IPL 2023ರಲ್ಲಿ RCB ಬಲ ಮತ್ತು ವೀಕ್ನೇಸ್ ಏನು ಗೊತ್ತಾ? ಇದೇ ಪ್ಲೇಯಿಂಗ್ XI ಅನುಸರಿಸಿದ್ರೆ “ಈ ಸಲ ಕಪ್ ನಮ್ದೆ”

Royal Challengers Bangalore Strength and Weakness: ಆರ್‌ ಸಿ ಬಿ ತಂಡವನ್ನು ಈಗ ನೋಡೋವಾಗ ಚೆನ್ನಾಗಿ ಎಣ್ಣೆ ಹಾಕಿ, ಈಗಷ್ಟೇ ಸಿದ್ಧ ಮಾಡಿದ ಯಂತ್ರದಂತೆ ಕಾಣುತ್ತಿದೆ. ಆದರೆ ಬಲ ಪ್ರದರ್ಶನ ಕಣಕ್ಕಿಳಿದ ಬಳಿಕವೇ ತಿಳಿದುಬರಬೇಕಿದೆ. ಈ ಋತುವಿನಲ್ಲಿ ಯೋಗ್ಯ ಫಾರ್ಮ್‌ನಲ್ಲಿರುವ ಕೆಲವು ಪ್ರಭಾವಶಾಲಿ ಆಟಗಾರರನ್ನು ಆರ್‌ ಸಿ ಬಿ ತಂಡ ಹೊಂದಿದೆ.

Written by - Bhavishya Shetty | Last Updated : Mar 25, 2023, 10:08 PM IST
    • ಕಳೆದ ಋತುವಿನಲ್ಲಿ ಆರ್‌ ಸಿ ಬಿ ತಂಡವು ನಾಯಕತ್ವದಲ್ಲಿ ಬದಲಾವಣೆಯನ್ನು ಮಾಡಿತು.
    • ವಿರಾಟ್ ಕೊಹ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.
    • ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್‌’ಗೆ ಸ್ಕಿಪ್ಪರ್ ಆಗಿ ನೇಮಕಗೊಂಡರು.
IPL 2023ರಲ್ಲಿ RCB ಬಲ ಮತ್ತು ವೀಕ್ನೇಸ್ ಏನು ಗೊತ್ತಾ? ಇದೇ ಪ್ಲೇಯಿಂಗ್ XI ಅನುಸರಿಸಿದ್ರೆ “ಈ ಸಲ ಕಪ್ ನಮ್ದೆ” title=
RCB Strength and Weakness

Royal Challengers Bangalore Strength and Weakness: ಈ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಅದೃಷ್ಟವನ್ನು ಬದಲಾಯಿಸುವ ನಿರೀಕ್ಷೆಯಲ್ಲಿದೆ. ಆರ್‌’ಸಿಬಿಯ ಸ್ಟಾರ್-ಸ್ಟಡ್ ಫ್ರಾಂಚೈಸಿ ಇದುವರೆಗೆ ಐಪಿಎಲ್ ಗೆದ್ದಿಲ್ಲ. ಎರಡು ಬಾರಿ ಐಪಿಎಲ್‌’ನ ಫೈನಲ್‌ ಹಂತದಲ್ಲಿದ್ದರೂ ಸಹ ಅದು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: IPL 2023: “ಮಾರಾಟ ಆಗದಿರುವುದೇ ಉತ್ತಮ!”: ವಿರಾಟ್ ಸಹ ಆಟಗಾರನ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಸಂಚಲನ!

ಕಳೆದ ಋತುವಿನಲ್ಲಿ ಆರ್‌ ಸಿ ಬಿ ತಂಡವು ನಾಯಕತ್ವದಲ್ಲಿ ಬದಲಾವಣೆಯನ್ನು ಮಾಡಿತು, ವಿರಾಟ್ ಕೊಹ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್‌’ಗೆ ಸ್ಕಿಪ್ಪರ್ ಆಗಿ ನೇಮಕಗೊಂಡರು. ಅವರು ಈ ವರ್ಷ ಮೈದಾನಕ್ಕಿಳಿಯುತ್ತಿದ್ದಂತೆ, ಪಂದ್ಯಾವಳಿಯಲ್ಲಿ ಬಲವಾದ ಪ್ರಯತ್ನವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಅವರ ಮೊದಲ ನಾಯಕತ್ವದಲ್ಲೇ IPL ಪ್ರಶಸ್ತಿ ಗೆಲ್ಲಬೇಕೆಂಬ ಹಂಬಲ ಅವರಲ್ಲಿದೆ.

