Who is Neetu Ganghas: ಇಂದು ನಡೆದ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ಇಬ್ಬರು ಹೆಣ್ಣು ಮಕ್ಕಳು ಚಿನ್ನದ ಪದಕ ಗೆದ್ದಿದ್ದಾರೆ. ಮೊದಲನೆಯದಾಗಿ, ಭಾರತದ ಹೆಮ್ಮೆಯ ಕುವರಿ ನೀತು ಘಂಘಾಸ್ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, ಸ್ವೀಟಿ ಬುರಾ 81 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.


COMMERCIAL BREAK
SCROLL TO CONTINUE READING

ಇನ್ನು ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌’ನ 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಬಾಕ್ಸರ್ ನೀತು ಘಂಘಾಸ್ ಮಂಗೋಲಿಯಾದ ಬಾಕ್ಸರ್ ಅನ್ನು ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.


ಇದನ್ನೂ ಓದಿ: IPL 2023: “ಮಾರಾಟ ಆಗದಿರುವುದೇ ಉತ್ತಮ!”: ವಿರಾಟ್ ಸಹ ಆಟಗಾರನ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಸಂಚಲನ!


ನೀತು ಘಂಘಾಸ್ ಹಿನ್ನೆಲೆ:


ನೀತು ಘಂಘಾಸ್ ಹುಟ್ಟಿದ್ದು ಜನನ 19 ಅಕ್ಟೋಬರ್ 2000. ಈಕೆ ಭಾರತದ ಖ್ಯಾತ ಬಾಕ್ಸರ್ ಆಗಿದ್ದು, ಕನಿಷ್ಠ ತೂಕ ವಿಭಾಗದಲ್ಲಿ 2023ರ ವಿಶ್ವ ಚಾಂಪಿಯನ್ ಮತ್ತು ಲೈಟ್ ಫ್ಲೈವೇಟ್‌ನಲ್ಲಿ ಎರಡು ಬಾರಿ ವಿಶ್ವ ಯುವ ಚಾಂಪಿಯನ್ ಆಗಿದ್ದಾರೆ. 2023ರ IBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಮತ್ತು 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕನಿಷ್ಠ ತೂಕದ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.


ನೀತು ಘಂಘಾಸ್ ಹರಿಯಾಣದ ಭಿವಾನಿ ಜಿಲ್ಲೆಯ ಧನನಾ ಗ್ರಾಮದಲ್ಲಿ ಜನಿಸಿದರು. ಆಕೆಯ ತಂದೆ ಜೈ ಭಗವಾನ್ ಚಂಡೀಗಢದ ಹರಿಯಾಣ ರಾಜ್ಯಸಭೆಯಲ್ಲಿ ಉದ್ಯೋಗಿಯಾಗಿದ್ದರು. ತಾಯಿಯ ಹೆಸರು ಮುಖೇಶ್ ದೇವಿ. ಇನ್ನು ನೀತುಗೆ ಅಕ್ಷಿತ್ ಕುಮಾರ್ ಎಂಬ ಕಿರಿಯ ಸಹೋದರನಿದ್ದಾನೆ.


ಶಾಲೆಯಲ್ಲಿರುವಾಗಲೇ ತನ್ನ ಸಹಪಾಠಿಗಳ ಜೊತೆ ಜಗಳವಾಡುತ್ತಿದ್ದರಂತೆ ನೀತು ಘಂಘಾಸ್. ಇದಕ್ಕೆ ಒಂದು ಪರ್ಯಾಯ ಮಾರ್ಗ ಕಂಡುಕೊಳ್ಳಲೆಂದೇ ಆಕೆಯನ್ನು ಬಾಕ್ಸಿಂಗ್‌ ತರಬೇತಿಗೆ ಕಳುಹಿಸಿದ್ದರಂತೆ. ಇನ್ನು ನೀತು ಘಂಘಾಸ್ ತನ್ನ 12 ನೇ ವಯಸ್ಸಿನಲ್ಲಿ ಔಪಚಾರಿಕವಾಗಿ ತರಬೇತಿಯನ್ನು ಪ್ರಾರಂಭಿಸಿದರು. ಆದರೆ ಮೊದಲ ಎರಡು ವರ್ಷಗಳಲ್ಲಿ ಯಾವುದೇ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ತನ್ನ ಪ್ರಗತಿಯ ಕೊರತೆಯಿಂದ ನಿರಾಶೆಗೊಂಡ ನೀತು ಘಂಘಾಸ್ ಕ್ರೀಡೆಯನ್ನು ತ್ಯಜಿಸಲು ನಿರ್ಧರಿಸಿದ್ದರಂತೆ. ಆದರೆ ನೀತು ತಂದೆ ಮಧ್ಯಪ್ರವೇಶಿಸಿ, ತನ್ನ ಮಗಳು ಬಾಕ್ಸರ್ ಆಗುವ ಕನಸುಗಳನ್ನು ನನಸಾಗಿಸಲು ತನ್ನ ಕೆಲಸದಿಂದ ಮೂರು ವರ್ಷಗಳ ವೇತನರಹಿತ ರಜೆ ತೆಗೆದುಕೊಂಡರು.


