಜರಿ 66 ರನ್ ಗಳಿಸಿದರು.ಆ ಮೂಲಕ ತಮ್ಮಲ್ಲಿನ ಕ್ರಿಕೆಟ್ ಆಟ ಇನ್ನೂ ಮುಗಿದಿಲ್ಲ ಎಂದು ಅವರು ಸೂಚ್ಯವಾಗಿ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: MI vs LSG: ಕನ್ನಡಿಗ ಕೆ.ಎಲ್ ರಾಹುಲ್ ಆರ್ಭಟಕ್ಕೆ ಸಚಿನ್, ಸೆಹ್ವಾಗ್ ದಾಖಲೆ ಧೂಳಿಪಟ

ಆದರೆ ಈಗ ಏನಪ್ಪಾ ಅಂದರೆ ಪತಿ ದಿನೇಶ್ ಕಾರ್ತಿಕ್ ಅವರ ಈ ಭರ್ಜರಿ ಪ್ರದರ್ಶನಕ್ಕೆ ಕಾರಣ ಏನು ಎನ್ನುವುದನ್ನು ನಾವು ನೋಡಲು ಹೊರಟಾಗ ನಮಗೆ ತಿಳಿದ ಸಂಗತಿ ಏನೆಂದರೆ ಪತ್ನಿ ದೀಪಿಕಾ ಪಲ್ಲಿಕಲ್ ಅವರು ಪಂದ್ಯಕ್ಕೂ ಮುನ್ನ ಪತಿಗಾಗಿ ವಿಶೇಷ ಪೋಸ್ಟ್ ವೊಂದನ್ನು ಮಾಡಿದ್ದಾರೆ.ಈ ಪೋಸ್ಟ್ ನಲ್ಲಿ ತಮ್ಮ ಮಕ್ಕಳು ಕಾರ್ತಿಕ್ ಜೊತೆ ಮಾತನಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.ಆ ಮೂಲಕ ಈಗ ಮಕ್ಕಳ ಜೊತೆಗೆ ಮುದ್ದಾಗಿ ಮಾತನಾಡಿ ಪಂದ್ಯಕ್ಕೆ ಭರ್ಜರಿ ಸಿದ್ಧವಾಗಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.ಇತ್ತೀಚೆಗಷ್ಟೇ ದೀಪಿಕಾ ಅವರು ವಿಶ್ವ ಟೂರ್ನಿಯೊಂದರಲ್ಲಿ ಆಡುತ್ತಿದ್ದಾಗ ಅದನ್ನು ಗೆಲ್ಲಲು ಹೋದಾಗ, ಡಿಕೆ ಅವಳಿ ಮಕ್ಕಳು ತಮ್ಮ ತಾಯಿಯನ್ನು ಟಿವಿಯಲ್ಲಿ ನೋಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ ನಂತರ ಹೊಸ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಜ್ಜು

ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಲ್ಲಿ ಡುಫ್ಲೆಸಿಸ್,ವಿರಾಟ್ ಕೊಹ್ಲಿ, ಹಾಗೂ ಅನುಜ್ ರಾವತ್ ಅವರ ವಿಕೆಟ್ ನ್ನು ಬೇಗನೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಮೂಲಕ ತಂಡವನ್ನು ಆಘಾತದಿಂದ ಪಾರು ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News