ಆರ್‌ ಸಿ ಬಿ ತಂಡದ ಬಲ:

ಆರ್‌ ಸಿ ಬಿ ತಂಡವನ್ನು ಈಗ ನೋಡೋವಾಗ ಚೆನ್ನಾಗಿ ಎಣ್ಣೆ ಹಾಕಿ, ಈಗಷ್ಟೇ ಸಿದ್ಧ ಮಾಡಿದ ಯಂತ್ರದಂತೆ ಕಾಣುತ್ತಿದೆ. ಆದರೆ ಬಲ ಪ್ರದರ್ಶನ ಕಣಕ್ಕಿಳಿದ ಬಳಿಕವೇ ತಿಳಿದುಬರಬೇಕಿದೆ. ಈ ಋತುವಿನಲ್ಲಿ ಯೋಗ್ಯ ಫಾರ್ಮ್‌ನಲ್ಲಿರುವ ಕೆಲವು ಪ್ರಭಾವಶಾಲಿ ಆಟಗಾರರನ್ನು ಆರ್‌ ಸಿ ಬಿ ತಂಡ ಹೊಂದಿದೆ. ವಿರಾಟ್ ಕೊಹ್ಲಿ T20 ವಿಶ್ವಕಪ್‌’ನಿಂದ T20 ಸ್ವರೂಪದಲ್ಲಿ ಭಾರತಕ್ಕಾಗಿ ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ಇನ್ನೊಂದೆಡೆ ಫಾಫ್ ಡು ಪ್ಲೆಸಿಸ್ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಜೊತೆಗೆ, ಮೈಕೆಲ್ ಬ್ರೇಸ್‌ವೆಲ್, ಮನೋಜ್ ಅವರೂ ಕೂಡ ಇದ್ದಾರೆ. ಬೌಲಿಂಗ್‌ನ ವಿಷಯದಲ್ಲಿ, ಮೊಹಮ್ಮದ್ ಸಿರಾಜ್, ಅದ್ಭುತ ಫಾರ್ಮ್‌’ನಲ್ಲಿದ್ದಾರೆ. ಆರ್‌ ಸಿ ಬಿ ಯೋಗ್ಯ ತಂಡವನ್ನು ಹೊಂದಿದ್ದು, ಪ್ಲಾನ್ ಪ್ರಕಾರ ಮುಂದುವರೆದರೆ ಈ ಸಲ ಕಪ್ ಆರ್ ಸಿ ಬಿದ್ದೇ ಎನ್ನಬಹುದು.

ಆರ್‌ ಸಿ ಬಿ ದೌರ್ಬಲ್ಯ:

ಆರ್‌ ಸಿ ಬಿಯ ಏಕೈಕ ಸಮಸ್ಯೆ ಎಂದರೆ ಇಕ್ಕಟ್ಟಿನ ಸಮಯದಲ್ಲಿ ಒಗ್ಗಟ್ಟು ಮತ್ತು ಸಾಮರ್ಥ್ಯದ ಕೊರತೆ. ಈ ಹಿಂದೆ ಪ್ರಮುಖ ಪಂದ್ಯಗಳಲ್ಲಿ ಎಡವಿದ್ದು ಇದೇ ಕಾರಣದಿಂದ. RCB ಯಾವಾಗಲೂ ಯೋಗ್ಯ ತಂಡವನ್ನು ಹೊಂದಿದ್ದರೂ ಸಹ ಒಗ್ಗಟ್ಟು ಮತ್ತು ಏಕತೆಯ ಕೊರತೆಯು ಅವರಿಗೆ ಶಾಪವಾಗಿ ಪರಿಣಮಿಸಿದ್ದುಂಟು.

RCB ಸ್ಕ್ವಾಡ್ ಮತ್ತು RCB ಅತ್ಯುತ್ತಮ ಪ್ಲೇಯಿಂಗ್ XI ಪಟ್ಟಿ ಹೀಗಿದೆ

RCB ಪೂರ್ಣ ತಂಡ:

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ (ನಾ), ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ರಜತ್ ಪಾಟಿದಾರ್, ಅನುಜ್ ರಾವತ್, ಆಕಾಶ್ ದೀಪ್, ಜೋಶ್ ದೀಪ್, ಆಕಾಶ್ ದೀಪ್ , ಮಹಿಪಾಲ್ ಲೋಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್‌ವೆಲ್

ಇದನ್ನೂ ಓದಿ: IPL 2023: ನಾಳೆ ಐಪಿಎಲ್ ಟ್ರೋಫಿ ಬೆಂಗಳೂರಿಗೆ 

IPL ಸೀಸನ್ 16ರ RCB ಬೆಸ್ಟ್ ಪ್ಲೇಯಿಂಗ್ XI:

ಫಾಫ್ ಡು ಪ್ಲೆಸಿಸ್ (ನಾ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News