ಬಳಿಕ ತಮ್ಮ ಮಾಲೀಕತ್ವದ ಒಂದು ಸಣ್ಣ ಜಮೀನಿನಲ್ಲಿ ಸ್ವಲ್ಪ ಕೃಷಿಯನ್ನು ಮಾಡಿದರು. ಜೊತೆಗೆ ಇವೆಲ್ಲವನ್ನೂ ನೋಡಿಕೊಳ್ಳಲು ಸುಮಾರು ಆರು ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡರಂತೆ. ಅವರೇ ಖುದ್ದಾಗಿ ನಿಂತು ನೀತು ಅವರ ತರಬೇತಿ ಮತ್ತು ಆಹಾರಕ್ರಮವನ್ನು ನೋಡಿಕೊಳ್ಳುತ್ತಿದ್ದರು. ಇನ್ನು ಇದೇ ಸಮಯದಲ್ಲಿ ಖ್ಯಾತ ಭಿವಾನಿ ಬಾಕ್ಸಿಂಗ್ ಕ್ಲಬ್‌ನ ಸಂಸ್ಥಾಪಕ ವಿಜೇಂದರ್ ಸಿಂಗ್ ಅವರ ಮಾರ್ಗದರ್ಶಕರಲ್ಲಿ ಒಬ್ಬರಾದ ಖ್ಯಾತ ತರಬೇತುದಾರ ಜಗದೀಶ್ ಸಿಂಗ್ ಅವರು ನೀತು ಘಂಘಾಸ್ ಅವರನ್ನು ಗಮನಿಸಿದರು. ಕಡೆಗೆ ಶ್ರೀ ಗುರು ಗೋಬಿಂದ್ ಸಿಂಗ್ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿನಿಯಾಗಿದ್ದ ನೀತು, ಭಿವಾನಿ ಬಾಕ್ಸಿಂಗ್ ಕ್ಲಬ್‌’ಗೆ ಸೇರಿಕೊಂಡಳು. ತರಬೇತಿಗಾಗಿ ತನ್ನ ತಂದೆಯ ಸ್ಕೂಟರ್‌’ನಲ್ಲಿ ಪ್ರತಿದಿನ 40 ಕಿ.ಮೀ ಪ್ರಯಾಣಿಸುತ್ತಿದ್ದರಂತೆ.


2022ರ ಕಾಮನ್‌’ವೆಲ್ತ್ ಗೇಮ್ಸ್:


2022 ರ ಬರ್ಮಿಂಗ್‌ಹ್ಯಾಮ್‌’ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ 48 ವಿಭಾಗದಲ್ಲಿ (ಕನಿಷ್ಠ ತೂಕದ ವಿಭಾಗ) 7 ಆಗಸ್ಟ್ 2022 ರಂದು ಇಂಗ್ಲೆಂಡ್‌’ನ ಡೆಮಿ-ಜೇಡ್ ರೆಸ್ಟನ್‌’ರನ್ನು 5-0 ರಿಂದ ಸೋಲಿಸಿದ ನೀತು ಘಂಘಾಸ್ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದರು.


ಚಿನ್ನದ ಪದಕಗಳ ಗರಿಮೆ:


2017ರಲ್ಲಿ ಬಲ್ಗೇರಿಯಾದಲ್ಲಿ ನಡೆದ ಬಾಲ್ಕನ್ ಯೂತ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನಲ್ಲಿ ಚಿನ್ನದ ಪದಕ


2017ರಲ್ಲಿ ಗುವಾಹಟಿಯಲ್ಲಿ ನಡೆದ ಮಹಿಳಾ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ನಲ್ಲಿ ಚಿನ್ನದ ಪದಕ


2018ರಲ್ಲಿ ಥೈಲ್ಯಾಂಡ್’ನಲ್ಲಿ ನಡೆದ ಏಷ್ಯನ್ ಯೂತ್ ಚಾಂಪಿಯನ್‌ಶಿಪ್’ನಲ್ಲಿ ಚಿನ್ನದ ಪದಕ


2018ರಲ್ಲಿ ಸೆರ್ಬಿಯಾದ ಗೋಲ್ಡನ್ ಗ್ಲೋವ್’ನಲ್ಲಿ ನಡೆದ ವೊಜ್ವೊಡಿನಾ ಯೂತ್ ಮೆನ್ & ವುಮೆನ್ ಬಾಕ್ಸಿಂಗ್ ಟೂರ್ನಮೆಂಟ್’ನಲ್ಲಿ ಚಿನ್ನ


2018ರಲ್ಲಿ ಹಂಗೇರಿಯಲ್ಲಿ ನಡೆದ ಯುವ ಮಹಿಳಾ ವಿಶ್ವ ಚಾಂಪಿಯನ್‌ಶಿಪ್’ನಲ್ಲಿ ಚಿನ್ನ


2022ರಲ್ಲಿ ಬಲ್ಗೇರಿಯಾದಲ್ಲಿ ನಡೆದ ಸ್ಟ್ರಾಂಡ್ಜಾ ಮೆಮೋರಿಯಲ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಿನ್ನ


2022ರಲ್ಲಿ ಇಂಗ್ಲೆಂಡ್’ನಲ್ಲಿ XXII ಕಾಮನ್‌ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕ


2023ರಲ್ಲಿ ನವದೆಹಲಿಯಲ್ಲಿ ನಡೆದ IBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನದ ಪದಕ


ಇದನ್ನೂ ಓದಿ: IPL 2023ರಲ್ಲಿ RCB ಬಲ ಮತ್ತು ವೀಕ್ನೇಸ್ ಏನು ಗೊತ್ತಾ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.